Gold News: ಚಿನ್ನದ ಬೆಲೆಯಲ್ಲಿ ಐತಿಹಾಸಿಕ ಏರಿಕೆ, ಕಳೆದ ಮೂರೂ ತಿಂಗಳಲ್ಲಿ ಮಾರಾಟದ ಚಿನ್ನ ಎಷ್ಟು ಗೊತ್ತಾ…?

ಬೆಲೆ ಏರಿಕೆಯ ನಡುವೆಯೂ ದೇಶದಲ್ಲಿ ದಾಖಲೆಯ ಏರಿಕೆ ಕಂಡ ಚಿನ್ನದ ಬೆಲೆ

Gold Rate Update: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಕೆಲವು ದಿನಗಳಿಂದ ಯಾವುದೇ ರೀತಿ ಇಳಿಕೆ ಕಂಡು ಬರುತ್ತಿಲ್ಲ. ಇನ್ನು ಚಿನ್ನದ ಬೆಲೆಯ ಏರಿಕೆಯು ಚಿನ್ನದ ಮೇಲಿನ ಬೇಡಿಕೆಯ ಮೇಲೆ ಯಾವುದೇ ಪರಿಣಾಮವನ್ನು ಬಿರುತ್ತಿಲ್ಲ ಎನ್ನಬಹುದು.

ಚಿನ್ನದ ಬೆಲೆ ಸಾಲು ಸಾಲು ಏರಿಕೆ ಕಾಣುತ್ತಿದ್ದರು ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ಈ ವರ್ಷದಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಾಣುತ್ತಿದ್ದರು ಕೂಡ ಮಾರಾಟದಲ್ಲಿ ಕೂಡ ದಾಖಲೆ ಕಂಡು ಬರುತ್ತಿಲ್ಲ. ಚಿನ್ನದ ಬೆಲೆ ಮುಗಿಲುಮುಟ್ಟಿದ್ದರು ಕೂಡ ಚಿನ್ನಕ್ಕೆ ಇರುವಂತಹ ಬೇಡಿಕೆ ಕೊಂಚವೂ ಕಡಿಮೆ ಆಗಿಲ್ಲ ಎನ್ನಬಹುದು.

Gold Rate New Update
Image Credit: Asianetnews

ಕಳೆದ ಮೂರೂ ತಿಂಗಳಲ್ಲಿ ಮಾರಾಟದ ಚಿನ್ನ ಎಷ್ಟು ಗೊತ್ತಾ…?
ಏಪ್ರಿಲ್ 19 ರಂದು ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ.75,800 ತಲುಪಿತ್ತು. ಆದಾಗ್ಯೂ, ಜನವರಿ ಮತ್ತು ಮಾರ್ಚ್ ನಡುವಿನ ಚಿನ್ನದ ಮಾರಾಟವು ವಾರ್ಷಿಕ ಆಧಾರದ ಮೇಲೆ 136.6 ಟನ್‌ ಗಳಿಗೆ 8 ಶೇಕಡಾ ಏರಿಕೆಯಾಗಿದೆ. ಈ ಪೈಕಿ ಕೇವಲ 95.5 ಟನ್ ಚಿನ್ನಾಭರಣಗಳನ್ನು ಜನರು ಖರೀದಿಸಿದ್ದಾರೆ. ಇದಲ್ಲದೇ 41 ಟನ್ ನಾಣ್ಯಗಳು ಮತ್ತು ಬಿಸ್ಕತ್ತುಗಳು ಮಾರಾಟವಾಗಿವೆ. ಈ ಮಾಹಿತಿಯನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಬಿಡುಗಡೆ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಖರೀದಿಸುವ ಚಿನ್ನಕ್ಕೆ ಬೇಡಿಕೆಯೂ ಹೆಚ್ಚಿದೆ. ಈ ವರ್ಷದ ಜನವರಿ-ಮಾರ್ಚ್‌ ನಲ್ಲಿನ ಬೆಲೆಗಳನ್ನು ಗಮನಿಸಿದರೆ ದೇಶದ ಚಿನ್ನದ ಬೇಡಿಕೆಯು ವರ್ಷದಿಂದ ವರ್ಷಕ್ಕೆ 20 ಪ್ರತಿಶತದಷ್ಟು ಹೆಚ್ಚಾಗಿದೆ. ತ್ರೈಮಾಸಿಕ ಸರಾಸರಿ ಬೆಲೆ 11% ಹೆಚ್ಚಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 126.3 ಟನ್‌ ಗಳಷ್ಟಿದ್ದ ಬೇಡಿಕೆ ಈ ವರ್ಷದ ಜನವರಿ-ಮಾರ್ಚ್‌ ನಲ್ಲಿ 136.6 ಟನ್‌ ಗಳಿಗೆ ಏರಿಕೆಯಾಗಿದೆ.

Gold Price In India
Image Credit: Live Mint

ಮಾರ್ಚ್ ನಲ್ಲಿ ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ
ಭಾರತದಲ್ಲಿ ಚಿನ್ನಕ್ಕೆ ಇರುವ ಒಟ್ಟು ಬೇಡಿಕೆಯಲ್ಲಿ ಆಭರಣಗಳ ಬೇಡಿಕೆ ಶೇ.10ರಷ್ಟಿದೆ. 4 ರಷ್ಟು ಹೆಚ್ಚಳದೊಂದಿಗೆ 95.5 ಟನ್ ತಲುಪಿದೆ. ಒಟ್ಟು ಹೂಡಿಕೆಯ ಬೇಡಿಕೆ 41.1 ಟನ್‌ ಗಳಿಗೆ ಏರಿದೆ. ಮಾರ್ಚ್‌ ನಲ್ಲಿ ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಆದರೂ ಬೇಡಿಕೆ ಕಡಿಮೆಯಾಗಿಲ್ಲ.

Join Nadunudi News WhatsApp Group

ಈ ವರ್ಷ ಭಾರತದಲ್ಲಿ ಚಿನ್ನದ ಬೇಡಿಕೆ ಸುಮಾರು 700-800 ಟನ್‌ ಗಳಷ್ಟಿರುತ್ತದೆ ಎಂದು ಅಂದಾಜಿಸಲಾಗಿದೆ. 2023ರಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆ 747.5 ಟನ್‌ಗಳಷ್ಟಿತ್ತು. ಬೆಲೆಗಳು ದಾಖಲೆಯ ಮಟ್ಟ ತಲುಪಿದ್ದು, ದೇಶದಲ್ಲಿ ಚಿನ್ನದ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಆರ್‌ಬಿಐ 19 ಟನ್ ಚಿನ್ನ ಖರೀದಿಸಿದೆ. ಆದರೆ 2023 ರಲ್ಲಿ, ಇಡೀ ವರ್ಷದಲ್ಲಿ ಕೇವಲ 16 ಟನ್ ಚಿನ್ನವನ್ನು ಖರೀದಿಸಲಾಗಿದೆ.

Gold Rate Update 2024
Image Credit: Gnnhd

Join Nadunudi News WhatsApp Group