Gold Price 2024: 72000 ರೂಪಾಯಿಗೆ ತಲುಪಲಿದೆ ಚಿನ್ನದ ಬೆಲೆ, ಹೊಸ ವರ್ಷಕ್ಕೆ ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ

ಹೊಸ ವರ್ಷದ ಮೊದಲ ತಿಂಗಳೇ ದಾಖಲೆಯ ಏರಿಕೆಯ ಕಾಣಲಿದೆ ಚಿನ್ನದ ಬೆಲೆ, 72000 ರೂಪಾಯಿಗೆ ತಲುಪಲಿದೆ

Gold Price Hike From January 1st 2024: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಚಿನ್ನ ಬಡವರ ಕೈಗೆ ಸಿಗದಂತಾಗುತ್ತಿದೆ. 2023 ರ ಆರಂಭದಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 2022 ರ ಅಂತ್ಯದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ 2023 ರ ಇಡೀ ವರ್ಷದಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ದುಬಾರಿಯಾಗಿದೆ. ಚಿನ್ನದ ಖರೀದಿಗೆ ಜನರು ಮನಸ್ಸು ಮಾಡುತ್ತಿದ್ದರೂ ಕೂಡ ಚಿನ್ನದ ಬೆಲೆ ಅವರನ್ನು ಕಂಗಾಲು ಮಾಡುತ್ತಿದೆ.

ಸದ್ಯ 2024 ರ ಚಿನ್ನದ ಬೆಲೆ ಸಮೀಕ್ಷೆ ಬಿಡುಗಡೆ ಆಗಿದ್ದು ಇದು ಜನರ ಬೇಸರಕ್ಕೆ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು 2024 ರಲ್ಲಿ ಚಿನ್ನದ ಬೆಲೆ ದಾಖಲೆಯ ಮೊತ್ತಕ್ಕೆ ತಲುಪಲಿದ್ದು ಬಡವರ ಪಾಲಿಗೆ ಚಿನ್ನ ಅನ್ನುವುದು ಬರಿ ಕನಸಾಗಿ ಉಳಿಯಲಿದೆ ಎಂದು ಹೇಳಿಸದರೆ ತಪ್ಪಾಗಲ್ಲ. ಹಾಗಾದರೆ 2024 ರಲ್ಲಿ ಚಿನ್ನದ ಬೆಲೆ ಎಷ್ಟಾಗಲಿದೆ ಅನ್ನುವುದರ ಬಗ್ಗೆ ತಿಳಿಯೋಣ.

gold price hikes update 2024
Image Credit: Original Source

ಗಗನಕ್ಕೇರುತ್ತಿದೆ ಚಿನ್ನದ ಬೆಲೆ, ಆತಂಕದಲ್ಲಿ ಜನಸಾಮಾನ್ಯರು
ವರ್ಷದ ಆರಂಭದಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ವರ್ಷದ ಕೊನೆಯಲ್ಲಾದರೂ ಇಳಿಕೆ ಕಾಣುತ್ತದೆ ಎನ್ನುವ ನಿರೀಕ್ಷೆ ಜನರಲ್ಲಿ ಇದ್ದಿತ್ತು. ಆದರೆ ವರ್ಷದ ಕೊನೆಯ ತಿಂಗಳು ಕೂಡ ಚಿನ್ನ ದುಬಾರಿಯಾಗುತ್ತ ಹೋಗುತ್ತಿದೆ. ಚಿನ್ನದ ಬೆಲೆ ಸತತ ಏರಿಕೆ ಮಾರುಕಟ್ಟೆಯಲ್ಲಿ ಚಿನ್ನದ ಮಾರಾಟದ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿದೆ. ವಾರದಲ್ಲಿ ಒಂದೊಂದು ದಿನ ಚಿನ್ನದ ಬೆಲೆ ಇಳಿಕೆಯಾದರೆ ಹೆಚ್ಚಿನ ದಿನ ಏರಿಕೆಯೇ ಆಗುತ್ತದೆ. ದಿನದಲ್ಲಿ ಒಮ್ಮೆಲೇ 100 ಗ್ರಾಂ ನಲ್ಲಿ 5000 ರೂ. ಗಳು ಏರಿಕೆಯಾಗಿರುವ ಉದಾಹರಣೆಗಳು ಇವೆ.

ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುವ ಕಾರಣ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಅದರಲ್ಲೂ ಇನ್ನೇನು ಮದುವೆಯ ಸೀಸನ್ ಹಬ್ಬದ ಸೀಸನ್ ಆರಂಭವಾಗಲಿದೆ. ಶುಭಕಾರ್ಯಕ್ಕೆ ಜನರು ಹೆಚ್ಚಾಗಿ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಚಿನ್ನದ ಬೆಲೆ ಎಷ್ಟೇ ಏರಿಕೆಯಾದರು ಕೂಡ ಮದುವೆಯ ಶುಭಾರಂಭಕ್ಕೆ ಚಿನ್ನದ ಖರೀದಿ ಅಗತ್ಯವಾಗಲುತ್ತದೆ. ಹೀಗಿರುವಾಗಲೇ ಚಿನ್ನದ ಬೆಲೆ ಏರಿಕೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

gold price goes 72000 in 2024 in india
Image Credit: Original Source

ಹೊಸ ವರ್ಷದಲ್ಲಿ ಚಿನ್ನದ ಬೆಲೆ 72000 ರೂ. ತಲುಪಲಿದೆ
ಇನ್ನು ಹೊಸ ವರ್ಷದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದಲ್ಲಿ ಕೂಡ ಚಿನ್ನದ ಮೇಲಿನ ಬೇಡಿಕೆ ಹೆಚ್ಚಿರುತ್ತದೆ. ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಮಾರುಕಟ್ಟೆಯಲ್ಲಿ ಚಿನ್ನ ದುಬಾರಿಯಾಗುತ್ತದೆ. ಸದ್ಯ ಆಭರಣ ಪ್ರಿಯರಿಗೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಹೊಸ ವರ್ಷದಲ್ಲಿ ಚಿನ್ನದ ಬೆಲೆ ಹತ್ತು ಗ್ರಾಮ್ ಗೆ ಬರೋಬ್ಬರಿ 72,000 ರೂ. ಏರಿಕೆಯಾಗಿದೆ.

Join Nadunudi News WhatsApp Group

ಜನವರಿ 1 2024 ರಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂ ನಲ್ಲಿ 72000 ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ಇದೆ ರೀತಿ ಚಿನ್ನದ ಬೆಲೆ ಏರಿಕೆಯಾಗುತ್ತ ಹೋದರೆ ಚಿನ್ನ ಖರೀದಿ ಅಸಾದ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. 2023 ರಲ್ಲಿ ಶೇ. 15 ರಷ್ಟು ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹತ್ ಆರ್ಥಿಕ ಪರಿಸರದೊಳಗೆ ಚಿನ್ನ 2024 ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. 2024 ರ ಹೊಸ ವರ್ಷದಂತೂ ಚಿನ್ನ ಮತ್ತಷ್ಟು ದುಬಾರಿ ಆಗಲಿದೆ.

Join Nadunudi News WhatsApp Group