ICICI Bank New Rules: ICICI Bank ನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ, ಹೊಸ ಆದೇಶ ನೀಡಿದ ಬ್ಯಾಂಕ್

ಈ ಸ್ಕೀಮ್ ನ ಅಡಿಯಲ್ಲಿ ICICI BANK ಭರ್ಜರಿ 7.5 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ನೀವು 5 ವರ್ಷದಿಂದ ಪ್ರಾರಂಭವಾಗಿ 10 ವರ್ಷದವರೆಗೂ ಕೂಡ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

ICICI Bank Updates: ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮ ಮುಂದಿನ ದಿನಗಳಿಗಾಗಿ ಉತ್ತಮ ಭವಿಷ್ಯಕ್ಕಾಗಿ ಹಾಗೂ ಉತ್ತಮ ನಿವೃತ್ತಿಯ ದಿನಗಳಿಗಾಗಿ ಉಳಿತಾಯ ಮಾಡಿ ಇಡಬೇಕು ಎನ್ನುವಂತಹ ಮಹತ್ವಕಾಂಕ್ಷೆ ಇದ್ದೇ ಇರುತ್ತದೆ. ಅದಕ್ಕಾಗಿ ಇಂದು ನಾವು ಒಂದೊಳ್ಳೆ ಉಪಾಯವನ್ನು ನಿಮಗೆ ಹೇಳಲು ಹೊರಟಿದ್ದೇವೆ.

ಪ್ರೈವೇಟ್ ವಿಭಾಗದ ಅತ್ಯಂತ ದೊಡ್ಡ Lender ಆಗಿರುವಂತಹ ಐಸಿಐಸಿಐ ಬ್ಯಾಂಕ್(ICICI BANK) ಸೀನಿಯರ್ ಸಿಟಿಜನ್ಗಳಿಗಾಗಿ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಅನ್ನು ಪರಿಚಯಿಸಿದೆ. ICICI BANK Golden Years FD ಯನ್ನು ಆರು ತಿಂಗಳಿಗಾಗಿ ಹೆಚ್ಚಿಸಲಾಗಿದೆ. ಇದೇ ಏಪ್ರಿಲ್ ಏಳರಂದು ಈ ಸ್ಕೀಮ್ ಮುಗಿಯಬೇಕಾಗಿತ್ತು ಆದರೆ ಈಗಾಗಲೇ ಅದನ್ನು ಆರು ತಿಂಗಳು ಮುಂದೂಡಲಾಗಿದೆ. ಅಂದರೆ ಅಕ್ಟೋಬರ್ 31ರವರೆಗೆ ಕೂಡ ನೀವು ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಬಹುದಾಗಿದೆ.

ICICI Bank New Rules
Image Source: India Tv News

ಹಿರಿಯ ನಾಗರಿಕರಿಗಾಗಿ ಈ ಸ್ಕೀಮ್ ನ ಅಡಿಯಲ್ಲಿ ICICI BANK ಭರ್ಜರಿ 7.5 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ನೀವು 5 ವರ್ಷದಿಂದ ಪ್ರಾರಂಭವಾಗಿ 10 ವರ್ಷದವರೆಗೂ ಕೂಡ ನಿಮ್ಮ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

ಈ ವಿಶೇಷ ಸ್ಕಿಮಿನ ಅಡಿಯಲ್ಲಿ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ Standard Rate ನಿಂದ ಹೆಚ್ಚುವರಿ 0.60% ಬಡ್ಡಿದರವನ್ನು ಕೂಡ ನೀಡುವುದು ಮತ್ತೊಂದು ವಿಶೇಷವಾಗಿದೆ. ಖಂಡಿತವಾಗಿ ಒಂದು ವೇಳೆ ಯಾರಾದರೂ ಫಿಕ್ಸೆಡ್ ಡೆಪಾಸಿಟ್ ಅನ್ನು ಮಾಡಬೇಕು ಎನ್ನುವಂತಹ ಯೋಜನೆಯಲ್ಲಿದ್ದರೆ ಅವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದರೆ ತಪ್ಪಾಗಲಾರದು.

ICICI Bank New Rules
Image Source:Redif.com

ಇದಕ್ಕಿಂತ ಮುಂಚೆ ದೇಶದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಆಗಿರುವಂತಹ ಎಸ್‌ಬಿಐ ಬ್ಯಾಂಕ್(SBI Bank) ತನ್ನ ಹಿರಿಯ ನಾಗರಿಕ ಗ್ರಾಹಕರಿಗಾಗಿ SBI WECARE ಅನ್ನು ಕೂಡ ಮುಂದಿನ ಮೂರು ತಿಂಗಳಿಗೆ ಮತ್ತಷ್ಟು ಹೆಚ್ಚಿಸಿದೆ ಎಂಬುದಾಗಿ ಕೂಡ ಸುದ್ದಿ ತಿಳಿದು ಬಂದಿದೆ. ಜೂನ್ 30ರವರೆಗೆ ಕೂಡ ಒಂದು ವೇಳೆ ನೀವು ಎಸ್‌ಬಿಐ ಬ್ಯಾಂಕಿನ ಗ್ರಾಹಕರಾಗಿದ್ದಾರೆ .

Join Nadunudi News WhatsApp Group

ಅವರ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎನ್ನುವಂತಹ ಆಸೆ ಇದ್ದರೆ ಹೂಡಿಕೆ ಮಾಡಬಹುದಾಗಿದೆ. ಇನ್ನೂ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಅಡಿಯಲ್ಲಿ ಕೂಡ ಹೂಡಿಕೆದಾರರಿಗೆ 7.50% ಬಡ್ಡಿದರ ದೊರಕಲಿದ್ದು ಒಂದೊಳ್ಳೆ ರಿಟರ್ನ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವವರಿಗೆ ಒಂದೊಳ್ಳೆ ಅವಕಾಶವಾಗಿದೆ ಎಂದರೆ ತಪ್ಪಾಗಲಾರದು.

ICICI Bank New Rules
Image Source: India Today

Join Nadunudi News WhatsApp Group