July End: ತಿಂಗಳ ಅಂತ್ಯದಲ್ಲಿ 300 ರೂ ಏರಿಕೆಯಾದ ಚಿನ್ನದ ಬೆಲೆ, ಬೇಸರದಲ್ಲಿ ಖರೀದಿದಾರರು.

ಜುಲೈ ತಿಂಗಳಲ್ಲಿ ಇಳಿಕೆಗಿಂತ ಹೆಚ್ಚಾಗಿ ಏರಿಕೆ ಕಂಡ ಬಂಗಾರದ ಬೆಲೆ.

Gold Price hike July End: ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿದ್ದಂತೆ ದೇಶಿಯ ಮಾರುಕಟ್ಟೆಯಲ್ಲಿ ಕೂಡ ಚಿನ್ನಾ ದುಬಾರಿಯಾಗುತ್ತಿದೆ. ಪ್ರತಿ ನಿತ್ಯ ಚಿನ್ನದ ಬೆಲೆಯಲ್ಲಿ (Gold Price) ಸತತ ಏರಿಕೆ ಕಾಣುತ್ತಿರುವ ಕಾರಣ ಆಭರಣ ಪ್ರಿಯರು ಕಂಗಾಲಾಗಿದ್ದಾರೆ. ದಿನ ಕಳೆಯುತ್ತಿದ್ದಂತೆ ಚಿನ್ನದ ಬೆಲೆ 400 ರಿಂದ 600 ರೂ. ಏರಿಕೆಯಾಗುತ್ತಿದೆ. ಜುಲೈ ತಿಂಗಳು ಮುಗಿದು ಆಗಸ್ಟ್ ಹತ್ತಿರವಾಗುತ್ತಿದ್ದರು ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.

22 carat gold price today
Image Credit: Newindianexpress

ಆಭರಣ ಪ್ರಿಯರ ಬೇಸರ ನೀಡುತ್ತಿರುವ ಚಿನ್ನದ ಬೆಲೆ
ಕಳೆದ ವಾರ ಕೂಡ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗಿತ್ತು. ಇಂದು ಮತ್ತೆ ಹತ್ತು ಗ್ರಾಂ ಚಿನ್ನದಲ್ಲಿ 300 ರೂ. ಏರಿಕೆ ಆಗುವ ಮೂಲಕ ಆಭರಣ ಪ್ರಿಯರನ್ನು ನಿರಾಶೆಗೊಳಿಸಿದೆ. ಜುಲೈ ತಿಂಗಳ ಪ್ರಾರಂಭದಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಈ ತಿಂಗಳಿನಲ್ಲಿ ಒಂದೆರಡು ಬಾರಿ ಮಾತ್ರ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಚಿನ್ನದ ಬೆಲೆಯ ಕೇವಲ 150 ರಿಂದ 200 ರೂ. ಮಾತ್ರ ಇಳಿಕೆಯಾಗುತ್ತದೆ. ಇಂದು ಮತ್ತೆ ಚಿನ್ನ ಬೆಲೆಯಲ್ಲಿ ಏರಿಕೆಯಾಗಿದ್ದು ಚಿನ್ನದ ಖರೀದಿ ಗ್ರಾಹಕರಿಗೆ ಇನ್ನಷ್ಟು ಕಷ್ಟವಾಗುತ್ತಿದೆ.

ಇಂದು 22 ಕ್ಯಾರೆಟ್ ಚಿನ್ನದ ಬೆಲೆ (22 Carat Gold Rate) 
ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 5,515 ಆಗಿದ್ದು, ಇಂದು 5545 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 30 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 240 ಏರಿಕೆಯಾಗಿದೆ.

24 carat gold price today
Image Credit: Economictimes

ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 300 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 554,50 ರೂ. ಆಗಿದೆ. ನಿನ್ನೆ ಹತ್ತು ಚಿನ್ನ 55,150 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 42,120 ಇದ್ದು, ಇಂದು 44,360 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3000 ರೂ. ಏರಿಕೆಯಾಗಿದೆ. ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,54,500 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (24 Carat Gold Rate) 
ನಿನ್ನೆ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 6,016 ರೂ. ಇದ್ದು ಇಂದು 6,049 ರೂ. ತಲುಪಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 33 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 60,160 ಇದ್ದು, ಇಂದು 60,490 ರೂ. ಆಗಿದೆ. ಹತ್ತು ಗ್ರಾಂ ಚಿನ್ನದಲ್ಲಿ ಇಂದು ಬರೋಬ್ಬರಿ 330 ರೂ. ಏರಿಕೆಯಾಗಿದೆ.

Join Nadunudi News WhatsApp Group

Gold Price hike July End
Image Credit: Timesnownews

ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 48,1b28 ಇದ್ದು, ಇಂದು 48,392 ರೂ. ಆಗಿದೆ.ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 264 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 3,300 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 6,04,900 ರೂ. ಗಡಿ ತಲುಪಿದೆ.

Join Nadunudi News WhatsApp Group