LPG Cylinder: LPG ವಿಷಯವಾಗಿ ಇನ್ನೊಂದು ಘೋಷಣೆ, ಈ ಜನರಿಗೆ ಕೇವಲ 450 ರೂಪಾಯಿಗೆ ಸಿಗಲಿದೆ ಗ್ಯಾಸ್

ಇನ್ಮುಂದೆ ಈ ಜನರಿಗೆ ಸಿಗಲಿದೆ 450 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಕೇಂದ್ರದ ಆದೇಶ

LPG Gas Cylinder Available At 450 Rs: ಸದ್ಯ ದೇಶದಲ್ಲಿ ಹೊಸ ವರ್ಷದ ಆರಂಭ ಅನೇಕ ಹೊಸ ಹೊಸ ಬದಲಾವಣೆಯನ್ನು ತಂದಿದೆ. ಕಳೆದ ವರ್ಷದಲ್ಲಿ ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸಿದಂತಹ ಜನರಿಗೆ ಈ ಬಾರಿಯಾದರೂ ಬೆಲೆ ಇಳಿಕೆ ಸುದ್ದಿ ಸಿಗುತ್ತಾ ಎನ್ನುವ ನಿರೀಕ್ಷೆಯಿದೆ.

ಹೀಗಿರುವಾಗ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಂತಹ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಇಳಿಕೆಯಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಜನಸಮಾನ್ಯರಿಗೆ ಖುಷಿ ನೀಡಿದೆ. ಸದ್ಯ LPG ವಿಷಯವಾಗಿ ಇನ್ನೊಂದು ಘೋಷಣೆ ಹೊರಬಿದ್ದಿದೆ. ಸರ್ಕಾರ ಇಂತಹ ಜನರಿಗೆ ಕೇವಲ 450 ರೂ. ಗಳನ್ನೂ LPG ಗ್ಯಾಸ್ ಸಿಲಿಂಡರ್ ಅನ್ನು ನೀಡಲು ಮುಂದಾಗಿದೆ.

LPG Gas Cylinder price update
Image Credit: Original Source

LPG ವಿಷಯವಾಗಿ ಇನ್ನೊಂದು ಘೋಷಣೆ
ಇತ್ತೀಚೆಗಷ್ಟೇ ದೇಶದ ಕೆಲ ಪ್ರಮುಖ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ರಾಜಸ್ಥಾನ ಸರ್ಕಾರ ಜನರಿಗೆ ಚುನಾವಣೆಯ ಪ್ರಯುಕ್ತ ತನ್ನ ಪ್ರಣಾಳಿಕೆಯಲ್ಲಿ ಸಾಕಷ್ಟು ಘೋಷಣೆಯನ್ನು ಹೊರಡಿಸಿದೆ. ಈ ವೇಳೆ ಘೋಷಿಸಿದ್ದ ಭರವಸೆಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯು ಒಂದಾಗಿದೆ. ಚುನವಣಾ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 450 ರೂ. ಗೆ ನೀಡುವುದಾಗಿ ಘೋಷಣೆ ಹೊರಡಿಸಲಾಗಿದೆ. ಅದರಂತೆ ಸದ್ಯ ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಿಂದಲೇ ಗ್ಯಾಸ್ ಸಿಲಿಂಡರ್ ಅನ್ನು 450 ರೂ. ಗೆ ನೀಡಲು ಮುಂದಾಗಿದೆ.

ಈ ಜನರಿಗೆ ಕೇವಲ 450 ರೂಪಾಯಿಗೆ ಸಿಗಲಿದೆ ಗ್ಯಾಸ್
ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು 450 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವ ಭರವಸೆಯನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. ರಾಜಸ್ಥಾನದ ಜನರು ಗ್ಯಾಸ್ ಸಿಲಿಂಡರ್ ಅನ್ನು ಅತಿ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಖರೀದಿಸಿವ ಅವಕಾಶ ರಾಜ್ಯದ ಜನತೆಗೆ ಲಭಿಸಿದೆ.

LPG gas Cylinder Price Update
Image Credit: Original Source

BPL Ration Card ಹೊಂದಿರುವವರು ಕೇವಲ 450 ರೂ. ಗೆ ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಳ್ಳಬಹುದು. ಈ ಯೋಜನೆಯಡಿ ಎಲ್ಲಾ ಫಲಾನುಭವಿಗಳು ಒಂದು ವರ್ಷದಲ್ಲಿ 12 ಸಿಲಿಂಡರ್‌ ಗಳನ್ನು ಕಡಿಮೆ ದರದಲ್ಲಿ ಪಡೆಯುತ್ತಾರೆ. ಅಂದರೆ ಯೋಜನೆಯ ಫಲಾನುಭವಿಗಳು ಒಂದು ವರ್ಷದಲ್ಲಿ 12 ಬಾರಿ ಸಿಲಿಂಡರ್ ಅನ್ನು 450 ರೂ.ಗೆ ರೀಫಿಲ್ ಮಾಡಲು ಸಾಧ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group