Geotag: ಆದಾಯ ತೆರಿಗೆ ಕಟ್ಟುವವರು ಜನವರಿ 31 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಈ ಲಾಭ ಸಿಗಲ್ಲ

ಜನವರಿ 31 ರೊಳಗೆ ಈ ಕೆಲಸ ಮಾಡದಿದ್ದರೆ ತೆರಿಗೆ ರಿಯಾಯಿತಿ ಲಭ್ಯವಾಗುದಿಲ್ಲ.

Geotagged Mandatory For Property Tax: ಹೊಸ ಹಣಕಾಸು ವರ್ಷದ (New Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳು ಬದಲಾವಣೆ ಆಗಿದೆ. ಇನ್ನು ಇತ್ತೀಚೆಗಂತೂ ತೆರಿಗೆ ಸಂಭಂದಿತ ಅನೇಕ ಅಪ್ಡೇಟ್ ಗಳು ಹೊರಬರುತ್ತಲೇ ಇದೆ.

ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ಹೌದು ತೆರಿಗೆದಾರರು ಜನವರಿ 31 ರೊಳಗೆ ಈ ಪ್ರಮುಖ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ಜೂನ್ 30 ರ ಮೊದಲು ಆಸ್ತಿ ತೆರಿಗೆಯನ್ನು ಠೇವಣಿ ಮಾಡಲು ನೀಡಲಾದ ಶೇಕಡಾ 10 ರಷ್ಟು ರಿಯಾಯಿತಿ ಲಭ್ಯವಾಗುದಿಲ್ಲ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.

Property Tax Latest Update
Image Credit: Informal News

ಆಸ್ತಿಯನ್ನು ಜಿಯೋಟ್ಯಾಗ್ ಮಾಡುದು ಕಡ್ಡಾಯ
ಪ್ರಸ್ತುತ ಜನರು ತಮ್ಮ ನಿಗದಿತ ಆಸ್ತಿಯನ್ನು ಜಿಯೋಟ್ಯಾಗ್ ಮಾಡುವುದು ಕಡ್ಡಾಯವಾಗಿದೆ. ಹಲಿ ಮುನ್ಸಿಪಲ್ ಕಾರ್ಪೊರೇಷನ್ ತೆರಿಗೆದಾರರು ತಮ್ಮ ವಾಣಿಜ್ಯ ಮತ್ತು ವಸತಿ ಆಸ್ತಿಗಳನ್ನು ಜನವರಿ 31 ರೊಳಗೆ ಜಿಯೋಟ್ಯಾಗ್ ಮಾಡಲು ಆದೇಶಿಶಿದ್ದಾರೆ.

ತೆರಿಗೆದಾರರು ತಮ್ಮ ಆಸ್ತಿಯನ್ನು ಜಿಯೋಟ್ಯಾಗ್ ಮಾಡದಿದ್ದರೆ ಜೂನ್ 30 ರ ಮೊದಲು ಆಸ್ತಿ ತೆರಿಗೆಯನ್ನು ಠೇವಣಿ ಮಾಡಲು ನೀಡಲಾದ 10 ಪ್ರತಿಶತ ರಿಯಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಸದ್ಯ ಆಸ್ತಿಯನ್ನು ಜಿಯೋಟ್ಯಾಗ್ ಮಾಡಿದವರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಆಸ್ತಿಯನ್ನು ಜಿಯೋಟ್ಯಾಗ್ ಮಾಡುವುದು ಕಡ್ಡಾಯವಾಗಿದೆ.

Geotagged Mandatory For Property Tax
Image Credit: Trendvisionz

80 ಸಾವಿರಕ್ಕೂ ಹೆಚ್ಚು ಜನ ಆಸ್ತಿಯನ್ನು ಜಿಯೋಟ್ಯಾಗ್ ಮಾಡಿದ್ದಾರೆ
ಇಲ್ಲಿವರೆಗೆ 80 ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಆಸ್ತಿಯನ್ನು ಜಿಯೋಟ್ಯಾಗ್ ಮಾಡಿದ್ದಾರೆ. ತೆರಿಗೆ ನಿಗಮದ ಡೇಟಾಬೇಸ್‌ ನಲ್ಲಿ ಸರಿಸುಮಾರು 14 ಲಕ್ಷ ತೆರಿಗೆದಾರರಿದ್ದಾರೆ. ಇದರಲ್ಲಿ 13 ಲಕ್ಷ ಆಸ್ತಿಗಳಿಗೆ ನಿಗಮವು ವಿಶಿಷ್ಟ ಆಸ್ತಿ ಗುರುತಿನ ಕೋಡ್ (UPIC) ನೀಡಿದೆ. UPIC ಕೋಡ್‌ಗಳ ಆಧಾರದ ಮೇಲೆ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡಲು ತೆರಿಗೆದಾರರನ್ನು ಹೆಚ್ಚು ಪ್ರೋತ್ಸಾಹಿಸಲಾಗುತ್ತಿದೆ. ತೆರಿಗೆ ನಿಗಮವು ತನ್ನ ಅಧಿಕಾರ ವ್ಯಾಪ್ತಿಗೆ ಒಳಪಡುವ ಎಲ್ಲಾ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಜಿಯೋಟ್ಯಾಗ್ ಮಾಡುವುದನ್ನು ಕಡ್ಡಾಯಗೊಳಿಸಿದೆ.

Join Nadunudi News WhatsApp Group

Join Nadunudi News WhatsApp Group