RCB 2024: RCB ಅಭಿಮಾನಿಗಳಿಗೆ ಬೇಸರದ ಸುದ್ದಿ, ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ

ಆಸ್ಪತ್ರೆ ಸೇರಿಕೊಂಡ ಸ್ಟಾರ್ ಆಟಗಾರ, RCB ಅಭಿಮಾನಿಗಳು ಬೇಸರದಲ್ಲಿ

Glenn Maxwell Health Update: ಆಸ್ಟ್ರೇಲಿಯಾ ತಂಡದ ಆಲ್ ರೌಂಡರ್ Glenn Maxwell ಅನಾರೋಗ್ಯದ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. Glenn Maxwell ದಿಢೀರ್ ಆಸ್ಪ್ರತೆ ಸೇರಿರಿವುದು ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಅತಿಯಾದ ಮದ್ಯಪಾನ ಸೇವನೆಯಿಂದ ಆರೋಗ್ಯ ಹದೆಗೆಟ್ಟು Glenn Maxwell ಆಸ್ಪತ್ರೆ ಸೇರಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಅನಾರೋಗ್ಯದ ಕಾರಣ ಮ್ಯಾಕ್ಸ್ ವೆಲ್ ಸರಣಿ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Glenn Maxwell Health
Image Credit: Fresherslive

IPL ಗು ಮುನ್ನ ಆಸ್ಪತ್ರೆ ಸೇರಿಕೊಂಡ ಆಲ್ ರೌಂಡರ್ ಮ್ಯಾಕ್ಸ್​​ವೆಲ್
ಅಡಿಲೇಡ್‌ ನಲ್ಲಿ ಕಳೆದ ವಾರದ ಲೇಟ್ ನೈಟ್ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದ ಆಲ್ ರೌಂಡರ್ Glenn Maxwell ಪ್ರಜ್ಞೆ ತಪ್ಪಿ ಬಿದ್ದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಈ ಪ್ರಕರಣದ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ನಿರ್ಧರಿಸಿದೆ. ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಒಳಗೊಂಡ ‘ಸಿಕ್ಸ್ ಅಂಡ್ ಔಟ್’ ಬ್ಯಾಂಡ್‌ ನ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಮ್ಯಾಕ್ಸ್‌ ವೆಲ್, ಅತಿಯಾದ ಮದ್ಯಪಾನದಿಂದಾಗಿ ಅಸ್ವಸ್ಥರಾಗಿದ್ದರು. ನಂತರ ಅವರನ್ನು ಆಂಬ್ಯುಲೆನ್ಸ್‌ ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮರುದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನ್ನು ಆಸ್ಟ್ರೇಲಿಯಾ ಗೆಲ್ಲುವಲ್ಲಿ ಮ್ಯಾಕ್ಸ್‌ವೆಲ್ ಪ್ರಮುಖ ಪಾತ್ರ ವಹಿಸಿದ್ದರು. ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಆಸೀಸ್ ತಂಡದಲ್ಲಿ ಅವರನ್ನು ಸೇರಿಸಿಕೊಂಡಿಲ್ಲ. ಇತ್ತೀಚೆಗೆ, ಬಿಗ್ ಬ್ಯಾಷ್ ಲೀಗ್‌ ನಲ್ಲಿ ಫೈನಲ್‌ ಗೆ ತಲುಪಲು ವಿಫಲವಾದ ನಂತರ ಮ್ಯಾಕ್ಸ್‌ ವೆಲ್ ನಾಯಕತ್ವವನ್ನು ತೊರೆದಿದ್ದರು. ಮುಂಬರುವ ಐಪಿಎಲ್‌ ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ RCB ಪರ ಆಡಬೇಕಿದೆ. ಆದರೆ IPL ಗು ಮುನ್ನ ಆಲ್ ರೌಂಡರ್ ಮ್ಯಾಕ್ಸ್​​ವೆಲ್ ಆಸ್ಪತ್ರೆ ಸೇರಿಕೊಂಡಿದ್ದಾರೆ.

Glenn Maxwell Health Update
Image Credit: Aajtak

ಏಕದಿನ ಸರಣಿಯಿಂದ ಗ್ಲೇನ್ ಮ್ಯಾಕ್ಸ್ ವೆಲ್ ಔಟ್
ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಎರಡು ಟೆಸ್ಟ್ ಪಂದ್ಯಗಳನ್ನು ತವರಿನಲ್ಲಿ ಆಡುತ್ತಿದೆ. ಮೊದಲ ಟೆಸ್ಟ್ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ 10 ವಿಕೆಟ್‌ ಗಳಿಂದ ಗೆದ್ದುಕೊಂಡಿದೆ. ಟೆಸ್ಟ್ ನಂತರ ಶುಕ್ರವಾರ, ಫೆಬ್ರವರಿ 2 ರಿಂದ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ODI ಸರಣಿಯು ನಡೆಯಲಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಹೊರತುಪಡಿಸಿ, ODI ಸರಣಿಗಾಗಿ ಆಸ್ಟ್ರೇಲಿಯಾ ತನ್ನ ತಂಡವನ್ನು ಘೋಷಿಸಿತು.

Join Nadunudi News WhatsApp Group

Join Nadunudi News WhatsApp Group