Google Pay Ban: ಈ ಕಾರಣಕ್ಕೆ ದೇಶದಲ್ಲಿ ಬ್ಯಾನ್ ಆಗಲಿದೆ ಟೆಕ್ ದೈತ್ಯ ಗೂಗಲ್ ಪೆ, ಸ್ಪಷ್ಟನೆ ನೀಡಿದ Google Pay

Google Pay ಅಪ್ಲಿಕೇಶನ್ ಸ್ಥಗಿತಗೊಳಿಸಲು ಕಾರಣವೇನು...? ಸ್ಪಷ್ಟನೆ ನೀಡಿದ ಗೂಗಲ್ ಪೆ

Google Pay Ban In America: ಸದ್ಯ ದೇಶದಲ್ಲಿ ಜನರು Digital Payment ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. Google pay, PhonePe ಸೇರಿದಂತೆ ಇನ್ನಿತರ Application ಗಳು ಜನರಿಗೆ Online Payment ಸೌಲಭ್ಯವನ್ನು ನೀಡುತ್ತದೆ. ಇನ್ನು ದೇಶದಲ್ಲಿ RBI Paytm Payment ವಿರುದ್ಧ ನಿರ್ಬಂಧ ಹೇರಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಪ್ರಸ್ತುತ ಜನರು Paytm ಸೌಲಭ್ಯವನ್ನು ಪಡೆದುಕೊಳ್ಳುತ್ತಿಲ್ಲ. RBI ಪೆಟಿಎಂ ವಿರುದ್ಧ ನಿರ್ಬಂಧ ಹೇರಿರುವ ಬೆನ್ನಲೇ ಇದೀಗ Google Pay ಸ್ಥಗಿತಗೊಳ್ಳುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. Paytm ನ ಜೊತೆಗೆ Google Pay ಕೂಡ ಸೇವೆಯನ್ನು ನಿಲ್ಲಿಸುತ್ತದೆಯೇ ಎನ್ನುವ ಭೀತಿ ಜನರಲ್ಲಿ ಶುರುವಾಗಿದೆ.

Google Pay Ban In America
Image Credit: Pulse

ಶೀಘ್ರದಲ್ಲೇ ಸ್ಥಗಿತಗೊಳ್ಳಲಿಗೆ Google Pay
ಅಂತರಾಷ್ಟ್ರೀಯ ಟೆಕ್ ದೈತ್ಯ Google ನ Google Pay ಅಪ್ಲಿಕೇಶನ್ ತನ್ನ ಸೇವೆಯನ್ನು ನಿಲ್ಲಿಸುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಜನಸಾಮಾನ್ಯರು Paytm ಸೌಲಭ್ಯದ ಜೊತೆಗೆ Google pay ಸೇವೆಯಿಂದಲೂ ವಂಚಿತರಾಗಬೇಕಾದ ಸಂದರ್ಭ ಬಂದಿದೆ ಎನ್ನಬಹುದು.

ಹೌದು..ಅಮೆರಿಕದಲ್ಲಿ ಗೂಗಲ್ ಪೇ ಸೇವೆಯನ್ನು ನಿಲ್ಲಿಸಲಾಗುತ್ತಿದ್ದು, 2024ರ ಜೂನ್ 4 ರಿಂದಲೇ ಅಮೆರಿಕದಲ್ಲಿ Google pay App ಕಾರ್ಯಾಚರಣೆಯನ್ನು ನಿಲ್ಲಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ, ಅಮೇರಿಕಾದಲ್ಲಿ ಮಾತ್ರ Google Pay ಸ್ಥಗಿತಗೊಳ್ಳಲಿದ್ದು ಭಾರತೀಯರು Google Pay ಸೌಲಭ್ಯದಿಂದ ವಂಚಿತರಾಗುವುದಿಲ್ಲ. ಭಾರತದಲ್ಲಿ Google pay ಯಾವುದೇ ತೊಂದರೆ ಇಲ್ಲದೆ ಜನರಿಗೆ ಸೇವೆಯನ್ನು ಒದಗಿಸುತ್ತದೆ.

Join Nadunudi News WhatsApp Group

Google Pay ಸ್ಥಗಿತಗೊಳ್ಳಲು ಕಾರಣವೇನು….?
ಇನ್ನು Google Wallet ಪ್ಲಾಟ್‌ ಫಾರ್ಮ್ ಅಮೆರಿಕದಲ್ಲಿ ಲಭ್ಯವಿರುತ್ತದೆ ಮತ್ತು ಜನರು ಅದರ ಮೂಲಕ ವಹಿವಾಟು ನಡೆಸಬಹುದು ಎಂದು ಕಂಪನಿ ಘೋಷಿಸಿತು. Google Wallet ಮೂಲಕ ಅಮೆರಿಕದಲ್ಲಿರುವ ಗ್ರಾಹಕರು ಹಣ ವರ್ಗಾವಣೆ, ಕ್ರೆಡಿಟ್ ಕಾರ್ಡ್ ಅಟ್ಯಾಚ್ ಮೆಂಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಬಹುದು.

Google Pay ಅಪ್ಲಿಕೇಶನ್‌ ನ ಕಾರ್ಯಾಚರಣೆಯಲ್ಲಿ ಹೆಚ್ಚು ಸರಳವಾದ ವೈಶಿಷ್ಟ್ಯಗಳನ್ನು ಅಳವಡಿಸುವ ಸಲುವಾಗಿ Google Pay ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. Google pay App ಅನ್ನು ಸ್ಥಗಿತಗೊಳಿಸಲಾಗಿದ್ದರೂ, ಗ್ರಾಹಕರು ಈಗ Google Wallet ಮೂಲಕ ವಹಿವಾಟು ನಡೆಸಬಹುದು. Google Pay ವೈಶಿಷ್ಟ್ಯಗಳನ್ನು Google Wallet ಗೆ ಸ್ಥಳಾಂತರಿಸಲಾಗಿದೆ ಹಾಗೂ ಸದ್ಯದಲ್ಲೆ ಬೇರೆ App ಅನ್ನು ಕೂಡ ಬಿಡುಗಡೆ ಮಾಡುವ ಸಾಧ್ಯತೆ ಇದೆ.

Join Nadunudi News WhatsApp Group