Loan Application: ಮೇ 31ಕ್ಕೆ ಗೂಗಲ್ ನಿಂದ ಡಿಲೀಟ್ ಆಗಲಿದೆ ಈ ಆಪ್, ಆಪ್ ಬಳಸುವವರು ಬೇಗ ಡೇಟಾ ಸೇವ್ ಮಾಡಿಕೊಳ್ಳಿ.

ಗೂಗಲ್ ಮೇ 31 ಕ್ಕೆ ಹಲವು ಲೋನ್ ಅಪ್ಲಿಕೇಶನ್ ಗಳನ್ನ ಡಿಲೀಟ್ ಮಾಡಲು ತೀರ್ಮಾನವನ್ನ ಮಾಡಿದೆ.

Google Delete Loan Application: ಗೂಗಲ್ (Google) ಪ್ಲೇ ಸ್ಟೋರ್ ನಲ್ಲಿ ಕೆಲವು ನಕಲಿ ಲೋನ್ ಅಪ್ಲಿಕೇಶನ್ ಗಳು ಇದ್ದು ಈ ಅಪ್ಲಿಕೇಶನ್ ಮೂಲಕ ಕೆಲವು ಜನರು ತಮ್ಮ ವಯಕ್ತಿಕ ಮಾಹಿತಿ ಮತ್ತು ವ್ಯಾವಹಾರಿಕ ಮಾಹಿತಿಯನ್ನು ಕಳೆದುಕೊಂಡಿರುವುದು ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ.

ಕೆಲವು ಗೂಗಲ್ ಪ್ಲೇ ಸ್ಟೋರ್ ನಲ್ಲಿರುವ ಲೋನ್ ಅಪ್ಲಿಕೇಶನ್ ಗಳು ನಕಲಿ ಆಗಿದ್ದು ಹ್ಯಾಕರ್ ಗಳು ಈ ಅಪ್ಲಿಕೇಶನ್ ಮೂಲಕ ಜನರ ಬ್ಯಾಂಕ್ ಮಾಹಿತಿಯನ್ನು ಕದಿಯುತ್ತಿದ್ದಾರೆ ಎಂದು ಗೂಗಲ್ ಗೆ ವರದಿಯಾಗಿದೆ.

Google Delete Loan Application
Image Source: India Today

ಮೇ 31 ಕ್ಕೆ ಡಿಲೀಟ್ ಆಗಲಿದೆ ಹಲವು ಅಪ್ಲಿಕೇಶನ್ ಗಳು
ನಕಲಿ ಲೋನ್ ಅಪ್ಲಿಕೇಶನ್ ಗಳು ಪ್ಲೇ ಸ್ಟೋರ್ ನಲ್ಲಿ ಇದ್ದು ಹಲವು ಜನರು ಸಮಸ್ಯೆ ಎದುರಿಸಿದ ಕಾರಣ ಕೇಂದ್ರ ಸರ್ಕಾರ ಈಗ ಈ ಅಪ್ಲಿಕೇಶನ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಸದ್ಯ ಗೂಗಲ್ ಗೆ ವರದಿ ಮಾಡಿದ ಕೇಂದ್ರ ಸರ್ಕಾರ ಪ್ಲೇ ಸ್ಟೋರ್ ನಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಲು ಆದೇಶವನ್ನು ಹೊರಡಿಸಿದೆ.

ಸದ್ಯ ಮೇ 31 ರ ನಂತರ ವಯಕ್ತಿಕ ಸಾಲ ಮತ್ತು ವ್ಯವಹಾರದ ಸಾಲವನ್ನು ಕೊಡುವ ಕೆಲವು ಆನ್ ಲೈನ್ ಅಪ್ಲಿಕೇಶನ್ ಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲೀಟ್ ಆಗಲಿದೆಯಂದು ಗೂಗಲ್ ಮಾಹಿತಿ ನೀಡಿದೆ.

Google Delete Loan Application
Image Source: Zee News

ಜನರು ಸುರಕ್ಷತೆಗಾಗಿ ಗೂಗಲ್ ಕ್ರಮ ಕೈಗೊಂಡಿದೆ
ಜನರ ವಯಕ್ತಿಕ ಮತ್ತು ವ್ಯವಹಾರದ ಮಾಹಿತಿಯ ಸುರಕ್ಷತೆಯ ಉದ್ದೇಶದಿಂದ ಮೇ 31 ರ ನಂತರ ಗೂಗಲ್ ಹಲವು ಅಪ್ಲಿಕೇಶನ್ ಗಳನ್ನೂ ಬಂದ್ ಮಾಡಲಿದೆ. ಜನರು ತಮ್ಮ ಡಾಟಗಳನ್ನು ಸೇವ್ ಮಾಡಿಟ್ಟುಕೊಳ್ಳಬೇಕೆಂದು ಗೂಗಲ್ ಮಾಹಿತಿ ನೀಡಿದೆ. ಅಪ್ಲಿಕೇಶನ್ ಗಳು ಡಿಲೀಟ್ ಆದ ನಂತರ ನಿಮ್ಮ ಎಲ್ಲ ಮಾಹಿತಿಗಳು ಡಿಲೀಟ್ ಆಗುತ್ತದೆ. ಇದರಿಂದ ನೀವು ನಿಮ್ಮ ಮಾಹಿತಿಯನ್ನು ಸೇವ್ ಮಾಡಿಟ್ಟುಕೊಳ್ಳುವುದು ಅನಿವಾರ್ಯ.

Join Nadunudi News WhatsApp Group

Google Delete Loan Application
Image Source: Zee News

ಈಗಾಗಲೇ ಬೆಳಕಿಗೆ ಬಂದಿದೆ ಹಲವು ಪ್ರಕರಣಗಳು
ಲೋನ್ ಅಪ್ಲಿಕೇಶನ್ ಮೂಲಕ ಕೆಲವು ಜನರು ತಮ್ಮ ವಯಕ್ತಿಕ ಡಾಟಾವನ್ನು ಕಳೆದುಕೊಂಡಿದ್ದು, ಕೆಲವು ಜನರು ಲೋನ್ ಗಳ ಮೂಲಕ ಕಿರುಕುಳವನ್ನು ಅನುಭವಿಸಿದ ಕಾರಣ ಕೇಂದ್ರ ಸರ್ಕಾರ ಗೂಗಲ್ ಗೆ ಕೆಲವು ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡುವಂತೆ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಗೂಗಲ್ ಮೇ 31 ರ ನಂತರ ನಕಲಿ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಲಿದೆ.

Google Delete Loan Application
Image Source: BBC

Join Nadunudi News WhatsApp Group