Gmail: ಇಂತವರ gmail ಅಕೌಂಟ್ ಬ್ಯಾನ್ ಮಾಡಲಿದೆ ಗೂಗಲ್, ಸರಿಪಡಿಸಿಕೊಳ್ಳಿ ನಿಮ್ಮ gmail.
ಎರಡು ವರ್ಷದಿಂದ ಲಾಗಿನ್ ಮಾಡದ ಜಿಮೈಲ್ ಅನ್ನು ಡಿಲೀಟ್ ಮಾಡಲು ಮುಂದಾದ ಗೂಗಲ್.
Gmail Account Cancellation: ಸಾಕಷ್ಟು ಜನರು ಜಿಮೈಲ್ (Gmail ) ಅನ್ನು ಬಳಸುತ್ತಾರೆ. ಆದರೆ ಅವರು ಒಂದು ಬಾರಿಯೂ ಸಹ ಜಿಮೈಲ್ ಅನ್ನು ಲಾಗಿನ್ ಮಾಡುವುದಿಲ್ಲ. ಜಿಮೈಲ್ ಲಾಗಿನ್ ಮಾಡುವುದು ಅವಶ್ಯಕವಾಗಿದೆ. ಕಳೆದ ಎರಡು ವರ್ಷದಿಂದ ಲಾಗಿನ್ ಮಾಡದೆ ಇರುವ ಜಿಮೈಲ್ ಅನ್ನು ಗೂಗಲ್ ಸಂಪೂರ್ಣವಾಗಿ ಡಿಲೀಟ್ ಮಾಡಲು ನಿರ್ಧಾರ ಕೈಗೊಂಡಿದೆ.
![Gmail Account Cancellation](https://nadunudi.in/wp-content/uploads/2023/05/gmail.png)
ಇದೀಗ ಗೂಗಲ್ ಹೊಸ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಕಳೆದ ಎರಡು ವರ್ಷದಿಂದ ಒಂದು ಬಾರಿ ಸಹ ಲಾಗಿನ್ ಮಾಡದ ಜಿಮೈಲ್ ಅನ್ನು ಗೂಗಲ್ ಪರ್ಮನೆಂಟ್ ಆಗಿ ಡಿಲೀಟ್ ಮಾಡಲು ನಿರ್ಧರಿಸಿದೆ. ಸತತ ಎರಡು ವರ್ಷದಿಂದ ಜಿಮೈಲ್ ಲಾಗಿನ್ ಮಾಡದೆ ಇದ್ದವರಿಗೆ ಈ ಮಾಹಿತಿ ಬಗ್ಗೆ ತಿಳಿದುಕೊಳ್ಳಬೇಕು.
ಲಾಗಿನ್ ಮಾಡದ ಜಿಮೈಲ್ ಇನ್ನು ಮುಂದೆ ಡಿಲೀಟ್ ಆಗಲಿದೆ
ಇದೆ ವರ್ಷದ ಡಿಸೆಂಬರ್ ನಲ್ಲಿ ಈ ಪ್ರಕ್ರಿಯೆಯನ್ನು ಅದು ಆರಂಭಿಸಲಿದೆ. ಆದರೆ ಇದು ವಯಕ್ತಿಕ ಖಾತೆಗಳಿಗೆ ಮಾತ್ರ ಅನ್ವಯವಾಗಲಿದ್ದು ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ಉದ್ಯಮ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.
![Google has now decided to ban all Gmail accounts that have not been used for two years.](https://nadunudi.in/wp-content/uploads/2023/05/gmail-account.png)
ಎರಡು ವರ್ಷದಿಂದ ಬಳಸದ gmail ಖಾತೆಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲು ಗೂಗಲ್ ಹೊರಟಿದೆ. ಡಿಲೀಟ್ ಮಾಡಿದ ಖಾತೆಗಳ ಇಮೇಲ್ ವಿಳಾಸ, ಜಿಮೈಲ್ ಸಂದೇಶಗಳು. ಘಟನಾವಳಿಗಳ ಕ್ಯಾಲೆಂಡರ್ ಗಳು, Youtube ಮತ್ತು ಗೂಗಲ್ ಫೋಟೋಗಳು ಇನ್ನುಮುಂದೆ ಲಭ್ಯವಾಗುವುದಿಲ್ಲ.