Glenn Maxwell: RCB ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಮ್ಯಾಕ್ಸ್ ವೆಲ್ ದಂಪತಿ, ಶುಭಕೋರಿದ ಫ್ಯಾನ್ಸ್.

ಮ್ಯಾಕ್ಸ್ ವೆಲ್ ಪತ್ನಿ ವಿನಿ ರಾಮನ್ ಅವರು ಗರ್ಭಿಣಿಯಾಗಿದ್ದು ಅಭಿಮಾನಿಗಳು ಮ್ಯಾಕ್ಸ್ ವೆಲ್ ಅವರಿಗೆ ಶುಭಾಶಯ ತಿಳಿಸಿದ್ದಾರೆ.

Glenn Maxwell And Vini Raman: ಆಸ್ಟ್ರೇಲಿಯನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಇದೀಗ ಸುದ್ದಿಯಲ್ಲಿದ್ದಾರೆ. ಇದೀಗ ಗ್ಲೇನ್ ಮ್ಯಾಕ್ಸ್ ವೆಲ್ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಗ್ಲೇನ್ ಮ್ಯಾಕ್ಸ್ ವೆಲ್ ಹಾಗೂ ಅವರ ಪತ್ನಿ ವಿನಿ ರಾಮನ್ ಪೋಷಕರಾಗುತ್ತಿರುವ (Parents) ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

Maxwell's wife Vini Raman is pregnant and fans congratulated Maxwell.
Image Credit: indiatimes

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಗ್ಲೇನ್ ಮ್ಯಾಕ್ಸ್ ವೆಲ್
ಐಪಿಎಲ್ ಪಂದ್ಯದ ಸಮಯದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಸಿಹಿ ಸುದ್ದಿ ನೀಡಿದ್ದಾರೆ. ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ಮಾರ್ಚ್ 2022 ರಂದು ವಿವಾಹವಾಗಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿದಿಸಿದಾಗ ಈ ಇಬ್ಬರು ಜೊತೆಯಾಗಿದ್ದರು.

ಈ ವರ್ಷದ ಸೆಪ್ಟೆಂಬರ್ ನಲ್ಲಿ ತಮ್ಮ ಮೊದಲ ಮಗುವನ್ನು ಈ ದಂಪತಿ ಸ್ವಾಗತಿಸಲಿದ್ದಾರೆ. ದಂಪತಿಗಳು ಪೋಷಕರಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

View this post on Instagram

 

A post shared by Vini Maxwell (@vini.raman)

ಪೋಷಕರಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ದಂಪತಿ
ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿನಿ ರಾಮನ್ ತಾವು ಪೋಷಕರವಾಗುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

“ಗ್ಲೇನ್ ಮತ್ತು ನಾನು ನಮ್ಮ ರೇನ್ಬೋ ಬೇಬಿ ಸೆಪ್ಟೆಂಬರ್ 2023 ಸೆಪ್ಟೆಂಬರ್ ರಲ್ಲಿ ಬರಲಿದೆ ಎಂದು ಘೋಷಿಸಲು ಭಾವುಕರಾಗಿದ್ದೇವೆ. ಈ ಪ್ರಯಾಣವು ಸುಗಮ ಅಥವಾ ಸುಲಭವಲ್ಲ ಎಂದು ಒಪ್ಪಿಕೊಳ್ಳುವುದು ನಮಗೆ ತುಂಬಾ ಮುಖ್ಯವಾಗಿದೆ” ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಬಾಲಿವುಡ್ ನ ನಟಿ ಅನುಷ್ಕಾ ಶರ್ಮ ಪ್ರತಿಕ್ರಿಯಿಸಿದ್ದಾರೆ.

Join Nadunudi News WhatsApp Group