ಶೂಟಿಂಗ್ ನಲ್ಲಿ ಬ್ಯುಸಿ ಇದ್ದರು ಗಟ್ಟಿಮೇಳ ಅಂಜಲಿ SSLC ಮಾರ್ಕ್ಸ್ ಎಷ್ಟು ಗೊತ್ತಾ, ರಾಜ್ಯವೇ ಮೆಚ್ಚಿದೆ ನೋಡಿ.

ನಮ್ಮ ಕರ್ನಾಟಕದಲ್ಲಿ ಹೆಚ್ಚಿನ ಜನರು ಧಾರಾವಾಹಿ ಪ್ರಿಯರು ಎಂದು ಹೇಳಬಹುದು. ಹೌದು ರಾತ್ರಿಯಾದರೆ ಸಾಕು ಜನರು ಟಿವಿ ಮುಂದೆ ಕುಳಿತುಕೊಂಡು ಧಾರಾವಾಹಿ ವೀಕ್ಷಣೆ ಮಾಡುತ್ತಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಬಹಳ ಒಳ್ಳೆಯ ಧಾರಾವಾಹಿಗಳು ಮೂಡಿಬರುತ್ತಿದ್ದು ಇದು ಪ್ರೇಕ್ಷರಕರನ್ನ ತನ್ನತ್ತ ಸೆಳೆಯುತ್ತಿದೆ ಎಂದು ಹೇಳಬಹುದು. ಇನ್ನು ಕನ್ನಡ ಕಿರುತೆರೆಯಲ್ಲಿ ಮೂಡಿಬರುತ್ತಿರುವ ಜನರು ಮೆಚ್ಚಿದ ಧಾರಾವಾಹಿಯಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದು ಎಂದು ಹೇಳಬಹುದು. ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ಜನರ ಮನಸ್ಸನ್ನ ಸೆಳೆದಿದ್ದು ಅತೀ ಹೆಚ್ಚಿನ TRP ಹೊಂದಿರುವ ಕನ್ನಡದ ಧಾರಾವಾಹಿಯಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದಾಗಿದೆ.

ಅದೇ ರೀತಿಯಲ್ಲಿ ಈ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ಅಂಜಲಿ ಪಾತ್ರವನ್ನ ಮಾಡುವ ನಟಿ ಮಹತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಈ ಪುಟ್ಟ ನಟಿ ಮಹತಿ ಅವರು ಹಿಂದೆ ಜಿ ಕನ್ನಡದ ರಿಯಾಲಿಟಿ ಶೋ ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಸದ್ಯ ಅಂಜಲಿ ಪಾತ್ರದಾರಿ ನಟಿ ಮಹತಿ 10 ನೇ ತರಗತಿ ಮುಗಿಸಿ ಪಿಯುಸಿಗೆ ಕಾಲಿಟ್ಟಿದ್ದಾರೆ. ಕೆಲವರು ತಲೆಯಲ್ಲಿ ನಟಿಯರು ಬರಿ ಚಿತ್ರದ ಶೂಟಿಂಗ್ ನಲ್ಲಿಯೇ ಇರುತ್ತಾರೆ ಮತ್ತು ಅವರು ಓದುವ ಕಡೆ ಗಮನವನ್ನ ಕೊಡುವುದಿಲ್ಲ ಎಂದು ಅದೆಷ್ಟೋ ಜನರು ಭಾವಿಸಿರುತ್ತಾರೆ, ಆದರೆ ಪುಟ್ಟ ನಟಿ ಮಹತಿಯ ಹತ್ತನೇ ತರಗತಿ ಮಾರ್ಕ್ಸ್ ಎಷ್ಟು ಎಂದು ತಿಳಿದರೆ ನಿಮಗೆ ಆಶ್ಚರ್ಯ ಆಗುತ್ತದೆ.

Gattimela Mahati sslc marks

ಹೌದು ಸ್ನೇಹಿತರೆ ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಗಟ್ಟಿಮೇಳ ಧಾರಾವಾಹಿಯ ನಟಿ ಅಂಜಲಿ ಪಾತ್ರದಲ್ಲಿ ಮಹತಿ ಅವರು ಹತ್ತನೇ ತರಗತಿ ಪರೀಕ್ಷೆಯಲ್ಲಿ ಯಾರು ಊಹೆ ಮಾಡ ಅಂಕವನ್ನ ಪಡೆದುಕೊಂಡಿದ್ದಾರೆ. ಹೌದು ಮಹತಿ ಹತ್ತನೇ ತರಗತಿಯಲ್ಲಿ ಶೇಕಡಾ 99 ಅಂಕವನ್ನ ಪಡೆದುಕೊಂಡು ದೊಡ್ಡ ಸಾಧನೆಯನ್ನ ಮಾಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 145 ವಿದ್ಯಾರ್ಥಿಗಳು 625 ಅಂಕಗಳನ್ನ ಪಡೆದುಕೊಂಡು ರಾಜ್ಯಕ್ಕೆ ಪ್ರಥಮ ಬಂದರು.

ಇನ್ನು ಅದೇ ರೀತಿಯಲ್ಲಿ ಮಹತಿ ಹತ್ತನೇ ತರಗತಿಯಲ್ಲಿ ಶೇಕಡಾ 99 ಅಂಕವನ್ನ ಪಡೆದುಕೊಂಡು ತನ್ನ ಶಾಲೆಗೆ ಮತ್ತು ಹೆತ್ತವರಿಗೆ ಬಹಳ ಹೆಸರನ್ನ ತಂದಿದ್ದಾಳೆ. ಇನ್ನು ಶೇಕಡಾ 99 ಅಂಕ ಬಂದ ವಿಷಯವನ್ನ ಸ್ವಹತ ಮಹತಿಯವರೇ ಇಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು ಅವರು 619 ಅಂಕ ಬಂದಿದೆ ಎಂದು ಹೇಳಿದ್ದಾರೆ. ಹಲವು ಅಭಿಮಾನಿಗಳು ಮಹತಿಯವರಿಗೆ ಶುಭಾಶಯವನ್ನ ಹೇಳಿದ್ದಾರೆ. ಸ್ನೇಹಿತರೆ ಶೂಟಿಂಗ್ ನಲ್ಲಿ ಬಿಡುವು ಮಾಡಿಕೊಂಡು ಶೇಕಡಾ 99 ಅಂಕ ಪಡೆದ ಮಹತಿಯ ಸಾಧನೆಗೆ ಒಂದು ಮೆಚ್ಚುಗೆ ಕೊಡಿ.

Join Nadunudi News WhatsApp Group

Gattimela Mahati sslc marks

Join Nadunudi News WhatsApp Group