Cylinder Inspection : ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಇನ್ನುಮುಂದೆ ಪಂಚವಾರ್ಷಿಕ ತಪಾಸಣೆ ಕಡ್ಡಾಯ, ಕೇಂದ್ರದ ಆದೇಶ

ಗೃಹ ಬಳಕೆಯ ಗಾಸ್ ಸಿಲಿಂಡರ್ ಗಳಿಗೆ ಪಂಚವಾರ್ಷಿಕ ತಪಾಸಣೆ ಕಡ್ಡಾಯವಾಗಿದೆ.

Gas Cylinder Inspection Every Five Years: ಕೇಂದ್ರ ಮೋದಿ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ (Gas Cylinder) ನೀಡಿದ ಸಮಯದಿಂದ ಮನೆ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಹೆಚ್ಚಿದೆ ಎನ್ನಬಹುದು. ಗ್ಯಾಸ್ ಸಿಲಿಂಡರ್ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ.

ಇನ್ನು ಗ್ಯಾಸ್ ಸಿಲಿಂಡರ್ ಬಳಸುವಾಗ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಗ್ಯಾಸ್ ಬಳಸುವಾಗ ಸ್ವಲ್ಪ ಅಸಡ್ಡೆ ತೋರಿದರು ಕೂಡ ದೊಡ್ಡ ಅನಾಹುತ ಉಂಟಾಗುತ್ತದೆ. Gas Cylinder ಬಳಸುವ ಪ್ರತಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ನೀವು ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಿದ್ದರೆ ಈ ಕೆಲಸವನ್ನು ಮಾಡುವುದು ಅಗತ್ಯ.

Gas Cylinder Inspection Every Five Years
Image Credit: Online38media

ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಮಹತ್ವದ ಮಾಹಿತಿ
ಗ್ಯಾಸ್ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಕೂಡ ಸಿಲಿಂಡರ್ ಸಂಪರ್ಕದ ಸುರಕ್ಷತೆಯ ಬಗ್ಗೆ ಗಮನ ಹರಿಸುವುದು ಅವಶ್ಯಕ. ಗ್ಯಾಸ್ ಸಿಲಿಂಡರ್ ಬಳಸುವವರು “ಪಂಚವಾರ್ಷಿಕ ಅನಿಲ ತಪಾಸಣೆಯ” ಪ್ರಯೋಜನವನ್ನು ಪಡೆಯುವುದು ಉತ್ತಮ. ಪಂಚವಾರ್ಷಿಕ ತಪಾಸಣೆಯನ್ನು ಗ್ರಾಹಕರ ಅನಿಲ ಸಿಲಿಂಡರ್ ಸಂಪರ್ಕದ ಸುರಕ್ಷತೆಗಾಗಿ ಮಾಡಲಾಗುತ್ತದೆ.

ಸುರಕ್ಷಿತ ಅನಿಲ ಸಿಲಿಂಡರ್ ಗಳಿಗೆ ಮಾತ್ರ ಅನಿಲ ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಅಸುರಕ್ಷಿತ ಅನಿಲ ಸಿಲಿಂಡರ್ ಸಂಪರ್ಕಗಳಿಗೆ ಭಾರತ್ ಗ್ಯಾಸ್ ಕಂಪನಿ ಭಾರತ್ ಗ್ಯಾಸ್ ನಿಯಮದ ಪ್ರಕಾರ, ಸಂಪರ್ಕವನ್ನು ಸ್ಥಗಿತಗೊಳಿಸುತ್ತದೆ.

Gas Cylinder Inspection
Image Credit: Thehindu

ಗೃಹ ಬಳಕೆಯ ಗಾಸ್ ಸಿಲಿಂಡರ್ ಗಳಿಗೆ ಪಂಚವಾರ್ಷಿಕ ತಪಾಸಣೆ ಕಡ್ಡಾಯ
ಇನ್ನು ಭಾರತ್ ಗ್ಯಾಸ್ ಪಂಚವಾರ್ಷಿಕ ತಪಾಸಣೆ ಕಾರ್ಯನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಿರುತ್ತದೆ. ಪ್ರತಿ ಗೃಹ ಬಳಕೆಯ ಅನಿಲ ಸಂಪರ್ಕದ ಮನೆಗೆ ಸಿಬ್ಬಂದಿಗಳು ಭೇಟಿನೀಡಿ ಅನಿಲ ಸಿಲಿಂಡರ್ ಸುರಕ್ಷತೆಯ ಬಗ್ಗೆ ಜಾಗರೂಕತೆ ಮೂಡಿಸಬೇಕು.

Join Nadunudi News WhatsApp Group

ನಿಮ್ಮ ಮನೆಯ ಅನಿಲ ಸಿಲಿಂಡರ್ ಗಳು ಸುರಕ್ಷಿತ ಅಥವಾ ಅಸುರಕ್ಷಿತ ಎಂದು ಚೆಕ್ ಲಿಸ್ಟ್ ನಲ್ಲಿ ವರದಿ ನೀಡಲಾಗುತ್ತದೆ. ಇದಕ್ಕಾಗಿ ಗ್ರಾಹಕರು ರೂ. 236 ನೀಡಿ ರಶೀದಿಯನ್ನು ಪಡೆಯಬೇಕಾಗುತ್ತದೆ. ಸಿಬ್ಬಂದಿಗಳು ಗ್ರಾಹಕರ ಸ್ಟವ್ ಮತ್ತು ರಬ್ಬರ್ ಟಬ್ ಗಳನ್ನೂ ಪರಿಶೀಲಿಸಿ ಸುರಕ್ಷಿತ ಅಥವಾ ಅಸುರಕ್ಷಿತ ಬಗ್ಗೆ ಮಾಹಿತಿ ನೀಡುತ್ತವೆ. ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದರೆ ಸುರಕ್ಷತೆಗಾಗಿ ಈ ಪಂಚವಾರ್ಷಿಕ ತಪಾಸಣೆ ಕಡ್ಡಾಯಗೊಳಿಸಲಾಗಿದೆ.

Join Nadunudi News WhatsApp Group