Google Chrome: ಮೊಬೈಲ್ ನಲ್ಲಿ ಗೂಗಲ್ ನಲ್ಲಿ ಬಳಸುವ ಎಲ್ಲರೂ ತಕ್ಷಣ ಈ ಕೆಲಸ ಮಾಡಿಕೊಳ್ಳಿ, ಕೇಂದ್ರದ ಎಚ್ಚರಿಕೆ

ಎಲ್ಲ Google Chrome ಬಳಕೆದಾರರಿಗೆ ಕೇಂದ್ರದಿಂದ ಎಚ್ಚರಿಕೆ, ತಕ್ಷಣ ಈ ಕೆಲಸ ಮುಗಿಸಿಕೊಳ್ಳಿ

Google Chrome Alert: ಮೊಬೈಲ್ ಬಳಕೆದಾರರ ಜನಪ್ರಿಯ ಅಪ್ಲಿಕೇಶನ್ ಆಗಿರುವ Google Chrome ಸದ್ಯ ಜನರಿಗೆ ಹೆಚ್ಚು ಅಪಾಯವನ್ನು ತಂದೊಡ್ಡುತ್ತಿದೆ. ಕೇಂದ್ರ ಸರ್ಕಾರ Google Chrome ಬಗ್ಗೆ ಆಗಾಗ ಜನರಿಗೆ ಎಚ್ಚರಿಕೆಯನ್ನು ನೀಡುತ್ತಾ ಇರುತ್ತದೆ. Chrome ಬಳಕೆದಾರರು ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇತ್ತೀಚೆಗಂತೂ ಕ್ರೋಮ್ ನಲ್ಲಿ ಸಾಕಷ್ಟು ದೋಷಗಳು ಕಂಡು ಬಂದಿದೆ. ಈ ಹಿನ್ನಲೆ ಕೇಂದ್ರ ಸರ್ಕಾರ Google Chrome ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡುತ್ತಿದೆ.

Google Chrome Alert News
Image Credit: Telecomtalk

ಎಲ್ಲ Google Chrome ಬಳಕೆದಾರರಿಗೆ ಕೇಂದ್ರದಿಂದ ಎಚ್ಚರಿಕೆ
ಸದ್ಯ Chrome ಬಳಕೆದಾರರಿಗೆ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT -In) ಎಚ್ಚರಿಕೆ ನೀಡಿದೆ. ಗ್ರಾಹಕ-ದರ್ಜೆಯ ಉತ್ಪನ್ನಗಳಲ್ಲಿ ಕಂಡುಬರುವ ವಿವಿಧ ದುರ್ಬಲತೆಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತದೆ. ಈಗಾಗಲೇ CERT -In ಕ್ರೋಮ್ ಬಳಕೆದಾರರಿಗೆ ಸಾಕಷ್ಟು ವಿಚಾರಗಳ ಬಗೆ ಎಚ್ಚರಿಕೆ ನೀಡಿದೆ.

Android ಅಥವಾ iOS, Mac, ಅಥವಾ Windows ಸೇರಿದಂತೆ ಹಲವು ಅಪಾಯಗಳ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಸದ್ಯ Google Chrome ನಲ್ಲಿ ಕಂಡುಬರುವ ಹೆಚ್ಚಿನ ಅಪಾಯದ ದುರ್ಬಲತೆಗಳ ರೂಪದಲ್ಲಿ ಮತ್ತೊಂದು ಎಚ್ಚರಿಕೆಯ್ನನು ನೀಡಿದೆ. CVE2024-1283 ಮತ್ತು CVE- 2024-1284 ಇವು Google Chrome ನ ದೋಷಗಳಾಗಿವೆ.

Google Chrome Latest Updates
Image Credit: Defsecme

ಕ್ರೋಮ್ ಬಳಕೆದಾರರು ಇನ್ನುಮುಂದೆ ಎಚ್ಚರಿಕೆಯಿಂದಿರಿ
Google Chrome ನಲ್ಲಿ ಹಲವಾರು ದುರ್ಬಲತೆಯನ್ನು ವರದಿ ಮಾಡಲಾಗಿದೆ. Google Chrome ನಲ್ಲಿನ ದುರ್ಬಲತೆಯನ್ನು ರಿಮೋಟ್ ಆಕ್ರಮಣಕಾರರು ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು, ಸೇವೆಯ ನಿರಾಕರಣೆ (DoS ) ಸ್ಟಿಯನ್ನು ಉಂಟುಮಾಡಲು ಮತ್ತು ಉದ್ದೇಶಿತ ಸಿಸ್ಟಮ್ ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ.

Google Chrome ಯಾವುದೇ ಸಂಕೀರ್ಣ ಸಾಫ್ಟ್‌ವೇರ್‌ ನಂತೆ, ಅದರ ಕೋಡ್‌ ನಲ್ಲಿ ದೌರ್ಬಲ್ಯಗಳನ್ನು ಹೊಂದಿರಬಹುದು. ದುರುದ್ದೇಶಪೂರಿತವಾಗಿ ಹ್ಯಾಕರ್ಸ್ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಬಹುದು. Google Chrome ನಲ್ಲಿನ ದುರ್ಬಲತೆಗಳು ವಿವಿಧ ಸಮಸ್ಯೆಗಳಿಂದ ಉಂಟಾಗುತ್ತವೆ. Google Chrome ನಲ್ಲಿನ ದುರ್ಬಲತೆಯು ಡೇಟಾವನ್ನು ಕದಿಯಲು ಅಥವಾ ಮಾಲ್ ವೇರ್ ಅನ್ನು ಸ್ಥಾಪಿಸಲು ವಂಚಕರಿಗೆ ಸಹಾಯ ಮಾಡಿಕೊಡುತ್ತದೆ. ಈ ಕಾರಣದಿಂದ ಗೂಗಲ್ ಕ್ರೋಮ್ ಬಳಸುವವರು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಲು ಕೇಂದ್ರ ಸೂಚನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group