Gas Cylinder: 9 ವರ್ಷಗಳ ಹಿಂದಿನ ದರದಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್, ಗ್ಯಾಸ್ ಸಿಲಿಂಡರ್ ದರದಲ್ಲಿ ದೊಡ್ಡ ಬದಲಾವಣೆ.
ಗ್ಯಾಸ್ ಸಿಲಿಂಡರ್ ದರ ಸೆಪ್ಟೆಂಬರ್ ತಿಂಗಳಲ್ಲಿ ಇಳಿಕೆ ಆಗಿದ್ದು ಈಗ ಕಡಿಮೆ ಬೆಲೆಗೆ ಗ್ಯಾಸ್ ಸಿಗಲಿದೆ.
Gas Cylinder Latest Price Update: ಪ್ರತಿ ತಿಂಗಳ ಆರಂಭದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆ ಪರಿಷ್ಕರಣೆ ಆಗುತ್ತದೆ. ತಿಂಗಳ ಆರಂಭದಲ್ಲಿ ಗ್ರಾಹಕರು ಗ್ಯಾಸ್ ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷಿಸುತ್ತಾರೆ. ಇನ್ನು ಹಣದುಬ್ಬರತೆಯಿಂದ ಬೇಸತ್ತಿರುವ ಜನರಿಗೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ. ಈಗಾಗಲೇ ಗ್ಯಾಸ್ ಬೆಲೆ ಇಳಿಕೆ ಮಾಡುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಸರಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ. ತೈಲ ಮಾರುಕಟ್ಟೆಯಲ್ಲಿ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಇಳಿಕೆ ಮಾಡಿದೆ. ಸೆಪ್ಟೆಂಬರ್ 1 ರಿಂದ ರಿಂದ 19 KG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 157 ರೂ. ಇಳಿಸಲಾಗಿದೆ. ಈ ಮೊದಲು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 1,679 ರೂ. ಆಗಿದ್ದು ಪ್ರಸ್ತುತ 1,522 ರೂ. ಆಗಿದೆ. ಈ ಮೂಲಕ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 157ರೂ. ಇಳಿಸಲಾಗಿದೆ.
ಇನ್ನು ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು ಕೂಡ ಘೋಷಿಸಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 200 ರೂ. ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಸಬ್ಸಿಡಿ ಘೋಷಿಸಿದ ಬೆನ್ನಲ್ಲೇ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು ದೇಶದಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಕಡಿಮೆ ಆಗುವ ಮೂಲಕ ಗ್ರಾಹಕರಿಗೆ ಖುಷಿ ನೀಡಿದೆ.
9 ವರ್ಷಗಳ ಹಿಂದಿನ ದರದಲ್ಲಿ ಸಿಗಲಿದೆ ಗ್ಯಾಸ್ ಸಿಲಿಂಡರ್
ಇನ್ನು ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ 200 ರೂ. ಇಳಿಕೆಯ ನಂತರ ದೊಡ್ಡ ಪ್ರಮಾಣದ ಬದಲಾವಣೆ ಆಗಲಿದೆ. ಸೆಪ್ಟೆಂಬರ್ ನಲ್ಲಿ 14 ಕೆಜಿ ಗ್ಯಾಸ್ ಸಿಲಿಂಡರ್ 9 ವರ್ಷಗಳ ಹಿಂದಿನ ಬೆಲೆಯಲ್ಲಿ ಸಿಗಲಿದೆ. 9 ವರ್ಷಗಳ ಹಿಂದಿನ ಬೆಲೆ ಎಂದರೆ 2014 ರ ಬೆಲೆಯಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ.
ಸೆಪ್ಟೆಂಬರ್ ನಿಂದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ
ಇನ್ನು 2014 ರಲ್ಲಿ ಗೃಹ ಬಳಕೆಯ ಸಿಲಿಂಡರ್ 901 ರೂ. ಗೆ ದೆಹಲಿಯಲ್ಲಿ ಲಭ್ಯವಿತ್ತು. ಪ್ರಸ್ತುತ ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ 903 ರೂ. ಗೆ ಇಳಿದಿದೆ. ಚೆನ್ನೈನಲ್ಲಿ 2024 ರಲ್ಲಿ 902 ರೂ. ಗೆ ಮಾರಾಟವಾದ ಗ್ಯಾಸ್ ಸಿಲಿಂಡರ್ ಪ್ರಸ್ತುತ 918 ರೂ. ಗೆ ಮಾರಾಟವಾಗುತ್ತಿದೆ. IOCL ನೀಡುವ ಮಾದರಿಯ ಪ್ರಕಾರ, ಗ್ಯಾಸ್ ಸಿಲಿಂಡರ್ ನ ಸೆಪ್ಟೆಂಬರ್ ನ ಬೆಲೆ 2014 ರ ಗಾಸ್ ಸಿಲಿಂಡರ್ ಬೆಲೆಯನ್ನು ತಲುಪಿದೆ. ಈ ಮೂಲಕ ಜನರಿಗೆ ಸ್ವಲ್ಪವೂ ಪ್ರಮಾಣದಲ್ಲಿ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿದೆ.