Glenn Maxwell: ದಿಡೀರ್ ಆಸ್ಪತ್ರೆ ಸೇರಿಕೊಂಡ ಸ್ಪೋಟಕ ಆಟಗಾರ ಮ್ಯಾಕ್ಸ್​​ವೆಲ್, ಆತಂಕ ಹೊರಹಾಕಿದ ಫ್ಯಾನ್ಸ್.

ಆರೋಗ್ಯ ಹದೆಗೆಟ್ಟು ಆಸ್ಪತ್ರೆ ಸೇರಿದ Glenn Maxwel, ತನಿಖೆಗೆ ಮುಂದಾದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ

Glenn Maxwell Hospitalized: ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ Glenn Maxwell ತಮ್ಮ ಅದ್ಭುತ ಆಟದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದೀಗ ಆಲ್ ರೌಂಡರ್ Glenn Maxwell ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

Glenn Maxwell ದಿಢೀರ್ ಆಸ್ಪ್ರತೆ ಸೇರಿರಿವುದು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಅತಿಯಾದ ಮದ್ಯಪಾನ ಸೇವನೆಯಿಂದ ಆರೋಗ್ಯ ಹದೆಗೆಟ್ಟು Glenn Maxwell ಆಸ್ಪತ್ರೆ ಸೇರಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ಈ ಪ್ರಕರಣದ ತನಿಖೆ ನಡೆಸಿದ್ದಾರೆ.

Glenn Maxwell Latest News
Image Credit: Moneycontrol

ದಿಡೀರ್ ಆಸ್ಪತ್ರೆ ಸೇರಿಕೊಂಡ ಸ್ಪೋಟಕ ಆಟಗಾರ ಮ್ಯಾಕ್ಸ್​​ವೆಲ್
ಅಡಿಲೇಡ್‌ ನಲ್ಲಿ ಕಳೆದ ವಾರದ ಲೇಟ ನೈಟ್ ಪತಿಯೊಂದ್ರಲ್ಲಿ ಪಾಲ್ಗೊಂಡಿದ್ದ ಆಲ್ ರೌಂಡರ್ Glenn Maxwell ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಈ ಪ್ರಕರಣದ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧರಿಸಿದೆ.

ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಒಳಗೊಂಡ ‘ಸಿಕ್ಸ್ ಅಂಡ್ ಔಟ್’ ಬ್ಯಾಂಡ್‌ ನ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಮ್ಯಾಕ್ಸ್‌ ವೆಲ್, ಅತಿಯಾದ ಮದ್ಯಪಾನದಿಂದಾಗಿ ಅಸ್ವಸ್ಥರಾಗಿದ್ದರು.ನಂತರ ಅವರನ್ನು ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಿದ್ದರು.

Glenn Maxwell Health Condition
Image Credit: Cricfit

ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಆಸೀಸ್ ತಂಡದಲ್ಲಿ ಅವರನ್ನು ಸೇರಿಸಿಕೊಂಡಿಲ್ಲ. ಇತ್ತೀಚೆಗೆ, ಬಿಗ್ ಬ್ಯಾಷ್ ಲೀಗ್‌ ನಲ್ಲಿ ಫೈನಲ್‌ ಗೆ ತಲುಪಲು ವಿಫಲವಾದ ನಂತರ ಮ್ಯಾಕ್ಸ್‌ ವೆಲ್ ನಾಯಕತ್ವವನ್ನು ತೊರೆದಿದ್ದರು. ಮುಂಬರುವ ಐಪಿಎಲ್‌ ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ RCB ಪರ ಆಡಬೇಕಿದೆ. ಆದರೆ ಪ್ರಕರಣದಲ್ಲಿ ಮ್ಯಾಕ್ಸ್ ವೆಲ್ ಗೆ ಸಿಎ ನಿಷೇಧ ಶಿಕ್ಷೆ ವಿಧಿಸಿದರೆ RCB ಯಲ್ಲಿ ಆಡಲು ಅಸಾದ್ಯವಾಗಬಹುದು.

Join Nadunudi News WhatsApp Group

Join Nadunudi News WhatsApp Group