Gold Rate 2024: ಜನವರಿ ತಿಂಗಳ ಮೊದಲ ವಾರವೇ ಏರಿಕೆಯತ್ತ ಮುಖ ಮಾಡಿದ ಚಿನ್ನದ ಬೆಲೆ, ಚಿನ್ನ ಮತ್ತೆ ದುಬಾರಿ

ಹೊಸ ವರ್ಷದ ಎರಡನೇ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆ.

January 2nd Gold Price: ಇದೀಗ 2024 ಆರಂಭವಾಗಿದೆ. ಹೊಸ ವರ್ಷದಲ್ಲಿ ಜನರು ಹೆಚ್ಚಾಗಿ ಚಿನ್ನದ ಬೆಲೆಯ ಬಗ್ಗೆ ವಿವರ ತಿಳಿಯಲು ಕುತೂಲರಾಗಿದ್ದಾರೆ. ಕಳೆದ ವರ್ಷದಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆ ಹೊಸ ವರ್ಷದಲ್ಲಾದರೂ ಇಳಿಕೆಯಾಗುತ್ತದಾ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಹೊಸ ವರ್ಷದ ಮೊದಲ ದಿನ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಡಿಸೆಂಬರ್ 29 ರಂದು 350 ರೂ. ಇಳಿಕೆ ಕಂಡ ನಂತರ ಸತತ ಮೂರು ದಿನಗಳು ಚಿನ್ನದ ಬೆಲೆ ತಟಸ್ಥವಾಗಿತ್ತು.

gold price update january 2024
Image Credit: Original Source

ಹೊಸ ವರ್ಷದ ಎರಡನೇ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆ
ಡಿಸೇಂಬರ್ 29 ರಿಂದ ಜನವರಿ 1 2024 ರ ವರೆಗೆ ಹತ್ತು ಗ್ರಾಂ ಚಿನ್ನ 58550 ರೂ. ಗೆ ಲಭ್ಯವಾಗಿತ್ತು. ಮೂರು ದಿನಗಳು ಸ್ಥಿರತೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆ ಕಾಣುತ್ತದೆ ಎಂದು ಕಾದು ಕುಳಿತವರಿಗೆ ಇದೀಗ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.

ವರ್ಷದ ಎರಡನೇ ದಿನವೇ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ವರ್ಷದ ಆರಂಭದಲ್ಲಿಯೇ ಚಿನ್ನದ ಬೆಲೆ ಏರಿಕೆಯಾದರೆ ಇನ್ನು ಇಳಿಕೆಯ ಸಾಧ್ಯತೆ ಕಷ್ಟ ಎನ್ನುವ ಆತಂಕ ಜನರಲ್ಲಿ ಹುಟ್ಟಿಕೊಂಡಿದೆ. ಇದೀಗ ನಾವು ವರ್ಷದ ಆರಂಭದ ಎರಡನೇ ದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವ ಬಗ್ಗೆ ವಿವರ ತಿಳಿಯೋಣ.

22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ತಲುಪಿದೆ..?
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 20 ರೂ. ಏರಿಕೆಯಾಗುವ ಮೂಲಕ 5,855 ರೂ. ಇದ್ದ ಚಿನ್ನದ ಬೆಲೆ 5,875 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ರೂ. ಏರಿಕೆಯಾಗುವ ಮೂಲಕ 46,840 ರೂ. ಇದ್ದ ಚಿನ್ನದ ಬೆಲೆ 47,000 ರೂ. ತಲುಪಿದೆ.

Join Nadunudi News WhatsApp Group

gold price hike january 2024
Image Credit: original Source

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗುವ ಮೂಲಕ 58,550 ರೂ. ಇದ್ದ ಚಿನ್ನದ ಬೆಲೆ 58,750 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,000 ರೂ. ಏರಿಕೆಯಾಗುವ ಮೂಲಕ 5,85,500 ರೂ. ಇದ್ದ ಚಿನ್ನದ ಬೆಲೆ 5,87,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ. ಏರಿಕೆಯಾಗುವ ಮೂಲಕ 6,387 ರೂ. ಇದ್ದ ಚಿನ್ನದ ಬೆಲೆ 6,409 ರೂ. ತಲುಪಿದೆ.

•ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ. ಏರಿಕೆಯಾಗುವ ಮೂಲಕ 51,096 ರೂ. ಇದ್ದ ಚಿನ್ನದ ಬೆಲೆ 51,272 ರೂ. ತಲುಪಿದೆ.

•ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 220 ರೂ. ಏರಿಕೆಯಾಗುವ ಮೂಲಕ 63,870 ರೂ. ಇದ್ದ ಚಿನ್ನದ ಬೆಲೆ 64,090 ರೂ. ತಲುಪಿದೆ.

•ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,200 ರೂ. ಏರಿಕೆಯಾಗುವ ಮೂಲಕ 6,38,700 ರೂ. ಇದ್ದ ಚಿನ್ನದ ಬೆಲೆ 6,40,900 ರೂ. ತಲುಪಿದೆ.

Join Nadunudi News WhatsApp Group