Recharge Fee: ಗೂಗಲ್ ಪೇ ಬಳಸುವವರು ಇನ್ನುಮುಂದೆ ಶುಲ್ಕ ಕಟ್ಟಬೇಕು, ಈ ಸೇವೆಗಳು ಶುಲ್ಕ ನಿಗದಿಸಿದ Google Pay
Google Pay ಮೂಲಕ ರಿಚಾರ್ಜ್ ಮಾಡಿದರೆ ಇಷ್ಟು ಶುಲ್ಕ ಪಾವತಿಸಬೇಕು
Google Pay Convenience Fee on Mobile Recharge: ದೇಶದಲ್ಲಿ ಕೆಲವು ಜನಪ್ರಿಯ UPI Application ಗಳು ಜನರಿಗೆ ಆನ್ಲೈನ್ ಪೇಮೆಂಟ್ (Online Payment) ಅನ್ನು ನೀಡುತ್ತಿದೆ. Google Pay, PhonePe , Paytm ಹಾಗೆ ಇನ್ನಿತರ ಆಪ್ ಗಳು ಸೇರಿಕೊಂಡಿದೆ. ಸದ್ಯ ಜನಪ್ರಿಯ ಆನ್ಲೈನ್ ಪಾವತಿ ಅಪ್ಲಿಕೇಶನ್ ನಲ್ಲಿ ಒಂದಾದ Google Pay ಇದೀಗ ತನ್ನ UPI Payment ನಲ್ಲಿ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದೆ.
ಈ ಮೂಲಕ ಗೂಗಲ್ ಪೆ ತನ್ನ ಬಳಕೆದಾರರಿಗೆ ಬೇಸರದ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ Google pay ಬಳಕೆದಾರರು ಈ ಸೇವೆಯನ್ನು ಪಡೆಯಲು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.ಹಾಗಾದರೆ ಯಾವ ಯಾವ ಸೇವೆಗಳಿಗೆ ಶುಲ್ಕ ಪಾವತಿ ಮಾಡಬೇಕು ಮತ್ತು ಎಷ್ಟು ಶುಲ್ಕ ಪಾವತಿ ಮಾಡಬೇಕು ಅನ್ನುವುದರ ಬಗ್ಗೆ ತಿಳಿಯೋಣ.
![Google Pay Convenience Fee](https://nadunudi.in/wp-content/uploads/2023/12/Google-Pay-Convenience-Fee.jpg)
GP ಮೂಲಕ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳುವವರಿಗೆ ಬಿಗ್ ಅಪ್ಡೇಟ್
ಸಾಮಾನ್ಯವಾಗಿ Google Pay ಬಳಸುವ ಪ್ರತಿ ಬಳಕೆದಾರರು ಕೂಡ ಹೆಚ್ಚಾಗಿ ಎಲ್ಲ ರೀತಿಯ ವಹಿವಾಟನ್ನು ಇದರ ಮೂಲಕವೇ ನಡೆಸುತ್ತಾರೆ. ಬಳಕೆದಾರರು ಹೆಚ್ಚಾಗಿ Mobile Recharge, TV Recharge, Electricity Bill ಸೇರಿದಂತೆ ಇನ್ನಿತರ ಪಾವತಿಗಳನ್ನು ಮೊಬೈಲ್ ಮೂಲಕವೇ ನಡೆಸುತ್ತಾರೆ.
ಸದ್ಯ Google pay ಈ ರೀತಿಯ ವಹಿವಾಟಿನಲ್ಲಿ ಮಹತ್ವದ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಇನ್ನು Google Pay ನ ಮೂಲಕ Mobile Recharge ಮಾಡಿಕೊಳ್ಳುವವರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಗೂಗಲ್ ಪೆ ಮೊಬೈಲ್ ರಿಚಾರ್ಜ್ ಗೆ ಯಾವ ರೀತಿಯ ಕನ್ವಿನಿಯೆನ್ಸ್ ಪ್ರೈಸ್ ಅನ್ನು ವಿಧಿಸಿದೆ ಎಂದು ನೋಡೋಣ.
![Google Pay Convenience Fee on Mobile Recharge](https://nadunudi.in/wp-content/uploads/2023/12/Google-Pay-Convenience-Fee-on-Mobile-Recharge.jpg)
Google Pay ಮೂಲಕ ರಿಚಾರ್ಜ್ ಮಾಡಿಕೊಂಡರೆ ನಿಮ್ಮ ಖಾತೆಯಿಂದ ಕಡಿತವಾಗಲಿದೆ ಇಷ್ಟು ಹಣ
•ಗೂಗಲ್ ಪೇ 100 ರೂಪಾಯಿ ಒಳಗಿನ ರಿಚಾರ್ಜ್ ಪ್ಲಾನ್ ಗಳಿಗೆ ಅನುಕೂಲಕರ ಶುಲ್ಕವನ್ನು ಪಾವತಿಸಬೇಕಿಲ್ಲ.
•ನೀವು 101 ರಿಂದ 200 ರ ನಡುವಿನ ಬೆಲೆಯ ಪ್ಲಾನ್ನಿಂದ ರಿಚಾರ್ಜ್ ಮಾಡಿದರೆ 1 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
•201 ರಿಂದ 300 ವರೆಗಿನ ಬೆಲೆಯ ಪ್ಲಾನ್ನಿಂದ ರಿಚಾರ್ಜ್ ಮಾಡಿದರೆ 2 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
•301 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಪ್ಲಾನ್ನಿಂದ ರಿಚಾರ್ಜ್ ಮಾಡಿದರೆ 3 ರೂಪಾಯಿ ಅನುಕೂಲಕರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
![Google Pay Convenience Fee for Mobile Recharge Plans](https://nadunudi.in/wp-content/uploads/2023/12/G-Pay-Convenience-Fee.jpg)
ಶುಲ್ಕವಿಲ್ಲದೆ ರಿಚಾರ್ಜ್ ಮಾಡಿಕೊಳ್ಳಲು ಹೀಗೆ ಮಾಡಿ
ಮೊಬೈಲ್ ರಿಚಾರ್ಜ್ ಅನ್ನು ಈ ರೀತಿಯಾಗಿ ಶುಲ್ಕವಿಲ್ಲದೆ ರಿಚಾರ್ಜ್ ಮಾಡಬಹುದಾಗಿದೆ. ಹೌದು ರಿಚಾರ್ಜ್ ಮಾಡಬೇಕಾದ ಟೆಲಿಕಾಂ ಕಂಪನಿಯ ಅಪ್ಲಿಕೇಶನ್ ಅಥವಾ ವೆಬ್ ಸೈಟ್ ಗೆ ಭೇಟಿ ನೀಡಿ ನೀವು ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸದೇ ರಿಚಾರ್ಜ್ ಮಾಡಿಕೊಳ್ಳಬಹುದು. ಉದಾಹರಣೆಗೆ, MyJio ಅಥವಾ Airtel Thanks ಮೂಲಕ ರೀಚಾರ್ಜ್ ಮಾಡಬಹುದು.