Railway Facility: ರೈಲಿನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಗುಡ್ ನ್ಯೂಸ್, IRCTC ಮಹತ್ವದ ನಿರ್ಧಾರ.

ಜನರಲ್ ಬೋಗಿಯಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ.

General Coach Facility: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ಇಲಾಖೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಇನ್ನು ಹೊಸ ನಿಯಮಗಳನ್ನು ಪರಿಚಯಿಸುವುದರ ಜೊತೆಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಇನ್ನಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಇನ್ನು ಪ್ರತಿನಿತ್ಯ ರೈಲುಗಳಲ್ಲಿ ಸಾವಿರರು ಮಂದಿ ಪ್ರಯಾಣಿಸುತ್ತಾರೆ. ದೂರದ ಪ್ರಯಾಣಕ್ಕಾಗಿ ಹೆಚ್ಚಿನ ಜನರು ರೈಲು ಪ್ರಯಾಣವನ್ನೇ ಆರಿಸುತ್ತಾರೆ.

ರೈಲು ಪ್ರಯಾಣಿಕರಿಗೆ ಹೊಸ ಸುದ್ದಿ
ರೈಲು ಪ್ರಯಾಣವು ಹೆಚ್ಚು ಆರಾಮದಾಯ ಹಾಗೂ ಸುರಕ್ಷಿತವಾಗಿರುತ್ತದೆ. ಈ ಕಾರಣಕ್ಕಾಗಿ ಹೆಚ್ಚಾಗಿ ಜನರು ರೈಲು ಪ್ರಯಾಣವನ್ನು ಆರಿಸುತ್ತಾರೆ.

New facility for general class passengers
Image Credit: Metrorailnews

ರೈಲಿನಲ್ಲಿ ಪ್ರಯಾಣಿಸುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ಇದೀಗ ರೈಲು ಪ್ರಯಾಣಿಕರಿಗೆ ಹೊಸ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ರೈಲ್ವೆ ಇಲಾಖೆ ಜಾರಿಗೊಳಿಸಿರುವ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಹೊಸ ಸೌಲಭ್ಯ
ರೈಲ್ವೆ ಮಂಡಳಿಯು ಎಲ್ಲ ವರ್ಗದ ವಲಯಗಳಿಗೂ ಪತ್ರ ಬರೆಯುವ ಮೂಲಕ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ಹೊಸ ಸೌಲಭ್ಯ ಸಿಗುವ ಕುರಿತು ಪತ್ರ ಬರೆದಿದೆ.

ಸಾಮಾನ್ಯ ವರ್ಗದ ಬೋಗಿಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ರೈಲ್ವೆ ಇಲಾಖೆ ಆದೇಶ ನೀಡಿದೆ. ರೈಲ್ವೇ ವಲಯಗಳ ಜನರಲ್ ಮ್ಯಾನೇಜರ್‌ ಗಳು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿಶೇಷವಾಗಿ ಸಾಮಾನ್ಯ ಕೋಚ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳುವಂತೆ ಪತ್ರದಲ್ಲಿ ಬರೆಯಲಾಗಿದೆ.

Join Nadunudi News WhatsApp Group

New facility for general class passengers
Image Credit: Times Of India

ರೈಲು ಪ್ರಯಾಣದಲ್ಲಿ ಹೊಸ ಸೌಲಭ್ಯ
ರೈಲುಗಳ ಪ್ರತಿ ನಿಲ್ದಾಣದಲ್ಲಿ ಕಾಯ್ದಿರಿಸಿದ ಕೋಚ್ ಗಳ ಬಳಿ ಕೈಗೆಟುಕುವ ಆಹಾರ, ಕುಡಿಯುವ ನೀರು ಮತ್ತು ವೇಡಿಂಗ್ ಟ್ರಾಲಿಗಳನ್ನು ವ್ಯವಸ್ಥೆಗೊಳಿಸುವಂತೆ ಮಂಡಳಿಯು ಎಲ್ಲಾ ರೈಲ್ವೆ ವಲಯಗಳ ಜನರಲ್ ಮ್ಯಾನೇಜರ್ ಗಳಿಗೆ ನಿರ್ದೇಶನ ನೀಡಿದೆ.

ಈ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಗೊತ್ತುಪಡಿಸಿದ ನಿಲ್ದಾಣಗಳಲ್ಲಿ ಸಾಮಾನ್ಯ ಕೋಚ್ ಗಳ ಶುಚಿತ್ವವನ್ನು ಖಚಿತಪಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ. ಇನ್ನುಮುಂದೆ ಸಾಮಾನ್ಯ ಬೋಗಿಗಳಲ್ಲೂ ಕೂಡ ವಿಶೇಷ ಸೌಲಭ್ಯ ಸಿಗಲಿದೆ.

Join Nadunudi News WhatsApp Group