LPG Update: LPG ಗ್ಯಾಸ್ ಬಳಸುವವರಿಗೆ ಡಿ 31 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಬಂದ್ ಆಗಲಿದೆ ಸಬ್ಸಿಡಿ ಹಣ.

LPG ಗ್ಯಾಸ್ ಸಿಲಿಂಡರ್ ಬಳಕೆ ಮಾಡುವವರು ಡಿಸೇಂಬರ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಸಬ್ಸಿಡಿ ಹಣ ರದ್ದು.

Gas Cylinder E- KYC Mandatory: ದೇಶದಲ್ಲಿ  ಜನರು ಗ್ಯಾಸ್ ಸಿಲಿಂಡರ್ (Cylinder) ಬೆಲೆಯ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ದೇಶದಲ್ಲಿ ದಿನ ಬಳಕೆಯ ಗ್ಯಾಸ್ ಸಿಲಿಂಡರ್ ಪ್ರತಿ ತಿಂಗಳು ಪರಿಷ್ಕರಣೆ ಆಗುತ್ತಲೇ ಇರುತ್ತದೆ. ಜನರು ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. ಆದರೆ ದೇಶದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಿಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆಯಾಗಿಲ್ಲ.  ಈ ತಿಂಗಳು ಕೂಡ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ.

ಇನ್ನು ಗ್ಯಾಸ್ ಸಿಲಿಂಡರ್ ಬೆಲೆಯಿಂದ ಕಂಗಾಲಾಗಿರುವ ಜನತೆಗೆ ಕೇಂದ್ರ ಸರ್ಕಾರ Subsidy ಮೂಲಕ ಒಂದಿಷ್ಟು ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತಿದೆ. PMU ಯೋಜನೆಯಡಿ ಕೇಂದ್ರದ ಮೋದಿ ಸರ್ಕಾರ ಅರಹ ಫಲಾನುಭವಿಗಳಿಗೆ Gas Cylinder ಸಬ್ಸಿಡಿಯನ್ನು ನೀಡುತ್ತಿದೆ. ಇನ್ನು ನೀವು ಕೇಂದ್ರದ ಸುಬಸಿದಿಯ ಲಾಭವನ್ನು ಪಡೆಯಲು ಈ ಕೆಲಸವನ್ನು ಈ ತಿಂಗಳ ಅಂತ್ಯದೊಳಗೆ ಮಾಡುವುದು ಕಡ್ಡಾಯವಾಗಿದೆ. ಇಲ್ಲದವಾದರೆ ನೀವು ಸಬ್ಸಿಡಿಯಿಂದ ವಂಚಿತರಾಗಬೇಕೆಗುತ್ತದೆ ಅನ್ನುವುದರ ಬಗ್ಗೆ ನಿಮಗೆ ತಿಳಿದಿರಲಿ.

Gas Cylinder E- KYC Update
Image Credit: Informal Newz

LPG ಗ್ಯಾಸ್ ಬಳಸುವವರಿಗೆ ಡಿ 31 ರೊಳಗೆ ಈ ಕೆಲಸ ಮಾಡಿ
LPG Gas ಸಂಪರ್ಕದ ಮೇಲೆ ಸರ್ಕಾರ ಸಬ್ಸಿಡಿ ಪ್ರಯೋಜನವನ್ನು ನೀಡುತ್ತಿದೆ. ನೀವು ಸರ್ಕಾರದ ಈ ಪ್ರಯೋಜನವನ್ನು ಪಡೆಯಲು ಮುಖ್ಯವಾಗಿ LPG ಸಂಪರ್ಕವನ್ನು E- KYC  ಮಾಡುವುದು ಕಡ್ಡಾಯವಾಗಿದೆ. LPG ಸಂಪರ್ಕವನ್ನು E- KYC ಮಾಡಿದರೆ ಮಾತ್ರ ನೀವು LPG Subsidy ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

ನೀವು LPG ಸಂಪರ್ಕವನ್ನು E- KYC ಮಾಡಲು ಹೆಚ್ಚು ಚಿಂತಿಸುವ ಅಗತ್ಯ ಇಲ್ಲ. ನೀವು ಮನೆಯಲ್ಲಿಯೇ ಕುಳಿತು ಸುಲಭ ವಿಧಾನದ ಮೂಲಕ ಆಧಾರ್ ಲಿಂಕ್ ಮಾಡಿಕೊಳ್ಳಬಹುದು. LPG ಸಂಪರ್ಕಕ್ಕೆ E- KYC ಮಾಡಲು ಈ ಕೆಳಗಿನ ಸುಲಭ ವಿಧಾನವನ್ನು ಅನುಸರಿಸಿ.

Gas Cylinder E- KYC Mandatory
Image Credit: DNA India

Gas Cylinder E- KYC ಮಾಡುವ ವಿಧಾನ ಹೇಗೆ..?
*UIDAI ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡುವ ಮೂಲಕ LPG ಗ್ಯಾಸ್ ಸಂಪರ್ಕವನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡಿಕೊಳ್ಳಬಹುದು.

Join Nadunudi News WhatsApp Group

* ವೆಬ್ ಸೈಟ್ ತೆರೆದ ಬಳಿಕ ರೆಸಿಡೆಂಟ್ ಸೆಲ್ಫ್ ಸೀಡಿಂಗ್ ವೆಬ್ ಪುಟಕ್ಕೆ ಭೇಟಿನೀಡಿ. ಇದರ ನಂತರ ಅಲ್ಲಿ ಕೇಳಲಾದ ಮಾಹಿತಿಯನ್ನು ನಮೂದಿಸಿ.

*ಇಲ್ಲಿ LPG ಅನ್ನು ಲಾಭದ ಪ್ರಕಾರದಲ್ಲಿ ಆಯ್ಕೆಮಾಡಿ. ಇದರ ನಂತರ, IOCL, BPCL ಮತ್ತು HPCL ನಂತಹ ಗ್ಯಾಸ್ ಒದಗಿಸುವ ಕಂಪನಿಗಳಲ್ಲಿ ಒಂದನ್ನು ಆಯ್ಕೆಮಾಡಿ.

*ಇದಾದ ನಂತರ ವಿತರಕರ ಪಟ್ಟಿ ನಿಮಗೆ ಕಾಣಿಸುತ್ತದೆ. ಇದರಿಂದ ನಿಮ್ಮ ವಿತರಕರ ಹೆಸರನ್ನು ಆಯ್ಕೆಮಾಡಿ.

*ಈಗ ನಿಮ್ಮ ಗ್ಯಾಸ್ ಸಂಪರ್ಕ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸಿ.

*ಮಾಹಿತಿ ಪೂರ್ಣಗೊಳಿಸಿದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

*OTP ನಮೂದಿಸಿದ ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು LPG ಸಂಪರ್ಕದೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Join Nadunudi News WhatsApp Group