Google Pay: ಗೂಗಲ್ ಪೆ ಬಳಸುವವರಿಗೆ ದೊಡ್ಡ ಗುಡ್ ನ್ಯೂಸ್, 10 ನಿಮಿಷದಲ್ಲಿ ಸಿಗಲಿದೆ 1 ಲಕ್ಷ ಸಾಲ.

Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ...?

Google Pay Loan: ಸದ್ಯ ದೇಶದಲ್ಲಿ UPI ಬಳಕೆ ಹೆಚ್ಚುತ್ತಿದೆ. UPI ಆಗಾಗ ಹೊಸ ಹೊಸ ಸೌಲಭ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಸದ್ಯ ಜನಪ್ರಿಯ UPI ಅಪ್ಲಿಕೇಶನ್ ಆಗಿರುವ Google Pay ಇದೀಗ ತನ್ನ ಬಳಕೆದಾರರಿಗೆ ಮಹತ್ವದ ಸೌಲಭ್ಯವನ್ನು ನೀಡಲು ಮುಂದಾಗಿದೆ. 

ಬ್ಯಾಂಕ್ ಗಳು, ವಿವಿಧ ಹಣಕಾಸು ಸಂಸ್ಥೆಗಳು ನಿಮಗೆ ಸಾಲವನ್ನು ನೀಡುವುದು ತಿಳಿದಿರುವ ವಿಚಾರ. ಆದರೆ ಇದೀಗ ಗೂಗಲ್ ಪೆ ಕೂಡ ಸಾಲವನ್ನು ನೀಡಲು ಹೊಸ ಹೆಜ್ಜೆಯನ್ನು ಇಟ್ಟಿದೆ. ನೀವು ಗೂಗಲ್ ಪೆ ನ ಮೂಲಕ ಇನ್ನುಮುಂದೆ ಸಾಲವನ್ನು ಪಡೆಯಬಹುದಾಗಿದೆ. Google Pay ಮೂಲಕ ಸಾಲ ಪಡೆಯುವ ವಿಧಾನ ಹೇಗೆ…? ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.

Google Pay Loan
Image Credit: Zeenews

ಗೂಗಲ್ ಪೆ ಬಳಸುವವರಿಗೆ ದೊಡ್ಡ ಗುಡ್ ನ್ಯೂಸ್
ಜನಪ್ರಿಯ ಆನ್ಲೈನ್ ಪಾವತಿ ಅಪ್ಲಿಕೇಶನ್ ಗಳಲ್ಲಿ Google Pay ಕೂಡ ಒಂದಾಗಿದೆ. ದೇಶದಲ್ಲಿ ಕೋಟ್ಯಾಂತರ ಜನರು GP ಅನ್ನು ಬಳಸುತ್ತಾರೆ. ಸದ್ಯ ಗೂಗಲ್ ಪೇ ಅನ್ನು ಕೇವಲ ಪೇಮೆಂಟ್ ಗೆ ಮಾತ್ರವಲ್ಲ ಸಾಲಕ್ಕೂ ಬಳಸಬಹುದಾಗಿದೆ. ಹೌದು, ಗೂಗಲ್ ಪೇ ತನ್ನ ಬಳಕೆದಾರರಿಗೆ ಬಹಳ ಸುಲಭವಾಗಿ ವಯಕ್ತಿಕ  ಸಾಲ ಸೌಲಭ್ಯವನ್ನು ನೀಡುತ್ತಿದೆ. Axis ಬ್ಯಾಂಕ್, HDFC ಬ್ಯಾಂಕ್ ಹಾಗು ಇತರ ಬ್ಯಾಂಕ್ ಗಳ ನಡುವೆ ಗೂಗಲ್ ಪೇ ಮಧ್ಯವರ್ತಿ ಆಗಿ ಕಾರ್ಯ ನಿರ್ವಹಿಸುತ್ತದೆ.

10 ನಿಮಿಷದಲ್ಲಿ ಸಿಗಲಿದೆ 1 ಲಕ್ಷ ಸಾಲ
ನೀವು ಗೂಗಲ್ ಪೇ ಮೂಲಕ 1,00,000 ಗಳ ವರೆಗೂ ಸಾಲ ಪಡೆಯಬಹುದು. ಯಾವುದೇ ಅಡಮಾನ ದಾಖಲೆ ಇಲ್ಲದೇ ಈ ಸಾಲವನ್ನು ನೀವು ಬಹಳ ಸುಲಭವಾಗಿ ಪಡೆಯಬಹುದಾಗಿದೆ. ಗೂಗಲ್ ಪೇ ವಯಕ್ತಿಕ ಸಾಲ ಪಡೆಯಲು ನೀವು ಗೂಗಲ್ ಪೇ ಬಳಕೆದಾರರಾಗಿರಬೇಕು ಹಾಗು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರುವುದು ಕಡ್ಡಾಯ ಆಗಿದೆ.

Google Pay ಮೂಲಕ ಲೋನ್ ಪಡೆಯುವ ಲಭ್ಯತೆ ಮತ್ತು ನಿಯಮಗಳು ನಿಮ್ಮ ಹತ್ತಿರದ ಸಾಲ ಪಾಲುದಾರ ಮತ್ತು ನಿಮ್ಮ ಅಪ್ಲಿಕೇಶನ್‌ ನ ಸ್ಥಿತಿಯನ್ನು ಅವಲಂಬಿಸಿರಬಹುದು. Google Pay ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು, ನೀವು Google Pay ಅಪ್ಲಿಕೇಶನ್‌ ನಲ್ಲಿ ಲಭ್ಯವಿರುವ ಕ್ರೆಡಿಟ್ ಅಥವಾ ಸಾಲ ವಿಭಾಗಕ್ಕೆ ಹೋಗಬೇಕು. ಅಲ್ಲಿ ನೀವು ಅಗತ್ಯ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಮತ್ತು ಸಾಲವನ್ನು ಪಡೆಯಲು ನಿಮ್ಮ ಸೂಕ್ತತೆಯನ್ನು ಪರಿಶೀಲಿಸಲಾಗುತ್ತದೆ.

Join Nadunudi News WhatsApp Group

Google Pay Loan Apply
Image Credit: Samayam

ಈ ರೀತಿಯಾಗಿ ಗೂಗಲ್ ಪೆ ನಿಂದ ಸಾಲವನ್ನು ಪಡೆದುಕೊಳ್ಳಿ
•ನಿಮ್ಮ ಮೊಬೈಲ್ ಸಾಧನದಲ್ಲಿ Google Pay ಅಪ್ಲಿಕೇಶನ್ ತೆರೆಯಿರಿ.

•ಮೆನುವಿನಿಂದ “ಸಾಲ” ಅಥವಾ “ಕ್ರೆಡಿಟ್” ಆಯ್ಕೆಯನ್ನು ಆಯ್ಕೆಮಾಡಿ.

•ನಿಮ್ಮ ಹೆಸರು, ವಿಳಾಸ, ಆದಾಯ, ಇತ್ಯಾದಿ ಅಗತ್ಯವಿರುವ ಮಾಹಿತಿಯನ್ನು ಭರ್ತಿಮಾಡಿ.

•ಸಾಲದ ಅರ್ಜಿ ಪ್ರಕ್ರಿಯೆಯ ಭಾಗವಾಗಿ, ನಿಮ್ಮ ಗುರುತಿನ ಪುರಾವೆ, ಆದಾಯ ಪ್ರಮಾಣಪತ್ರ ಮತ್ತು ಬ್ಯಾಂಕ್ ಖಾತೆ ಇತ್ಯಾದಿಗಳ ಫೋಟೋಗಳನ್ನು ಅಪ್‌ ಲೋಡ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.

•ನೀವು ಒದಗಿಸಿದ ಎಲ್ಲಾ ಮಾಹಿತಿಯ ಪರಿಶೀಲನೆಯ ನಂತರ, ನಿಮ್ಮ ಸಾಲದ ಅನುಮೋದನೆ ಮತ್ತು ಸಾಲದ ಮೊತ್ತದ ಸ್ವೀಕೃತಿಯ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

•ನಿಮ್ಮ ಸಾಲದ ಮೊತ್ತವನ್ನು ಹಿಂದಿರುಗಿಸಲು ನಿಗದಿತ ಸಮಯದೊಳಗೆ ಅಗತ್ಯ ಸೂಚನೆಗಳನ್ನು ಅನುಸರಿಸಿ.

Google Pay Loan 2024
Image Credit: Gizbot

Join Nadunudi News WhatsApp Group