Gold Price Fall: ವರ್ಷದ ಮೊದಲ ವಾರವೇ ದಾಖಲೆಯ ಇಳಿಯತ್ತ ಮುಖ ಮಾಡಿದ ಚಿನ್ನದ ಬೆಲೆ, 400 ರೂಪಾಯಿ ಇಳಿಕೆ.

ನಿನ್ನೆ ಇಳಿಕೆ ಕಂಡ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ 400 ರೂಪಾಯಿ ಇಳಿಕೆ

Gold Price Fall 2024: ಭಾರತದಲ್ಲಿ ಚಿನ್ನದ ಬೆಲೆ ಎಷ್ಟೇ ಏರಿಕೆ ಕಂಡರೂ ಭಾರತೀಯರಿಗೆ ಚಿನ್ನದ ಮೇಲೆ ಒಲವು ಕಡಿಮೆಯಾಗುದಿಲ್ಲ. ಪ್ರತಿನಿತ್ಯ ಆಭರಣ ಪ್ರಿಯರು ಚಿನ್ನದ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿರುತ್ತಾರೆ. 2023 ರ ಆರಂಭದಿಂದ ಕೊನೆವರೆಗೂ ಚಿನ್ನದ ಬೆಲೆಯಲ್ಲಿ ಇಳಿಕೆಗಿಂತ ಹೆಚ್ಚಿನ ಏರಿಕೆ ಕಂಡು ಬಂದಿದೆ.

ಇದೀಗ ನಾವು 2024 ರ ಹೊಸ ವರ್ಷಕ್ಕೆ ಈಗಾಗಲೇ ಕಾಲಿಟ್ಟಿದ್ದೇವೆ. 2024 ರ ಹೊಸ ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ. ಆದರೆ ನಿನ್ನೆ ಹಾಗೂ ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಸಿಹಿ ಸುದ್ದಿ ನೀಡಿದೆ.

Gold Price Down In January 4
Image Credit: Zeebiz

ಇಂದು ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ
ಇನ್ನು 2024 ರ ಆರಂಭದಲ್ಲಿ ಚಿನ್ನದ ಬೆಲೆ ಏರಿಕೆ ಕಂಡಿತ್ತು. ಈ ಕಾರಣಕ್ಕೆ ಜನರು ಚಿನ್ನದ ಬೆಲೆ ಸತತ ಏರಿಕೆಯಾಗುತ್ತದೆ ಎಂದು ಕಂಗಾಲಾಗಿದ್ದರು. ಆದರೆ ಚಿನ್ನದ ಬೆಲೆ ನಿನ್ನೆ ಭರ್ಜರಿ 250 ರೂಪಾಯಿ ಇಳಿಕೆ ಕಂಡಿದೆ. ಇನ್ನು ನಿನ್ನೆ ಇಳಿಕೆ ಕಂಡ ಬೆನ್ನಲ್ಲೇ ಇದೀಗ ಇಂದು ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ 400 ರೂಪಾಯಿ ಇಳಿಕೆಯಾಗಿರುವುದು ನಿಜಕ್ಕೂ ಆಭರಣ ಪ್ರಿಯರಿಗೆ ಖುಷಿ ನೀಡಿದೆ. ಚಿನ್ನ ಖರೀದಿಗೆ ಒಂದೊಳ್ಳೆ ಸಮಯಾವಕಾಶ ದೊರೆಕಿದೆ ಎಂದರೆ ತಪ್ಪಾಗಲಾರದು.

22 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂಪಾಯಿ ಇಳಿಕೆ ಕಾಣುವ ಮೂಲಕ 5,810 ರೂ. ಆಗಿದೆ.

*ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 320 ರೂಪಾಯಿ ಇಳಿಕೆ ಕಾಣುವ ಮೂಲಕ 46,480 ರೂ. ಆಗಿದೆ.

Join Nadunudi News WhatsApp Group

*ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂಪಾಯಿ ಇಳಿಕೆ ಕಾಣುವ ಮೂಲಕ 58,100 ರೂ. ಆಗಿದೆ.

*ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,000 ರೂಪಾಯಿ ಇಳಿಕೆ ಕಾಣುವ ಮೂಲಕ 5,81,000 ರೂ. ಆಗಿದೆ.

22 And 24 Carat Gold Rate Down
Image Credit: ABP news

24 ಕ್ಯಾರಟ್ ಚಿನ್ನದ ಇಂದಿನ ಬೆಲೆ
*ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 44 ರೂಪಾಯಿ ಇಳಿಕೆ ಕಾಣುವ ಮೂಲಕ 6,338 ರೂ. ಆಗಿದೆ.

*ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 352 ರೂಪಾಯಿ ಇಳಿಕೆ ಕಾಣುವ ಮೂಲಕ 50,704 ರೂ. ಆಗಿದೆ.

*ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂಪಾಯಿ ಇಳಿಕೆ ಕಾಣುವ ಮೂಲಕ 63,380 ರೂ. ಆಗಿದೆ.

*ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 4,400 ರೂಪಾಯಿ ಇಳಿಕೆ ಕಾಣುವ ಮೂಲಕ 6,33,800 ರೂ. ಆಗಿದೆ.

Join Nadunudi News WhatsApp Group