Gold: ಒಂದೇ ದಿನದಲ್ಲಿ 500 ರೂ ಏರಿಕೆಯಾದ ಚಿನ್ನದ ಬೆಲೆ, ಇನ್ನುಮುಂದೆ ಚಿನ್ನ ಇನ್ನಷ್ಟು ದುಬಾರಿ.

ಸತತವಾಗಿ ಏರಿಕೆ ಕಾಣುತ್ತಿರುವ ಬಂಗಾರದ ಬೆಲೆ, ಬೇಸರ ಹೊರಹಾಕಿದ ಚಿನ್ನ ಪ್ರಿಯರು.

Gold Price Hike Today: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿದ್ದಂತೆ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನಾ ದುಬಾರಿಯಾಗುತ್ತಿದೆ. ಪ್ರತಿ ನಿತ್ಯ ಚಿನ್ನದ ಬೆಲೆಯಲ್ಲಿ (Gold Price) ಸತತ ಏರಿಕೆ ಕಾಣುತ್ತಿರುವ ಕಾರಣ ಆಭರಣ ಪ್ರಿಯರು ಕಂಗಾಲಾಗಿದ್ದಾರೆ.

ದಿನ ಕಳೆಯುತ್ತಿದ್ದಂತೆ ಚಿನ್ನದ ಬೆಲೆ 300 ರಿಂದ 400 ರೂ. ಏರಿಕೆಯಾಗುತ್ತಿದೆ. ನಿನ್ನೆಯಷ್ಟೇ ಏರಿಕೆ ಕಂಡಿದ್ದ ಚಿನ್ನ ಇಂದು ಮತ್ತೆ ಏರಿಕೆಯಾಗುವ ಮೂಲಕ ಜನಮಸಾಮಾನ್ಯರಿಗೆ ಅಚ್ಚರಿ ಮೂಡಿಸಿದೆ. ಇಂದು ಚಿನ್ನದಲ್ಲಿ ದೊಡ್ಡ ಮಟ್ಟಿಗೆ ಏರಿಕೆಯಾಗಿದೆ.

22 and 24 carat gold price
Image Credit: Zeebiz

ಚಿನ್ನದ ಖರೀದಿ ಗ್ರಾಹಕರಿಗೆ ಇನ್ನೂ ಕಷ್ಟ
ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 120 ರೂ. ಏರಿಕೆಯಾಗಿತ್ತು. ಇಂದು ಮತ್ತೆ ಹತ್ತು ಗ್ರಾಂ ಚಿನ್ನದಲ್ಲಿ ಬರೋಬ್ಬರಿ 500 ರೂ. ಏರಿಕೆ ಆಗುವ ಮೂಲಕ ಆಭರಣ ಪ್ರಿಯರನ್ನು ನಿರಾಶೆಗೊಳಿಸಿದೆ. ಈ ತಿಂಗಳಿನಲ್ಲಿ ಒಂದೆರಡು ಬಾರಿ ಮಾತ್ರ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಇಂದು ಮತ್ತೆ ಚಿನ್ನ ಬೆಲೆಯಲ್ಲಿ ಏರಿಕೆಯಾಗಿದ್ದು ಚಿನ್ನದ ಖರೀದಿ ಗ್ರಾಹಕರಿಗೆ ಇನ್ನಷ್ಟು ಕಷ್ಟವಾಗುತ್ತಿದೆ.

ಇಂದು 22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 5,000 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,56,000 ರೂ. ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,510 ಆಗಿದ್ದು, ಇಂದು 5,560 ರೂ. ಆಗಿದೆ.

ಇಂದು ಒಂದು ಗ್ರಾಂ ಚಿನ್ನದಲ್ಲಿ 50 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 400 ರೂ. ಏರಿಕೆಯಾಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 500 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 55,600 ರೂ. ಆಗಿದೆ. ನಿನ್ನೆ ಹತ್ತು ಚಿನ್ನ 55,100 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 44,080 ಇದ್ದು, ಇಂದು 44,480 ರೂ. ಆಗಿದೆ.

Join Nadunudi News WhatsApp Group

22 and 24 carat gold price
Image Credit: Livemint

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (24 Carat Gold Rate) 
ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 5500 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 60,6500 ರೂ. ಗಡಿ ತಲುಪಿದೆ. ನಿನ್ನೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,010 ರೂ. ಇದ್ದು ಇಂದು 6,065 ರೂ. ತಲುಪಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 550 ರೂ. ಏರಿಕೆಯಾಗಿದೆ.

ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,100 ಇದ್ದು, ಇಂದು 60,650 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,080 ಇದ್ದು, ಇಂದು 48,520 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 440 ರೂ. ಏರಿಕೆಯಾಗಿದ್ದು ಚಿನ್ನದ ಬೆಲೆ ಐತಿಹಾಸಿಕ ಏರಿಕೆ ಕಾಣುತ್ತಿದೆ.

Join Nadunudi News WhatsApp Group