GP EMI: ಗೂಗಲ್ ಪೆ ಬಳಸುವವರಿಗೆ ಸಿಗಲಿದೆ EMI ನಲ್ಲಿ ಸಾಲ, ತಿಂಗಳು 111 ರೂ EMI ನಲ್ಲಿ ಸಾಲ ಪಡೆದುಕೊಳ್ಳಿ

ಗೂಗಲ್ ಪೇ ನಲ್ಲಿ ಸಿಗಲಿದೆ EMI ಸಾಲ ಸೌಲಭ್ಯ, ಕೇವಲ 111 ಮಾಸಿಕ EMI ನಲ್ಲಿ ಪಡೆಯಿರಿ ಸಾಲ

Google Pay EMI Loan: ಭಾರತದಾದ್ಯಂತ UPI ಜನರಿಗೆ ಫಾಸ್ಟೆಸ್ಟ್ ಸರ್ವಿಸ್ ಅನ್ನು ನೀಡುತ್ತಿದೆ. ಜನರು UPI ಮೂಲಕ ತಮ್ಮ ಹಣಕಾಸಿನ ವ್ಯವಹಾರಗಳನ್ನು ಸುಲಭಗೊಳಿಸಿಕೊಳ್ಳುತ್ತಿದ್ದಾರೆ. UPI ಇತ್ತೀಚಿಗೆ ಹಲವು ಅಪ್ಡೇಟ್ ಅನ್ನು ನೀಡುತ್ತಿದ್ದು, ಇದೀಗ ಜನರಿಗೆ ಸಾಲ ಸೌಲಭ್ಯವನ್ನು ನೀಡುವ ಯೋಜನೆಯನ್ನು ಹೂಡಿದೆ.

ಇದಕ್ಕಾಗಿಯೇ Google Pay ಹಲವು ಬ್ಯಾಂಕ್ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಗಳ ಸಾಲಕ್ಕೆ ಹೋಲಿಸಿದರೆ GP ನಲ್ಲಿ ಅತಿ ಕಡಿಮೆ EMI ನಲ್ಲಿ ಸಾಲ ಸೌಲಭ್ಯ ಸಿಗಲಿದೆ. ನೀವು ಸಾಲಕ್ಕಾಗಿ ಅಲೆದಾಡುತ್ತಿದ್ದರೆ ಕಡಿಮೆ EMI ನಲ್ಲಿ ಲಭ್ಯವಿರುವ GP Loan ಅನ್ನು ಆರಿಸಿಕೊಳ್ಳಿ. ಹಾಗಾದರೆ ಗೂಗಲ್ ಪೆ ಮೂಲಕ ಲೋನ್ ಪಡೆಯುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

Google Pay Loan
Image Credit: news4tamil

ಗೂಗಲ್ ಪೇ ನಲ್ಲಿ ಸಿಗಲಿದೆ EMI ಸಾಲ ಸೌಲಭ್ಯ
Google Pay ಇದೀಗ ವೈಯಕ್ತಿಕ ಸಾಲ ಪಡೆಯುವಲ್ಲಿ ಸಹಾಯವಾಗಲಿದೆ. Google Pay ನ ಮೂಲಕ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದು. ಇದನ್ನು ಸ್ಯಾಚೆಟ್ ಲೋನ್ ಎಂದು ಕರೆಯಲಾಗುತ್ತದೆ. ಗೂಗಲ್ ಪೇ ಸಾಲ ನೀಡಲು DMI Finance ನೊಂದಿಗೆ ಕೈಜೋಡಿಸಿದೆ. Google Pay ಅನೇಕ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರತಿದಿನ ವ್ಯಾಪಾರ ಮಾಡಲು ಮತ್ತು ದಿನನಿತ್ಯದ ಸಾಲವನ್ನು ಪಾವತಿಸಲು ಬಯಸುವವರಿಗೆ Google ನ ಈ ಸೇವೆಯು ತುಂಬಾ ಪ್ರಯೋಜನಕಾರಿಯಾಗಿದೆ. Google ಸಾಲ ನೀಡಲು ICICI, HDFC, Kotak Mahindra ಮತ್ತು ಫೆಡರಲ್ ಬ್ಯಾಂಕ್‌ ಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

Google Pay EMI Loan
Image Credit: Zee News

ಕೇವಲ 111 ಮಾಸಿಕ EMI ನಲ್ಲಿ ಸಾಲ ಪಡೆಯಿರಿ
Google Pay ಕಂಪನಿಯು ಸಣ್ಣ ವ್ಯಾಪಾರಿಗಳಿಗೆ 15,000 ರೂ. ಗಳಿಂದ ಪ್ರಾರಂಭವಾಗುವ ಸ್ಯಾಚೆಟ್ ಸಾಲವನ್ನು ನೀಡಲು ಮುಂದಾಗಿದೆ. ಇದರ ಮಾಸಿಕ ಕಂತು 111 ರೂಪಾಯಿ ಆಗಿದೆ. ವ್ಯಾಪಾರಿಗಳ ದುಡಿಯುವ ಬಂಡವಾಳದ ಅಗತ್ಯಗಳನ್ನು ಪೂರೈಸುವುದು ಇದರ ಉದ್ದೇಶವಾಗಿದೆ. ಪ್ರಸ್ತುತ, Google Pay ಮತ್ತು ಇನ್ನಿತರ ದೊಡ್ಡ ಪಾವತಿ ಕಂಪನಿಗಳು ಲಭ್ಯವಿರುವ ವ್ಯಾಪಾರಿಗಳಿಗೆ ಇಂತಹ ಸೇವೆಗಳನ್ನು ನೀಡುತ್ತಿವೆ.

Join Nadunudi News WhatsApp Group

ಈ ರೀತಿಯಾಗಿ ಗೂಗಲ್ ಪೆ ಮೂಲಕ ಸಾಲ ಪಡೆಯಿರಿ
*ಮೊದಲು Google Pay Business ಆಯ್ಕೆಗೆ ಭೇಟಿ ನೀಡಬೇಕು

*Loan ವಿಭಾಗಕ್ಕೆ ಹೋಗಿ ಮತ್ತು ಆಫರ್‌ಗಳ ಮೇಲೆ ಕ್ಲಿಕ್ ಮಾಡಬೇಕು

*ಸಾಲದ ಮೊತ್ತವನ್ನು ನಮೂದಿಸಬೇಕು

*ನಂತರ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್‌ ಗೆ ಮರುನಿರ್ದೇಶಿಸಲಾಗುತ್ತದೆ.

*ಇಲ್ಲಿ ನೀವು KYC ಸೇರಿದಂತೆ ಕೆಲವು ಸುಲಭ ಹಂತಗಳನ್ನು ಪೂರ್ಣಗೊಳಿಸಿದ ನಂತರ ಸಾಲವನ್ನು ಪಡೆಯಬಹುದು.

Join Nadunudi News WhatsApp Group