Gas Cylinder Discount: ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಈ ಚಿಕ್ಕ ಕೆಲಸ ಮಾಡಿ, ನಿಮಗೆ ಸಿಗಲಿದೆ 100 ರೂ. ಡಿಸ್ಕೌಂಟ್.

ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಈ ಚಿಕ್ಕ ಕೆಲಸ ಮಾಡಿದರೆ ನಿಮಗೆ 100 ರೂ. ಡಿಸ್ಕೌಂಟ್

Gas Cylinder Discount On This Application: ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ಬಾರಿ ಏರಿಕೆಯಾಗಿದೆ. ಗ್ಯಾಸ್ ಸಿಲಿಂದ ಗಳ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಸರಕಾರ ಉಜ್ವಲ ಯೋಜನೆಯನ್ನು ಕೂಡ ಪರಿಚಯಿಸಿದೆ. ಈ ಯೋಜನೆಯಡಿ ಫಲಾನುಭವಿಗಳು ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಇದೀಗ ಗ್ಯಾಸ್ ಸಿಲಿಂಡರ್ ಓರ್ಡರ್ ಮಾಡುವವರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಹೌದು, ನೀವು ಗ್ಯಾಸ್ ಸಿಲಿಂಡರ್ ಅನ್ನು ಆರ್ಡರ್ ಮಾಡಲು ಇನ್ನುಮುಂದೆ ಕಷ್ಟಪಡಬೇಕಿಲ್ಲ ಹಾಗೆಯೆ ಅಗ್ಗದ ಬೆಲೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದು. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಏನು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.

Gas Cylinder Discount On This Application
Image Credit: Business-standard

ಗ್ಯಾಸ್ ಸಿಲಿಂಡರ್ ಬುಕ್ ಮಾಡುವಾಗ ಈ ಚಿಕ್ಕ ಕೆಲಸ ಮಾಡಿ
Paytm ಗ್ಯಾಸ್ ಸಿಲಿಂಡರ್ ಬುಕಿಂಗ್‌ ಗೆ ಅವಕಾಶವನ್ನು ನೀಡುತ್ತಿದೆ. ನೀವು ಹೊಸ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಬಯಸಿದರೆ ನೀವು ಇದನ್ನು ಅನುಸರಿಸಬಹುದು. ನೀವು Paytm ನ ಸೈಟ್‌ ಗೆ ಭೇಟಿ ನೀಡಿದಾಗ ಪ್ರತಿ ತಿಂಗಳ ಮೊದಲ ಮೂರು ರೀಚಾರ್ಜ್‌ ಗಳಲ್ಲಿ ಕ್ಯಾಶ್‌ ಬ್ಯಾಕ್ ನೀಡಲಾಗುತ್ತದೆ ಎಂದು ನೀವು ಕಾಣಬಹುದು. ಆದರೆ ಎಲ್ಲರಿಗೂ ಇದು ಸಿಗುವುದಿಲ್ಲ. ಇದರಲ್ಲಿ ನೀವು ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕು.

ಗ್ಯಾಸ್ ಸಿಲಿಂಡರ್ ಮೇಲೆ ನಿಮಗೆ ಸಿಗಲಿದೆ 100 ರೂ. ಡಿಸ್ಕೌಂಟ್
Paytm ಪ್ರಕಾರ, ಈ ಕೊಡುಗೆಯು ಮೊಬೈಲ್, DTH ರೀಚಾರ್ಜ್, ವಿದ್ಯುತ್, ಮೊಬೈಲ್, ಗ್ಯಾಸ್ ಬಿಲ್ Paytm ಮತ್ತು ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಅನ್ವಯಿಸುತ್ತದೆ. ಇದರ ಅಡಿಯಲ್ಲಿ ಬಿಲ್ ಪಾವತಿಸಿದ ನಂತರ, ನೀವು ರೂ. 10 ರಿಂದ ರೂ. 100 ರವರೆಗಿನ ಕ್ಯಾಶ್ಬ್ಯಾಕ್ ಪಡೆಯಬಹುದು. ಇದರಲ್ಲಿ ಪ್ರತಿಯೊಬ್ಬ ಬಳಕೆದಾರರೂ ವಿಭಿನ್ನ ಕೊಡುಗೆಗಳನ್ನು ಪಡೆಯುತ್ತಾರೆ. ಆದ್ದರಿಂದ ಕ್ಯಾಶ್ಬ್ಯಾಕ್ ಮೊತ್ತವು ಬದಲಾಗಬಹುದು. Paytm ನ ಈ ವಿಶೇಷ ಕೊಡುಗೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು, ನಿಮ್ಮ ಪಾವತಿ ಮೊತ್ತವು ರೂ. 48 ಅಥವಾ ಹೆಚ್ಚಿನದಾಗಿರಬೇಕು.

Gas Cylinder Discount
Image Credit: Informal Newz

ನೀವು Amazon Pay ಸಹಾಯದಿಂದ ಪಾವತಿ ಮಾಡಬಹುದು. ಇದರಲ್ಲಿ ನಿಮಗೆ ಭರ್ಜರಿ ಆಫರ್‌ ಗಳೂ ಸಿಗುತ್ತಿವೆ. ಅಮೆಜಾನ್‌ ನಿಂದ ಗ್ಯಾಸ್ ಸಿಲಿಂಡರ್ ಬುಕಿಂಗ್ ಮಾಡಿದರೆ 50 ರೂ. ವರೆಗೆ ಕ್ಯಾಶ್‌ ಬ್ಯಾಕ್ ನೀಡಲಾಗುತ್ತಿದೆ. ಇದರ ವಿಶೇಷವೆಂದರೆ ನೀವು ಕರೆ ಮಾಡುವಲ್ಲಿಯೂ ಸಮಯ ವ್ಯರ್ಥ ಮಾಡಬೇಕಾಗಿಲ್ಲ. ಅನೇಕ ಜನರು ಅದನ್ನು ಬಳಸುತ್ತಿದ್ದಾರೆ. ನೀವು ಎಲ್ಲಿ ಬೇಕಾದರೂ ಕ್ಯಾಶ್‌ ಬ್ಯಾಕ್ ಅನ್ನು ಬಳಸಬಹುದು. ಇದನ್ನು ಬಿಲ್ ಪಾವತಿ ಮತ್ತು ರೀಚಾರ್ಜ್ ಮಾಡಲು ಸಹ ಬಳಸಬಹುದು.

Join Nadunudi News WhatsApp Group

Gas Cylinder Latest Update
Image Credit: Moneycontrol

Join Nadunudi News WhatsApp Group