Gold Sale: ಅಕ್ಷಯ ತೃತೀಯ ಹಬ್ಬದ ದಿನ ಭಾರತದಲ್ಲಿ ಎಷ್ಟು KG ಚಿನ್ನ ಮಾರಾಟವಾಗಿದೆ ಗೊತ್ತಾ..? ನಿಜಕ್ಕೂ ಗ್ರೇಟ್

ಅಕ್ಷಯ ತೃತೀಯ ದಿನದಂದು ದಾಖಲೆ ಮಟ್ಟದಲ್ಲಿ ಚಿನ್ನದ ಮಾರಾಟ.

Gold Sale On Akshaya Tritiya 2024: ಪ್ರಸ್ತುತ ದೇಶದಲ್ಲಿ ಮೇ 10 ರಂದು ಅಕ್ಷಯ ತೃತಿಯವನ್ನು ಆಚರಿಸಲಾಯಿತು. ಅಕ್ಷಯ ತೃತೀಯ ದಿನದಂದು ಸಾಕಷ್ಟು ಜನರು ಚಿನ್ನವನ್ನು ಖರೀದಿಸಿದ್ದಾರೆ. ಅಕ್ಷಯ ತೃತೀಯದ ದಿನದಂದು ಚಿನ್ನವನ್ನು ಖರೀದಿಸಿದರೆ ಒಳ್ಳೆಯದು ಎನ್ನುವುದು ವಾಡಿಕೆ. ಈ ಕಾರಣಕ್ಕೆ ಹೆಚ್ಚಿನ ಜನರು ಚಿನ್ನವನ್ನು ಖರೀದಿಸಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ತಲುಪಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಹೊಸ ವರ್ಷದ ಮಾರ್ಚ್ ತಿಂಗಳಿನಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಜನರು ಚಿನ್ನದ ಖರೀದಿಸಲು ಹೆಚ್ಚು ಹಣವನ್ನು ನೀಡುವಂತಾಗಿದೆ.

Gold Sale On Akshaya Tritiya 2024
Image Credit: Business-standard

ಚಿನ್ನದ ಬೆಲೆಯ ಸತತ ಏರಿಕೆಯ ನಡುವೆಯೂ ದಾಖಲೆಯ ಮಾರಾಟ
ಇನ್ನು ಮೇ ತಿಂಗಳಿನ ಮೊದಲ ಕೆಲವು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಮೇ ತಿಂಗಳಿನಲ್ಲಿ ಅಕ್ಷಯ ತೃತೀಯ ಇರುವುದರಿಂದ ಚಿನ್ನದ ಬೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ದಾಖಲಾಗಿದೆ ಎನ್ನಬಹುದು. ಆದಾಗ್ಯೂ, ಅಕ್ಷಯ ತೃತೀಯ ಹಬ್ಬದ ದಿನದಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗುವುದರ ಬದಲು ಏರಿಕೆಯಾಗಿದೆ.

ಇನ್ನು ಚಿನ್ನದ ಬೆಲೆ ಏರಿಕೆಯಾದರು ಕೂಡ ಚಿನ್ನದ ಖರೀದಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದ್ದರು ಕೂಡ ದಾಖಲೆಯ ಮಟ್ಟದಲ್ಲಿ ಮಾರಾಟ ಕಂಡು ಬರುತ್ತಿದೆ. ಇನ್ನು ಕಳೆದ ವರ್ಷದಲ್ಲಿ ಚಿನ್ನದ ಬೆಲೆ 2024 ರಲ್ಲಿ 66 ಸಾವಿರದ ಗಡಿ ದಾಟಿದೆ. ಆದರೂ ಕೂಡ ಚಿನ್ನದ ಮೇಲಿನ ಬೇಡಿಕೆ ಕಡಿಮೆ ಆಗುತ್ತಿಲ್ಲ ಎನ್ನಬಹುದು.

Akshaya Tritiya 2024
Image Credit: Caratlane

ರಾಜ್ಯದಲ್ಲಿ 2050KG ಚಿನ್ನ ಸೇಲ್….!
ಸದ್ಯ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನವನ್ನು ಖರೀದಿಸಲು ಗ್ರಾಹಕರು 67250 ರೂ. ಗಳನ್ನೂ ನೀಡಬೇಕಾಗಿದೆ. 2023 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 50 ಸಾವಿರದ ಗಡಿಯಲ್ಲಿತ್ತು ಆದರೆ ಇದೀಗ 67 ಸಾವಿರ ಗಡಿ ದಾಟಿದೆ. ಚಿನ್ನದ ಬೆಲೆಯ ಏರಿಕೆಯು ನಡುವೆಯೂ ಈ ಬಾರಿ ಅಕ್ಷಯ ತೃತೀಯ ದಿನದಂದು ದಾಖಲೆಯ ಮಟ್ಟದಲ್ಲಿ ಚಿನ್ನ ಮಾರಾಟವಾಗಿದೆ. ಇನ್ನು ಅಕ್ಷಯ ತೃತೀಯ ದಿನದಂದು (May 10 ) ರಾಜ್ಯಾದ್ಯಂತ 2050 ಕೆಜಿಗೂ ಹೆಚ್ಚು ಚಿನ್ನ, 1900 ಕೆಜಿಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.18 ರಷ್ಟು ವ್ಯಾಪಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಆಭರಣ ಒಕ್ಕೂಟ ತಿಳಿಸಿದೆ.

Join Nadunudi News WhatsApp Group

Gold Sale On Akshaya Tritiya
Image Credit: etvbharat

Join Nadunudi News WhatsApp Group