Gmail Close: ಆಗಸ್ಟ್ 1 ರಿಂದ ಸ್ಥಗಿತವಾಗಲಿದೆ ಇಂತಹ ಜನರ Gmail ಖಾತೆ, ಸ್ಪಷ್ಟನೆ ನೀಡಿದ Gmail
Gmail ಬಳಕೆದಾರರು ಆಗಸ್ಟ್ 1 ರಿಂದ Gmail ಸೇವೆಯಿಂದ ವಂಚಿತರಾಗಬೇಕಾಗುತ್ತದೆ.
Google Clarification About Gmail Ban: ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು Viral ಆಗುತ್ತಿದೆ. Social Media ದಲ್ಲಿ Viral ಆಗುವ ಎಲ್ಲ ವಿಚಾರಗಳು ಜನರಿಗೆ ಹೆಚ್ಚು ಗೊಂದಲವನ್ನು ಉಂಟುಮಾಡುತ್ತದೆ.
ಕಾರಣ ಅಸಲಿ ವಿಷಯಗಳ ಜೊತೆಗೆ ಕೆಲ ನಕಲಿ ವಿಷಯಗಳು ಕೂಡ Social Media ದಲ್ಲಿ Viral ಆಗುತ್ತದೆ. Social Media ದಲ್ಲಿ Viral ಆಗುವಂತಹ ಎಲ್ಲ ವಿಷಯಗಳನ್ನು ನಂಬಲು ಸಾಧ್ಯವಿಲ್ಲ. ಸದ್ಯ Social Media ದಲ್ಲಿ ಅಂತಹದ್ದೇ ಒಂದು ವಿಷಯ Viral ಆಗಿ ಜನರಿಗೆ ಹೆಚ್ಚು ಆತಂಕ ಮೂಡಿಸುತ್ತಿದೆ.
![Google Clarification About Gmail Ban](https://nadunudi.in/wp-content/uploads/2024/02/Google-Clarification-About-Gmail-Ban.png)
Gmail ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್
ಮೊಬೈಲ್ ಬಳಕೆದಾರರು ಹೆಚ್ಚು ಬಳಸುವಂತಹ Gmail Application ತನ್ನ ಸೇವೆಯನ್ನು ಸ್ಥಗಿತಗೊಳಿಸುತ್ತದೆ ಎನ್ನುವ ಬಗ್ಗೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ Viral ಆಗಿದೆ. ಜನರು ಇನ್ನುಮುಂದೆ Gmail ಅನ್ನು ಬಳಸಲು ಸಾಧ್ಯವಿಲ್ಲ, ಬಳಕೆದಾರರು ಈ ಸೇವೆಯಿಂದ ವಂಚಿತರಾಗಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ.
Gmail ಹೆಚ್ಚಿನ ಜನರಿಗೆ ಉಪಯುಕ್ತವಾಗುತ್ತದೆ. ಅದರಲ್ಲಿ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ Gmail ನಲ್ಲಿ ಸಾಕಷ್ಟು ಕೆಲಸಗಳು ಇರುತ್ತದೆ. ಇನ್ನು Gmail ತನ್ನ ಸೇವೆಯನ್ನು ನಿಲ್ಲಿಸಿದರೆ ಅದರಿಂದ ಬಳಕೆದಾರರಿಗೆ ಸಮಸ್ಯೆ ಉಂಟಾಗುವುದಂತೂ ನಿಜ.
![Gmail Ban Latest Update](https://nadunudi.in/wp-content/uploads/2024/02/Gmail-Ban.png)
ಆಗಸ್ಟ್ 1 ರಿಂದ ಜಿಮೈಲ್ ಸೇವೆ ಸ್ಥಗಿತ
ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಬೆಳೆಸುವ Gmail ನ ಪ್ರಯಾಣವು ಕೊನೆಗೊಳ್ಳುತ್ತಿದೆ. ಆಗಸ್ಟ್ 1, 2024 ರಂದು Gmail ಅಧಿಕೃತವಾಗಿ ಸ್ಥಗಿತಗೊಳ್ಳುತ್ತದೆ.ಇದರರ್ಥ Gmail ಇನ್ನು ಮುಂದೆ Email ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬೆಂಬಲಿಸುವುದಿಲ್ಲ ಎನ್ನುವ ‘Google ಮೇಲ್ ನ ನಕಲಿ Screenshot ಸದ್ಯ ಸಾಮಾಜಿಕ ಜಾಲತಾಣದಲ್ಲಿ Viral ಆಗುತ್ತಿದೆ.
ಈ ಸುದ್ದಿ ಜನರ ನಿದ್ದೆ ಕೆಡಿಸುತ್ತಿದೆ ಎನ್ನಬಹುದು. ಸದ್ಯ ಇದೀಗ Google ಈ Viral ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದೆ. “ಇ-ಮೇಲ್ ಸೇವೆಯನ್ನು ನೀಡುತ್ತಿರುವ Gmail ಅನ್ನು ಸ್ಥಗಿತಗೊಳಿಸುತ್ತಿಲ್ಲ” ಎಂದು Google ಸ್ಪಷ್ಟನೆ ನೀಡಿದೆ. ಈ ಮೂಲಕ Gmail ಸ್ಥಗಿತಗೊಳ್ಳುವ Viral ಸುದ್ದಿ ನಕಲಿ ಎಂದು Google ಸ್ಪಷ್ಟ ಮಾಹಿತಿ ನೀಡಿದೆ.