Employees DA Hike: ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್, ನಿಮ್ಮ ಸಂಬಳದ ಕುರಿತಂತೆ ನಾಳೆ ಬಹುದೊಡ್ಡ ಘೋಷಣೆ.

ಸರ್ಕಾರೀ ನೌಕರರ ಸಂಬಳದ ಕುರಿತಂತೆ ನಾಳೆ ಬಹುದೊಡ್ಡ ಘೋಷಣೆ

Govt Employees DA Hike In March 2024: ಹಲವು ಸಮಯದಲ್ಲಿ ಸರ್ಕಾರೀ ನೌಕರರ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ನೌಕರರು ಈ ಹಿಂದೆಯೇ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಮನವಿ ಮಾಡಿದ್ದು, ಸರಕಾರ ಇದೀಗ 2023 -24 ರ ಹಣಕಾಸು ವರ್ಷದ ಕೊನೆಯಲ್ಲಿ ನೌಕರರ ವೇತನದ ಬಗ್ಗೆ ತೀರ್ಮಾನ ಕೈಗೊಂಡಿದೆ.

ಹೋಳಿ ಹಬ್ಬದ ಸಂಭ್ರಮದ ಕುಶಿಯಲ್ಲಿರುವವ ನೌಕರರಿಗೆ ಕೇಂದ್ರ ಸರ್ಕಾರ ಡಬಲ್ ಖುಷಿ ನೀಡಲಿದೆ. ಮಾರ್ಚ್ ತಿಂಗಳಿನಲ್ಲಿ ನೌಕರರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿದೆ.

Govt Employees DA Hike In March 2024
Image Credit: Timesbull

ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್
ಸದ್ಯ ಮಾರ್ಚ್ 2024 ರ ತಿಂಗಳಿನಲ್ಲಿ ಸರ್ಕಾರೀ ನೌಕರರಿಗೆ ಬಹುದೊಡ್ಡ ಘೋಷಣೆ ಹೊರಬೀಳಲಿದೆ. ನೌಕರರ ಬಹುದಿನದ ಬೇಡಿಕೆಗೆ ನಾಳೆ ತೆರೆ ಬೀಳಲಿದೆ. ಸಾಧ್ಯ ಕೇಂದ್ರ ಸರ್ಕಾರ ನೌಕರರ ವೇತನ ಹೆಚ್ಚಳದ ಜೊತೆಗೆ ಇತರ ಭತ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗಾಗಿ ಕೇಂದ್ರ ಸರ್ಕಾರ ನೌಕರರ ವೇತನ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಲಿದೆ. ಮಾರ್ಚ್ 30 ರಂದು ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿ ಸಿಗಲಿದೆ.

ಸರ್ಕಾರೀ ನೌಕರರ ಸಂಬಳದ ಕುರಿತಂತೆ ನಾಳೆ ಬಹುದೊಡ್ಡ ಘೋಷಣೆ
ತುಟ್ಟಿಭತ್ಯೆ ಅಂದರೆ ಕೇಂದ್ರ ನೌಕರರಿಗೆ ಡಿಎಯನ್ನು ಶೇ 4ರಷ್ಟು ಹೆಚ್ಚಿಸಲಾಗಿದೆ. ಪ್ರಸ್ತುತ ನೌಕರರ ಭತ್ಯೆ ಶೇ.46 ರಿಂದ ಶೇ. 50ಕ್ಕೆ ಏರಿಕೆಯಾಗಿದೆ. ಕಳೆದ ಜನವರಿಯಿಂದಲೇ ಜಾರಿಗೆ ಬಂದಿದ್ದು, ಕೇಂದ್ರ ನೌಕರರಿಗೂ ಜನವರಿ ಮತ್ತು ಫೆಬ್ರವರಿ ಎರಡು ತಿಂಗಳ ಬಾಕಿ ವೇತನ ಸಿಗಲಿದೆ. ಅಂದರೆ 2 ತಿಂಗಳ ಬಾಕಿಯ ಜೊತೆಗೆ ವರ್ಧಿತ ಮಾರ್ಚ್ ಭತ್ಯೆಯನ್ನು ಸಹ ಮಾರ್ಚ್ ಸಂಬಳಕ್ಕೆ ಸೇರಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರ ಭತ್ಯೆ ಶೇ.50ಕ್ಕೆ ತಲುಪಿದ್ದು, ಮನೆ ಬಾಡಿಗೆ ಭತ್ಯೆ ಅಂದರೆ ಎಚ್‌ಆರ್‌ಎ ಅನ್ನು ಹೆಚ್ಚಿಸಲಾಗಿದೆ.

Govt Employees DA Hike
Image Credit: Pune.news

ನಗರದ ವರ್ಗವನ್ನು ಅವಲಂಬಿಸಿ ಕೇಂದ್ರ ನೌಕರರು ಶೇಕಡಾ 30 ರಷ್ಟು ಎಚ್‌ಆರ್‌ಎ ಪಡೆಯುತ್ತಾರೆ. ಇದಲ್ಲದೇ ಕೇಂದ್ರ ನೌಕರರ ಮಾರ್ಚ್ ತಿಂಗಳ ವೇತನಕ್ಕೆ ಇತರೆ ಭತ್ಯೆಗಳನ್ನು ಸೇರಿಸಲಾಗುವುದು.ಇನ್ನು 50 ರಷ್ಟು ಡಿಎ ಜೊತೆಗೆ ಮಕ್ಕಳ ಆರೈಕೆ, ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಹಾಯಧನ, ವರ್ಗಾವಣೆಯ ಮೇಲಿನ ಪ್ರಯಾಣ ಭತ್ಯೆ, ಉಡುಗೆ ಭತ್ಯೆ, ಗ್ರಾಚ್ಯುಟಿ ಸೀಲಿಂಗ್, ಕೇಂದ್ರ ನೌಕರರಿಗೆ ಮೈಲೇಜ್ ಭತ್ಯೆಗಳನ್ನು ಹೆಚ್ಚಿಸಲಾಗಿದೆ. 2024 ರ ಮಾರ್ಚ್ ನಲ್ಲಿ ಕೇಂದ್ರ ನೌಕರರು ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ.

Join Nadunudi News WhatsApp Group

Govt Employees Latest News
Image Credit: Live Mint

Join Nadunudi News WhatsApp Group