Google And HP: ಮೊಬೈಲ್ ಬೆಲೆಗೆ ಖರೀದಿಸಿ ಹೊಸ ಲ್ಯಾಪ್ ಟಾಪ್, ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದ ಆಫರ್.

Chrome Book ಗಳನ್ನೂ ತಯಾರಿಸಲು ಮುಂದಾದ Google ಹಾಗೂ HP, ಇನ್ನುಮುಂದೆ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಸಿಗಲಿದೆ Laptop.

Google And HP Chromebook Laptop: ಸಧ್ಯ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಬದಲಾವಣೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ನಿಗಾ ವಹಿಸುತ್ತಿದೆ.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವುದು ಸರ್ಕಾರದ ಗುರಿಯಾಗಿದೆ. ಇತ್ತೀಚಿಗೆ ಶಿಕ್ಷಣವು ಒಂದು ರೀತಿ ಡಿಜಿಟಲೀಕರಣ ಆಗಿದೆ ಎನ್ನಬಹುದು. ಈ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರ ಒಂದೊಂದೇ ಸೌಲಭ್ಯವನ್ನು ನೀಡುತ್ತದೆ.

HP Chromebook for students
Image Credit: pcmag

ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
ಈಗಾಗಲೇ ಕೆಲವು ರಾಜ್ಯದಲ್ಲಿ ಉಚಿತ Laptop ನೀಡುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಕೆಲ ವರ್ಗದ ಮಕ್ಕಳಿಗೆ ಸರ್ಕಾರ ಉಚಿತ ಲಾಪ್ ಟಾಪ್ ನಿಡಲುಮುಂದಾಗಿದೆ. ಆದರೆ ಈ ಉಚಿತ ಲಪ್ ಟಾಪ್ ವಿತರಣೆ ಎಲ್ಲ ವಿದ್ಯಾರ್ಥಿಗಳು ಲಭ್ಯವಾಗುವುದಿಲ್ಲ. ಇತ್ತೀಚಿಗೆ ಮಕ್ಕಳ ಶಿಕ್ಷಣಕ್ಕೆ ಲ್ಯಾಪ್ ಟಾಪ್ ಅಗತ್ಯವಾಗಿದೆ ಎನ್ನಬಹುದು.

ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಲ್ಯಾಪ್ ಟಾಪ್ ಪಡೆಯಲು ಸಹಾಯವಾಗಲಿ ಎನ್ನುವ ಕಾರಣ Google ಹಾಗೂ HP ಹೊಸ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳಿಗೆ Smartphone ಬೆಲೆಯಲ್ಲಿ Laptop ಲಭ್ಯವಾಗುವ ರೀತಿಯಲ್ಲಿ Google ಹಾಗೂ HP ಮಾಡಲು ಮುಂದಾಗಿದೆ.

HP Chromebook laptop in best price
Image Credit: chromeunboxed

Chrome Book ಗಳನ್ನೂ ತಯಾರಿಸಲು ಮುಂದಾದ Google ಹಾಗೂ HP
ವಿದ್ಯಾರ್ಥಿಗಳಿಗೆ Laptop ಖರೀದಿಸಲು ಸಹಾಯವಾಗಲಿ ಎನ್ನುವ ಕಾರಣದಿಂದ Google ಹಾಗೂ HP Chrome Book ಗಳನ್ನೂ ತಯಾರಿಸಲು ಮುಂದಾಗಿದೆ. ವಿದ್ಯಾರ್ಥಿಗಳಿಗೆ ಬಜೆಟ್ ಸ್ನೇಹಿಯಾಗಲು Chrome Book ಸದ್ಯದಲ್ಲೇ ತಯಾರಾಗಲಿದೆ. ಈ ಯೋಜನೆಯು Make In India ಉಪಕ್ರಮದ ಭಾಗವಾಗಿದೆ.

Join Nadunudi News WhatsApp Group

ವಿಶೇಷವೆಂದರೆ HP ಯಾ ಚೆನ್ನೈ ಮೂಲಕ ಫ್ಲೆಕ್ಸಿ ಫೆಸಿಲಿಟಿ ಮೂಲಕ ಇವುಗಳನ್ನು ತಯಾರಿಸಲಾಗುತ್ತಿದೆ ಎನ್ನುವ ಬಗ್ಗೆ ವರದಿಯಾಗಿದೆ. ಈ ಉಪಕ್ರಮದ ಅಡಿಯಲ್ಲಿ ತಯಾರಿಸಲಾದ Laptop ಗಳು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕೇವಲ 20,000 ರಿಂದ ಲಭ್ಯವಾಗಲಿದೆ. ಈ ಬಗ್ಗೆ Google ಹಾಗೂ HP ಒಪ್ಪಂದವನ್ನು ಮಾಡಿಕೊಂಡಿದೆ. ಇನ್ನು October 2 ರಿಂದ Chrome Book Laptop ಗಳ ಉತ್ಪಾದನೆ ಪ್ರಾರಂಭವಾಗಲಿದೆ.

Join Nadunudi News WhatsApp Group