Electric Scooter: ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ಸಿಗಲಿದೆ 5 ವರ್ಷ ಬ್ಯಾಟರಿ ಗ್ಯಾರೆಂಟಿ, ಕಡಿಮೆ ಬೆಲೆ ಮತ್ತು ಬೆಸ್ಟ್ ಮೈಲೇಜ್.

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ಸಿಗಲಿದೆ 5 ವರ್ಷ ಬ್ಯಾಟರಿ ಗ್ಯಾರೆಂಟಿ

Godavari Electric Motors: ಪ್ರಸ್ತುತ ದೇಶಿಯ ಆಟೋ ವಲಯದಲ್ಲಿ Electric Vehicle ಗಳು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ Electric Scooter ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳಿಂದ ಹಿಡಿದು, ಅನೇಕ ಸ್ಟಾರ್ಟ್ ಅಪ್ ಕಂಪನಿಗಳು Electric Scooter ಗಳನ್ನೂ ಲಾಂಚ್ ಮಾಡುತ್ತಿದೆ. ಇದೀಗ Godavari Electric Motors ಮಾರುಕಟ್ಟೆಯಲ್ಲಿ ತನ್ನ ಬಹುನಿರೀಕ್ಷಿತ EV ಯನ್ನು ಬಿಡುಗಡೆ ಮಾಡಲು ಮುಂದಾಗಿದೆ.

Godavari Electric Motors
Image Credit: Salepubsm

ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದರೆ ಸಿಗಲಿದೆ 5 ವರ್ಷ ಬ್ಯಾಟರಿ ಗ್ಯಾರೆಂಟಿ
ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್ ತನ್ನ eblu ಶ್ರೇಣಿಯ ಎಲೆಕ್ಟ್ರಿಕ್ 2-ವೀಲರ್‌ ಗಳು ಮತ್ತು 3-ವೀಲರ್‌ ಗಳಿಗೆ ಬ್ಯಾಟರಿ ವಾರಂಟಿಯಲ್ಲಿ ಗಮನಾರ್ಹ ಹೆಚ್ಚಳವನ್ನು ಘೋಷಿಸಿದೆ. ಗೋದಾವರಿ ಕಂಪನಿಯು ಬ್ಯಾಟರಿ ತಂತ್ರಜ್ಞಾನದ ಉತ್ತಮ ಗುಣಮಟ್ಟ ಮತ್ತು ದೀರ್ಘಾಯುಷ್ಯವನ್ನು ಒತ್ತಿಹೇಳಲು ಭರವಸೆ ನೀಡುತ್ತದೆ.

ಇನ್ನು 25ನೇ ಏಪ್ರಿಲ್ 2024 ರಿಂದ ಜಾರಿಗೆ ಬರುವಂತೆ, ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್‌ ನ EV ದ್ವಿಚಕ್ರ ವಾಹನ eblu Feo ಶ್ರೇಣಿಯ ಬ್ಯಾಟರಿಗಳ ವಾರಂಟಿಯನ್ನು ಪ್ರಭಾವಶಾಲಿ 5 ವರ್ಷಗಳು ಅಥವಾ 50,000 ಕಿಮೀ ವರೆಗೆ ವಿಸ್ತರಿಸಲಾಗಿದೆ. ಈ ಎರಡರಲ್ಲಿ ಯಾವುದು ಮೊದಲು ಬರುತ್ತದೆಯೋ ಅದನ್ನು ಪರಿಗಣಿಸಲಾಗುತ್ತದೆ. ಅದೇ ರೀತಿ, eblu Rozee ಮತ್ತು eblu Reino ಅನ್ನು ಒಳಗೊಂಡಿರುವ ಕಂಪನಿಯ EV ತ್ರಿಚಕ್ರ ವಾಹನ ಶ್ರೇಣಿಯ ಬ್ಯಾಟರಿ ವಾರಂಟಿಯನ್ನು ಈಗ 5 ವರ್ಷಗಳು ಅಥವಾ 80,000 ಕಿಲೋಮೀಟರ್‌ ಗಳಿಗೆ ವಿಸ್ತರಿಸಲಾಗಿದೆ.

Godavari Electric Scooter
Image Credit: Motownindia

ಕಡಿಮೆ ಬೆಲೆ ಮತ್ತು ಬೆಸ್ಟ್ ಮೈಲೇಜ್
ಬ್ಯಾಟರಿ ವಾರಂಟಿಯೊಂದಿಗೆ ಬರಲಿರುವ ಈ ಎಲೆಕ್ಟ್ರಿಕ್ ವಾಹನಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜನರು ಬ್ಯಾಟರಿ ಸಾಮರ್ಥ್ಯ ಹೆಚ್ಚಿರುವ ವಾಹನವನ್ನೇ ಖರೀದಿಸಲು ಬಯಸುತ್ತಾರೆ. ಹೀಗಿರುವಾಗ ಬ್ಯಾಟರಿ ವಾರಂಟಿ ಸಿಗಲಿರುವ ಈ ವಾಹನದ ಖರೀದಿಗೆ ಜನರು ಮನಸ್ಸು ಮಾಡುವುದಂತೂ ನಿಜ. ನೀವು ಈ ನೂತನ ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸಿದರೆ ಬ್ಯಾಟರಿ ಬಾಲಿಕೆಯ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಈ ಸ್ಕೂಟರ್ ನಿಮಗೆ ಸಿಂಗಲ್ ಚಾರ್ಜ್ ನಲ್ಲಿ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಕೈಕೇಟುಕುವ ದರದಲ್ಲಿ ಕೂಡ ಬಿಡುಗಡೆ ಆಗಿದೆ.

Join Nadunudi News WhatsApp Group

Godavari Electric Scooter Price
Image Credit: Times Now News

Join Nadunudi News WhatsApp Group