Agricultural Aid: ಮಳೆಯಿಲ್ಲದೆ ಕಂಗೆಟ್ಟ ಎಲ್ಲಾ ರೈತರಿಗೆ ಸಿಹಿಸುದ್ದಿ, ಸರ್ಕಾರದ ಮಹತ್ವದ ನಿರ್ಧಾರ.

ಮಳೆಯಿಲ್ಲದೆ ಕಂಗೆಟ್ಟ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್.

National Disaster Relief Fund: ಈ ಬಾರಿ ಮಳೆ ಪ್ರಮಾಣ ತೀರ ಕಡಿಮೆ ಇದ್ದ ಕಾರಣ ರಾಜ್ಯದ ಅನೇಕ ಭಾಗದಲ್ಲಿ ಅನೇಕ ವಿಧವಾಗಿ ಸಮಸ್ಯೆ ಆಗಿದೆ ಒಂದು ಕಡೆ ವಿದ್ಯುತ್ ಕಟ್ (power cut) ತಂತ್ರ ಬಳಸುತ್ತಿದ್ದರೆ ಇನ್ನೊಂದು ಕಡೆ ರೈತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ನೀರಿನ ಸೌಲಭ್ಯ ಇಲ್ಲದೆ ಬೆಳೆ ನಾಶ ಆಗಿ ಮುಂದೆನೂ ಎಂಬ ಚಿಂತೆಯಲ್ಲಿದೆ.

ಈಗಾಗಲೇ ರಾಜ್ಯದ ಅನೇಕ ಭಾಗದಲ್ಲಿ ಬರಗಾಲ ಉಂಟಾಗಿದ್ದು ಕುಡಿಯಲು ನೀರನ್ನು ಸಹ ಮೈಲುಗಟ್ಟಲೆ ಕ್ರಮಿಸಿ ಜನ ತರಬೇಕಾದ ಸ್ಥಿತಿ ಏರ್ಪಟ್ಟಿದೆ‌. ಕರ್ನಾಟಕ ರಾಜ್ಯದಲ್ಲಿ 195 ತಾಲೂಕು ವ್ಯಾಪ್ತಿಯಲ್ಲಿ ಬರ ಬಂದಿರುವುದನ್ನು ಈಗಾಗಲೇ ಘೋಷಿಸಲಾಗಿದೆ.

ಈ ಬಗ್ಗೆ ಕಂದಾಯ ಇಲಾಖೆಯಿಂದ ಅಧಿಕೃತ ಅನೇಕ ದಾಖಲಾತಿ ಸಮೇತ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲುಸಲು ಸಿದ್ಧಮಾಡಿದ್ದು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರದ ಮೊತ್ತ ನಿರೀಕ್ಷೆ ಮಾಡಲಾಗುತ್ತಿದೆ.

Crop damage
Image Credit: Sciencephoto

ಪತ್ರಿಕಾಗೋಷ್ಠಿ
ಈ ಬಾರಿ ಮಳೆ ಕೊರತೆಯಿಂದ ರಾಜ್ಯದಲ್ಲಿ 30,432 ಕೋಟಿ ರೂ. ನಷ್ಟ ಆಗಿದೆ. 39.74ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಹಾನಿ ಪರಿಣಾಮ 27.867ಕೋಟಿ ರೂ. ನಷ್ಟವಾಗಿದೆ. 1.82ಲಕ್ಷಹೆಕ್ಟರ್ ಭೂಮಿ ತೋಟಕ್ಕೂ ಹಾನಿಯಾಗಿದ್ದು 2,565ಕೋಟಿ ರೂ.ನಷ್ಟವಾಗಿದೆ. ಪಶು ಸಂಗೋಪನೆ, ಹೈನುಗಾರಿಕೆ, ಮೇವು, ಔಷಧ ಇತ್ಯಾದಿ ಖರ್ಚು ವಿಪರಿತ ಆಗಿದೆ ಎಂದು ಇತ್ತೀಚೆಗಷ್ಟೇ ಸರಕಾರದಿಂದ ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ವರದಿ ನೀಡಲಾಗಿತ್ತು.

ಕುಡಿಯಲು ನೀರಿನ ಕೊರತೆ
ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕುಡಿಯುವ ನೀರಿಗೂ ಕೊರತೆ ಯಾಗಿದೆ. ಗ್ರಾಮೀಣ ಭಾಗದಲ್ಲಿ 283ಕೋಟಿ ರೂ. ಪೂರೈಕೆ ಮಾಡುವ ಅಗತ್ಯ ಇದೆ ಆಗ 180 ದಿನ ನೀರು ಪೂರೈಕೆ ಮಾಡಬಹುದು.

Join Nadunudi News WhatsApp Group

Agricultural Aid
Image Credit: Deccanherald

ಶೀಘ್ರ ದೆಹಲಿಯಲ್ಲಿ ಪ್ರಯಾಣ
ರಾಜ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಈ ಎಲ್ಲ ವರದಿ ಸಹಿತ ಮಾಹಿತಿಯನ್ನು ಮೂರು ದಿನದಲ್ಲಿ ದೆಹಲಿ ಪ್ರಯಾಣ ಮಾಡಲಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಅಡಿಯಲ್ಲಿ 4,860 ಕೋಟಿ ರೂ.ನೆರವು ನೀಡುವಂತೆ ಮನವಿ ಮಾಡಲು ಸಚಿವರು ಪ್ರಯಾಣಮಾಡಿ ತೆರಳಲಿದ್ದಾರೆ. ಈ ಬಗ್ಗೆ ಸೆ. 22 ರಂದು ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

Join Nadunudi News WhatsApp Group