Gas Subsidy: ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಮಾಡಿದ ಕೇಂದ್ರ, ನಿಮ್ಮ ಖಾತೆಗೆ ಬಂದಿದೆ ಎಂದು ಈ ರೀತಿ ಚೆಕ್ ಮಾಡಿ

ನಿಮ್ಮ ಖಾತೆಗೆ ಗ್ಯಾಸ್ ಸಬ್ಸಿಡಿ ಹಣ ಬಂದಿದೆಯಾ ಎಂದು ಈ ರೀತಿ ಚೆಕ್ ಮಾಡಿ

Gas Subsidy Status Check: ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಬಳಕೆ ಮಾಡೇ ಮಾಡುತ್ತಾರೆ. ಗ್ಯಾಸ್ ಇಲ್ಲದೇ ಇರುವ ಮನೆ ಬಹಳ ಕಡಿಮೆ, ಹಾಗಾಗಿ ಹೆಚ್ಚಿನ ಮನೆಯಲ್ಲಿ ಗ್ಯಾಸ್ ಬಳಕೆ ಇದೆ. ದಿನ ಕಳೆದಂತೆ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗುತ್ತಿದ್ದು, ಜನರಿಗೆ ಸಹಾಯ ಆಗಲೆಂದು ಈಗ ಗ್ಯಾಸ್ ಬಳಕೆ ಮಾಡುವ ಎಲ್ಲರಿಗೂ ಸಬ್ಸಿಡಿ ನೀಡುವುದಾಗಿ ಕೇಂದ್ರ ಸರಕಾರ ಘೋಷಿಸಿತು.

ಈ ಕುರಿತು EKYC ಕಡ್ಡಾಯವಾಗಿ ಮಾಡಿಸಬೇಕು ಎಂದು ಮಾಹಿತಿ ನೀಡಲಾಯಿತು. ಈಗ ಸರ್ಕಾರದಿಂದ 200 ರೂಪಾಯಿಗಳಷ್ಟು ಸಬ್ಸಿಡಿ ಸಿಗುತ್ತಿದೆ. ಹಾಗಾಗಿ 900 ಆಸುಪಾಸಿನಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಿದೆ.

Gas Subsidy Status Check
Image Credit: Lokmattimes

ಕೇಂದ್ರದ ಉಜ್ವಲ ಯೋಜನೆ ಬಗ್ಗೆ ಮಾಹಿತಿ

ದೇಶದಲ್ಲಿ ಪ್ರತಿ ಮನೆಯಲ್ಲಿ ಗ್ಯಾಸ್ ಬಳಕೆ ಆಗಬೇಕು, ಯಾರು ಕೂಡ ಅಡುಗೆ ಮಾಡಲು ಕಷ್ಟ ಪಡಬಾರದು ಹಾಗು ಕಟ್ಟಿಗೆಗೆ ಅವಲಂಭಿತರಾಗಬಾರದು ಎಂಬ ಕಾರಣಕ್ಕಾಗಿ ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ಪ್ರತಿ ಮನೆಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಮಾಡಿಕೊಡಲಾಗಿದೆ. ಲಕ್ಷಾಂತರ ಜನರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಉಜ್ವಲ ಯೋಜನೆಯಡಿ 100 ರೂಪಾಯಿ ಸಬ್ಸಿಡಿ ಸೌಲಭ್ಯವನ್ನು ಹೊಂದಿದ್ದಾರೆ. ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಾಗ ಸಂಪೂರ್ಣ ಹಣ ಪಾವತಿ ಮಾಡಬೇಕು ನಂತರ ಸಬ್ಸಿಡಿ ಹಣವನ್ನು ಪಾವತಿದಾರರ ಖಾತೆಗೆ ಜಮಾ ಮಾಡಲಾಗುವುದು.

ಆಧಾರ್ ಕಾರ್ಡ್ ಲಿಂಕ್ ಇಲ್ಲದ ಖಾತೆಗೆ ಸಬ್ಸಿಡಿ ಹಣ ಬರುವುದಿಲ್ಲ

Join Nadunudi News WhatsApp Group

ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಯಾರ ಆಧಾರ್ ಕಾರ್ಡ್ ಗ್ಯಾಸ್ ಖಾತೆಗೆ ಲಿಂಕ್ ಇರುವುದಿಲ್ಲವೋ ಅಂಥವರ ಖಾತೆಗೆ ಸಬ್ಸಿಡಿ ಹಣ ಬರುವುದಿಲ್ಲ ಎನ್ನಲಾಗಿದೆ. ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆದವರು ತಮ್ಮ ಆಧಾರ್ ಕಾರ್ಡ್ ಅನ್ನು ಗ್ಯಾಸ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ತಪ್ಪಿಸದಿರಿ.

gas subsidy check online
Image Credit: The Times Of India

ಸಬ್ಸಿಡಿ ಹಣ ಬಂದಿರುವ ಕುರಿತು ಚೆಕ್ ಮಾಡುವ ವಿಧಾನ

ಕಳೆದ ತಿಂಗಳಿನಿಂದ ಸಬ್ಸಿಡಿ ಹಣ ಹಲವರ ಖಾತೆ ಸೇರಿದೆ. ಇನ್ನು ಕೆಲವರ ಖಾತೆ ಸೇರಿಲ್ಲ. ಯಾರ ಖಾತೆಗೆ ಹಣ ಬಂದಿಲ್ಲವೋ ಅಂಥವರಿಗೆ ಶೀಘ್ರದಲ್ಲೇ ಹಣ ಸೇರಲಿದೆ. ನಿಮ್ಮ ಹಣ ಬಂದಿರುವ ಕುರಿತು ತಿಳಿಯಲು ಮೊದಲೆನೆದಾಗಿ https://www.mylpg.in ಈ ಲಿಂಕ್ ಭೇಟಿ ನೀಡಿ, ಈಗ ಭಾರತ್, ಹೆಚ್ ಪಿ, ಇಂಡಿಯನ್ ಮೂರೂ ಗ್ಯಾಸ್ ಕಂಪನಿ ಗಳ ಹೆಸರನ್ನು ತೋರಿಸಲಾಗುತ್ತದೆ. ಇವುಗಳಲ್ಲಿ ನೀವು ಯಾವ ಕಂಪನಿ ಗ್ಯಾಸ್ ಕನೆಕ್ಷನ್ ತೆಗೆದುಕೊಂಡಿದ್ದೀರಾ ಆ ಕಂಪನಿಯ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಆಗ ನೇರವಾಗಿ ಅದೇ ಕಂಪನಿಯ ವೆಬ್ಸೈಟ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಗ್ಯಾಸ್ ಕನೆಕ್ಷನ್ ಐಡಿ ನಮೂದಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ಜಮೆ ಆಗಿದೀಯಾ, ಇಲ್ಲವೋ ಎನ್ನುವುದನ್ನು ತಿಳಿಯಬಹುದಾಗಿದೆ.

Join Nadunudi News WhatsApp Group