GNSS: ಇನ್ನುಮುಂದೆ ಟೋಲ್ ಗೇಟ್ ನಲ್ಲಿ ಇರಲ್ಲ Fastag, ಟೋಲ್ ನಿಯಮದಲ್ಲಿ ಐತಿಹಾಸಿಕ ಬದಲಾವಣೆ.

ಟೋಲ್ ಗೇಟ್ ನಲ್ಲಿ fastag ನ ಬದಲಾಗಿ ಹೊಸ ತಂತ್ರಜ್ಞಾನ, ಟೋಲ್ ನಿಯಮದಲ್ಲಿ ಬದಲಾವಣೆ ತಂದ ನಿತಿನ್ ಗಡ್ಕರಿ.

Global Navigation Satellite System In Toll Plaza: ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆ ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳನ್ನು ಬದಲಾಯಿಸಲಾಗಿದೆ. ಟೋಲ್ (Toll)  ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ.

ಟೋಲ್ ಸಂಗ್ರಹಣೆಯಲ್ಲಿ ವಿಧಾನದಲ್ಲಿ ಹೊಸ ಹೊಸ ತಂತ್ರಜ್ಞಗಳನ್ನು ಬಳಸಿಕೊಳ್ಳಲಾಗುತ್ತದೆ. ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್  (FASTag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ. ಇದೀಗ ಟೋಲ್ ಸಂಗ್ರಹಣೆಯಲ್ಲಿ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.

Global Navigation System In Toll Plaza
Image Credit: News18

ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ
ಫಾಸ್ಟ್ ಟ್ಯಾಗ್ ನ ನಂತರ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆ ಕೂಡ ಜಾರಿಗೊಳಿಸಲಾಗಿದೆ. ಈ ಎಲ್ಲ ತಂತ್ರಜ್ಞಾನಗಳ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗುತ್ತಿದೆ. ವಿವಿಧ ರೀತಿಯ ತಂತ್ರಜ್ಞಾನಗಳು ಜಾರಿಯಾಗಿದ್ದರು ಕೂಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳುತ್ತಿಲ್ಲ. ದಿನದಿಂದ ದಿನಕ್ಕೆ ರಸ್ತೆಗಳಲ್ಲಿ ಟ್ರಾಫಿಕ್ ನಿಂದಾಗಿ ಜಗಳ ಉಂಟಾಗುತ್ತಿದೆ.

ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಶೀಘ್ರದಲ್ಲೇ ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಇನ್ನುಮುಂದೆ ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ ಬರಲಿದೆ.

New technology for toll collection
Image Credit: Economictimes

ಇನ್ನುಮುಂದೆ ಟೋಲ್ ಗೇಟ್ ನಲ್ಲಿ Fastag ನ ಬದಲಾಗಿ ಹೊಸ ತಂತ್ರಜ್ಞಾನ
ಸಾಕಷ್ಟು ವಾಹನಗಳ ಚಲಾವಣೆಯಿಂದಾಗಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗಳು ಹೆಚ್ಚಾಗಿವೆ. ಇನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಯಾದ ಫಾಸ್ಟ್ ಟ್ಯಾಗ್ ಅನ್ನು ಬಳಸಿ ಟೋಲ್ ಸಂಗ್ರಹಿಸಲಾಗಿತ್ತು. ಸದ್ಯ ಫಾಸ್ಟ್ ಟ್ಯಾಗ್ ನಿಯಮದಲ್ಲಿ ಈಗ ಬದಲಾವಣೆಯನ್ನ ಮಾಡಲು ಕೇಂದ್ರ ಮುಂದಾಗಿದ್ದು ಫಾಸ್ಟ್ ಟ್ಯಾಗ್ ಬದಲಿದೆ ಹೊಸ ತಂತ್ರಜ್ಞಾನವನ್ನ ಅಳವಡಿಸಲು ಮುಂದಾಗಿದೆ.

Join Nadunudi News WhatsApp Group

ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್
ಕ್ಯಾಮರಾಗಳು ಪರವಾನಗಿ ಫಲಕದ ಫೋಟೋವನ್ನು ಕ್ಲಿಕ್ ಮಾಡಿ ವಾಹನದ ಸಂಖ್ಯೆಯಿಂದ ಟೋಲ್ ಮೂಲಕ ಟೋಲ್ ಅನ್ನು ಕಡಿತಗೊಳಿಸುತ್ತದೆ. ಇನ್ನುಮುಂದೆ ಈ ವ್ಯವಸ್ಥೆಗಳ ಬದಲಾಗಿ ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್ (GNSS ) ಗಳನ್ನೂ ಅಳವಡಿಸಲಾಗುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಜಿಎನ್ ಎಸ್ ಎಸ್ ಆಧಾರಿತ ಗೇಟ್ ಮತ್ತು ಪ್ಲಾಜಾಗಳನ್ನು ದೇಶದಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ಸಚಿವರು ಮಾಹಿತಿ ನೀಡಿದ್ದಾರೆ.

Global Navigation satellite System In Toll Plaza
Image Credit: Indiatimes

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ
ದೇಶದ ಟೋಲ್ ಪ್ಲಾಜಾಗಳಲ್ಲಿ ತೆಗೆದುಕೊಳ್ಳುವ ಸರಾಸರಿ ಸಮಯ ಕಡಿಮೆಯಾಗಿದೆ. ಈ ಕಾಯುವ ಸಮಯವೂ ಸರಾಸರಿ 734 ಸೆಕೆಂಡುಗಳು, ಅದು ಕೇವಲ 47 ಸೆಕೆಂಡುಗಳಿಗೆ ಇಳಿದಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿದ ನಂತರ ಟೋಲ್ ಸಂಗ್ರಹದಲ್ಲಿ ಹೆಚ್ಚಳವಾಗಲಿದೆ ಎಂದು ನಿತಿನ್ ಗಡ್ಕರಿ ಅವರು ಮಾಹಿತಿ ನೀಡಿದ್ದಾರೆ. ಇನ್ನು ಶೀಘ್ರದಲ್ಲೆ ಟೋಲ್ ಸಂಗ್ರಹಣೆಗಾಗಿ ಗ್ಲೋಬಲ್ ನ್ಯಾವಿಗೇಶನ್ ಸಿಸ್ಟಮ್ ಅನ್ನು ಅಳವಡಿಸಲಾಗುವುದು ಎಂದಿದ್ದಾರೆ.

Join Nadunudi News WhatsApp Group