Gold Storage Limit: ಮನೆಯಲ್ಲಿ ಚಿನ್ನಇಟ್ಟುಕೊಳ್ಳುವವರಿಗೆ ಸರ್ಕಾರದ ಹೊಸ ನಿಯಮ, ಇದಕ್ಕಿಂತ ಹೆಚ್ಚು ಇಟ್ಟುಕೊಳ್ಳುವಂತಿಲ್ಲ.

ಇನ್ಮುಂದೆ ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಂಡರೆ ಕಟ್ಟಬೇಕು ತೆರಿಗೆ

Gold Storage Limit At Home: ಇದೀಗ ಮದುವೆಯ ಸೀಸನ್ ಆರಂಭವಾಗಿದೆ ಎನ್ನಬಹುದು. ಮಾರ್ಚ್ ನಿಂದ ಜೂನ್ ತನಕ ಸಾಕಷ್ಟು ಮದುವೆಗಳು ನೆರವೇರಲಿದೆ. ಇನ್ನು ಮದುವೆಯ ಶುಭಾರಂಭಕ್ಕೆ ಚಿನ್ನವನ್ನು ಖರೀದಿಸುವುದು ಸಾಮಾನ್ಯ.

ಮದುವೆಯ ಸಮಯದಲ್ಲಿ ವಧುವು ವಿಶೇಷವಾಗಿ ಚಿನ್ನದಿಂದ ಅಲಂಕೃತಳಾಗಿರುತ್ತಾಳೆ. ಇನ್ನು ಮದುವೆಯ ಶುಭಾರಂಭಕ್ಕೆ ಉಡುಗೊರೆಯ ರೂಪದಲ್ಲಿ ಕೂಡ ಚಿನ್ನಾಭರಣಗಳು ಬರುತ್ತವೆ. ನೀವು ಗಮನಹರಿಸಬೇಕಾದ ವಿಷಯ ಏನೆಂದರೆ ಮನೆಯಲ್ಲಿ ಇಟ್ಟುಕೊಳ್ಳಬಹುದಾದ ಚಿನ್ನದ ಮಿತಿಯ ಬಗ್ಗೆ.

Gold storage Limit
Image Credit: Vidhaatha

ಮನೆಯಲ್ಲಿ ಚಿನ್ನ ಇಟ್ಟುಕೊಳ್ಳುವವರಿಗೆ ಸರ್ಕಾರದ ಹೊಸ ನಿಯಮ
ಹೌದು, ಮದುವೆಯ ಸಂಭ್ರಮಕ್ಕೆ ಚಿನ್ನದ ಖರೀದಿ ದೊಡ್ಡ ಪ್ರಮಾಣದಲ್ಲಿಯೇ ನಡೆಯುತ್ತದೆ. ಆದರೆ ತೆರಿಗೆ ಇಲಾಖೆ ಮಹಿಳೆಯು ಹೊಂದಬಹುದಾದ ಚಿನ್ನಕ್ಕೂ ಕೂಡ ಮಿತಿಯನ್ನು ಅಳವಡಿಸಿದೆ ಎನ್ನುವ ಬಗ್ಗೆ ನಿಮಗೆ ಮಾಹಿತಿ ತಿಳಿದಿರಲಿ. ಆದಾಯ ಇಲಾಖೆಯು ವಿವಾಹಿತ ಮಹಿಳೆಯವು ತನ್ನ ಮನೆಯಲ್ಲಿ ಇರಿಸಬಹುದಾದ ಚಿನ್ನಕ್ಕೆ ಮಿತಿಯನ್ನು ಅಳವಡಿಸಿದೆ.

ಭಾರತೀಯ ಕಾನೂನಿನಲ್ಲಿ ಚಿನ್ನ ಮಾರಾಟ ಹಾಗು ಖರೀದಿಗೆ ಅನೇಕ ನಿಯಮಗಳಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಚಿನ್ನ ಸಂಗ್ರಹಣೆಯ ವಿಷಯದಲ್ಲಿ ಬೇರೆ ಬೇರೆ ಮಿತಿಯನ್ನ ಸರ್ಕಾರ ಜಾರಿಗೊಳಿಸಿದೆ. ಹಾಗೆ ವಿವಾಹಿತ ಮತ್ತು ಅವಿವಾಹಿತ ಮಹಿಳೆಯರಿಗೆ ಚಿನ್ನ ಸಂಗ್ರಹಣೆಯಲ್ಲಿ ಬೇರೆ ಬೇರೆ ಮಿತಿಯನ್ನ ಇರಿಸಲಾಗಿದೆ.

Gold prices rose in the first week of May.
Image Credit: businesstoday

ಮನೆಯಲ್ಲಿ ಇದಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿಲ್ಲ
Central Board of Direct Tax (CBDT) ಪ್ರಕಾರ, ಯಾವುದೇ ಪುರಾವೆಗಳನ್ನು ತೋರಿಸದೆ ಚಿನ್ನದ ಆಭರಣಗಳನ್ನು ಇಡಲು ಮಿತಿ ಇದೆ. ಸರ್ಕಾರ ನಿಗದಿಪಡಿಸಿದ ಮಿತಿಯಲ್ಲಿ ಚಿನ್ನ ಇಟ್ಟುಕೊಂಡಿದ್ದರೆ ದಾಳಿಯ ಸಮಯದಲ್ಲಿ ಅಧಿಕಾರಿಗಳು ಮನೆಯಿಂದ ಆಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನಿಯಮಗಳು ಹೇಳುತ್ತದೆ. ವಿವಾಹಿತ ಮಹಿಳೆ 500 ಗ್ರಾಂ ಚಿನ್ನವನ್ನು, ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನವನ್ನುಹಾಗು ಒಬ್ಬ ವ್ಯಕ್ತಿ 100 ಗ್ರಾಂ ಚಿನ್ನವನ್ನು ಮಾತ್ರ ತನ್ನ ಬಳಿ ಇಟ್ಟುಕೊಳ್ಳಲು ಅವಕಾಶವಿದೆ.

Join Nadunudi News WhatsApp Group

ನೀವು ಚಿನ್ನದ ಮೇಲೆ ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ನೀವು ಚಿನ್ನವನ್ನು ಖರೀದಿಸಿ ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಲು ಬಯಸಿದರೆ ಆದಾಯ ತೆರಿಗೆ ಸ್ಲ್ಯಾಬ್ ದರದಲ್ಲಿ ತೆರಿಗೆ ಕಟ್ಟಬೇಕಾಗುತ್ತದೆ. ಚಿನ್ನವನ್ನು 3 ವರ್ಷಗಳಿಗಿಂತ ಹೆಚ್ಚು ಕಾಲ ಹಿಡಿದಿಟ್ಟುಕೊಂಡರೆ ಅದು 20 ಪ್ರತಿಶತದಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಇರಿಸಿಕೊಳ್ಳುವುದಕ್ಕೂ ಮೊದಲು ತೆರಿಗೆಯ ಬಗ್ಗೆ ತಿಳಿದಿರುವುದು ಮುಖ್ಯ.

Join Nadunudi News WhatsApp Group