8th Pay Salary: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, 50% ರಷ್ಟು ಹೆಚ್ಚಾಗಲಿದೆ ಸಂಬಳ.

ಸರಕಾರಿ ನೌಕರರ 8 ನೇ ವೇತನದ ಆಯೋಗ ರಚನೆಯ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರಕಾರ.

8th Pay Commission Salary: ಇತ್ತೀಚಿಗೆ ಸರ್ಕಾರೀ ನೌಕರರ (Government Employees) ವೇತನದ ವಿಷಯವಾಗಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಈಗಾಗಲೇ ಸರ್ಕಾರಿ ನೌಕರರಿಗೆ  ವೇತನ ಹೆಚ್ಚು ಮಾಡುವುದರ ಕುರಿತು ಕೇಂದ್ರ ಸರ್ಕಾರ ಸಾಕಷ್ಟು ಮಾಹಿತಿಗಳನ್ನು ಹೊರ ಹಾಕಿದೆ.

ಕೇಂದ್ರ ಸರಕಾರ (Central Government) ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಇದೀಗ ಸರಕಾರಿ ನೌಕರರ 8 ನೇ ವೇತನದ ಆಯೋಗ ರಚನೆಯ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

8 ನೇ ವೇತನ ಆಯೋಗ ರಚನೆಯ ಬಗ್ಗೆ ಸರ್ಕಾರದ ಮಹತ್ವದ ನಿರ್ಧಾರ
ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ ಶೀಘ್ರದಲ್ಲೇ 8 ನೇ ವೇತನ ಆಯೋಗ (8th Pay Commission) ಜಾರಿಗೊಳಿಸುವುದಾಗಿ ಘೋಷಣೆ ಹೊರಡಿಸಿದೆ.

An important decision of the Government regarding the formation of 8th Pay Commission
Image Credit: rightsofemployees

ಮುಂದಿನ ವರ್ಷದಲ್ಲಿ ಕೇಂದ್ರ ನೌಕರರ ವೇತನವು ಶೇ. 44 ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭಿಸಿದೆ. ಪಿಟ್ ಮೆಂಟ್ ಅಂಶವನ್ನು ಹೊರತುಪಡಿಸಿ ಬೇರೆ ರೀತಿಯಲ್ಲಿ ವೇತನವನ್ನು ಪರಿಶೀಲಿಸಬೇಕು ಎಂದು ಸರ್ಕಾರ ನಿರ್ಧರಿಸಿದೆ. ಹಳೆಯ ಆಯೋಗಕ್ಕೆ ಹೋಲಿಸಿದರೆ ಈ ವೇತನ ಆಯೋಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವುದಾಗಿ ಸರ್ಕಾರ ನಿರ್ಧರಿಸಿದೆ.

ಈ ಮೂಲಕ ಕೇಂದ್ರ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಸ್ತುತ ನೌಕರರ ಫಿಟ್ ಮೆಂಟ್ ಅಂಶವು 2.57 ಆಗಿದೆ. ಈ ಫಿಟ್ ಮೆಂಟ್ ಅಂಶದಲ್ಲಿ ಬದಲಾವಣೆ ಆದರೆ ಸಂಪೂರ್ಣ ವೇತನದಲ್ಲಿ ಬದಲಾವಣೆ ಆಗಲಿದೆ.

Join Nadunudi News WhatsApp Group

8 ನೇ ವೇತನ ಎಷ್ಟು ಶೇ. ಹೆಚ್ಚಾಗಲಿದೆ
ಸರ್ಕಾರೀ ನೌಕರರು ಪ್ರಸ್ತುತ 7 ನೇ ವೇತನದ ಆಯೋಗದ ಅಡಿಯಲ್ಲಿ ವೇತನ ಪಡೆಯುತ್ತಿದ್ದಾರೆ. ಇನ್ನು 8 ನೇ ವೇತನ ಆಯೋಗದಡಿ ಈ ಬಾರಿ ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಉದ್ಯೋಗಿಗಳ ಕನಿಷ್ಠ ವೇತನವನ್ನು ನೇರವಾಗಿ 18 ಸಾವಿರ ರೂ. ನಿಂದ 26 ಸಾವಿರ ರೂ. ಗೆ ಹೆಚ್ಚಿಸಬಹುದು.

An important decision of the Government regarding the formation of 8th Pay Commission
Image Credit: knowledia

ತುಟ್ಟಿಭತ್ಯೆಯನ್ನು ಜುಲೈನಲ್ಲಿ ಸುಮಾರು ಶೇಕಡಾ 4 ರಷ್ಟು ಏರಿಕೆ ಮಾಡುವ ಸಾಧ್ಯತೆಯಿದೆ. ಇದರಿಂದಾಗಿ ತುಟ್ಟಿಭತ್ಯೆಯು ಶೇಕಡಾ 46 ಕ್ಕೆ ಹೆಚ್ಚಳವಾಗಿದೆ. ಅದಾದ ಬಳಿಕ ಡಿ ಎ ಶೇಕಡಾ 4 ರಷ್ಟು ಏರಿಕೆ ಮಾಡಿದರೆ, ತುಟ್ಟಿಭತ್ಯೆಯು ಶೇಕಡಾ 50 ರಷ್ಟು ಏರಿಕೆಯಾಗಲಿದೆ. ಆದ್ದರಿಂದಾಗಿ ಈಗ 8 ವೇತನ ಆಯೋಗದ ಬೇಡಿಕೆ ಇದೆ.

Join Nadunudi News WhatsApp Group