Gold Purchase: ಚಿನ್ನ ಖರೀದಿಸುವಾಗ ಇದಕ್ಕಿಂತ ಹೆಚ್ಚು ನಗದು ಹಣ ಕೊಡುವಂತಿಲ್ಲ, ಕೇಂದ್ರದ ಇನ್ನೊಂದು ಹೊಸ ನಿಯಮ.

ಚಿನ್ನ ಖರೀದಿಸುವ ಮುನ್ನ ಕೆಲವು ನಿಯಮಗಳನ್ನು ತಿಳಿದುಕೊಳ್ಳುದು ಉತ್ತಮ.

Gold Purchase Limit In Cash: ಸಾಮಾನ್ಯವಾಗಿ ಮಹಿಳೆಯರು ಬಂಗಾರದ ಮೇಲೆ ಹೆಚ್ಚಿನ ಒಲವನ್ನು ಹೊಂದಿರುತ್ತಾರೆ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರು ಚಿನ್ನ ಮತ್ತು ಬೆಳ್ಳಿಯನ್ನು ಕೊಂಡುಕೊಳ್ಳಲು ಮುಂದಾಗುತ್ತಾರೆ.

ಇದೀಗ ದೇಶದಲ್ಲಿ ಹಬ್ಬದ ಸೀಸನ್ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಧನತೇರಸ್ ಹಬ್ಬವೂ ಬರಲಿದೆ. ಧನತೇರಸ್ ಹಬ್ಬದಂದು ಚಿನ್ನ ಮತ್ತು ಬೆಳ್ಳಿಯನ್ನು ಹೆಚ್ಚಾಗಿ ಖರೀದಿಸುತ್ತಾರೆ. ಹಾಗೆ ಚಿನ್ನ ಖರೀದಿಸುವ ಮುನ್ನ ಕೆಲವು ನಿಯಮಗಳನ್ನು ತಿಳಿದುಕೊಳ್ಳುದು ಉತ್ತಮ.

gold purchase limit
Image Credit: Governmentjobsinkarnataka

ನಗದು ರೂಪದಲ್ಲಿ ಚಿನ್ನ ಖರೀದಿಸಲು ಮಿತಿ
ಜನರು ಹೆಚ್ಚಾಗಿ ನಗದು ರೂಪದಲ್ಲಿ ಚಿನ್ನವನ್ನು ಖರೀದಿಸಲು ಬಯಸುತ್ತಾರೆ. ಆದರೆ ಒಬ್ಬ ವ್ಯಕ್ತಿ ಎಷ್ಟು ಚಿನ್ನವನ್ನು ನಗದು ರೂಪದಲ್ಲಿ ಖರೀದಿಸಬಹುದು? ಎನ್ನುವ ಬಗ್ಗೆ ಕೆಲವರ ಮನಸಿನಲ್ಲಿ ಗೊಂದಲಗಳಿರುತ್ತದೆ. ಇದೀಗ ನಾವು ನಗದು ರೂಪದಲ್ಲಿ ಚಿನ್ನ ಖರೀದಿಸಲು ಮಿತಿ (Gold Purchase Limit) ಇದೆಯೇ ಇಲ್ಲವೇ ಎಂದು ತಿಳಿಯೋಣ.

ಚಿನ್ನ ಖರೀದಿ ಮೇಲೆ ಆದಾಯ ತೆರಿಗೆ ನಿಯಮ
ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ಚಿನ್ನವನ್ನು ನಗದು ರೂಪದಲ್ಲಿ ಖರೀದಿ ಮಾಡಲು ಯಾವುದೇ ಮಿತಿ ವಿಧಿಸಿಲ್ಲ, ಆದರೆ ಯಾವುದೇ ಒಂದು ವಹಿವಾಟಿನಲ್ಲಿ ಸ್ವೀಕರಿಸುವವರು ರೂ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸಬಾರದು ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸಲು ನೀವು ಮೊತ್ತವನ್ನು ನಗದು ರೂಪದಲ್ಲಿ ನೀಡಬಹುದು, ಆದರೆ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಮಾರಾಟಗಾರರಿಂದ ಸ್ವೀಕರಿಸಲಾಗುವುದಿಲ್ಲ. ಚಿನ್ನಾಭರಣ ಮಾರಾಟಗಾರರು 2 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆ ಸ್ವೀಕರಿಸಿದ ಮೊತ್ತಕ್ಕೆ ದಂಡವನ್ನು ವಿಧಿಸಬಹುದು.

Join Nadunudi News WhatsApp Group

gold purchase limit in cash
Image Credit: Postsen

ಗುರುತಿನ ಪುರಾವೆ ಅಗತ್ಯ
ನೀವು ಆಭರಣ ಖರೀದಿಸುವಾಗ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಮಾರಾಟಗಾರರಿಗೆ ನೀಡುವಂತಿಲ್ಲ. ಒಂದುವೇಳೆ 2 ಲಕ್ಷ ರೂ. ಗಿಂತ ಹೆಚ್ಚಿನ ನಗದು ನಿಡುದಾದರೆ ಗುರುತಿನ ಪುರಾವೆಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಅನ್ನು ಮಾರಾಟಗಾರರಿಗೆ ನೀಡಬೇಕಾಗುತ್ತದೆ. ಆಭರಣ ಖರೀದಿಯು 2 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಅನ್ನು ನೀಡುವ ಅಗತ್ಯ ಇಲ್ಲ.

Join Nadunudi News WhatsApp Group