7th Pay Update: ರಾಜ್ಯ ಸರ್ಕಾರೀ ನೌಕರರಿಗೆ ದೊಡ್ಡ ಬೇಸರದ ಸುದ್ದಿ, ಸಂಬಳದಲ್ಲಿ ಇಷ್ಟು ಕಟ್ ಮಾಡಲು ಆದೇಶ

ರಾಜ್ಯ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ, ನೌಕರರಿಗೆ ಮತ್ತೊಂದು ಹೊರೆ.

Implementation Of 7th Pay Commission: ರಾಜ್ಯ ಸರ್ಕಾರೀ ನೌಕರರು ಬಹು ದಿನಗಳಿಂದ 7 ನೇ ವೇತನ ಆಯೋಗ ವರದಿಯ ಬಗ್ಗೆ ಕಾಯುತ್ತಿದ್ದಾರೆ. ರಾಜ್ಯದಲ್ಲಿ ಇನ್ನೂ ಕೂಡ 7 ನೇ ವೇತನ ಆಯೋಗ ವರದಿ ಜಾರಿಯಾಗಿಲ್ಲ. ಈ ಬಗ್ಗೆ ಸರ್ಕಾರೀ ನೌಕರರು ಈಗಲೂ ಯೋಚಯಿಸುತ್ತಲೇ ಇದ್ದಾರೆ.

ಯಾವಾಗ 7 ನೇ ವೇತನ ಆಯೋಗ ವರದಿ ಜಾರಿಯಾಗುತ್ತದೆ ಎನ್ನುವ ಕುತೂಹಲದಲ್ಲಿ ನೌಕರರು ದಿನದೂಡುತ್ತಿದ್ದರೆ ಎನ್ನಬಹುದು. ಸದ್ಯ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ ಹೊರಬಿದ್ದಿದೆ.

Implementation Of 7th Pay Commission
Image Credit: India

ರಾಜ್ಯ ಸರ್ಕಾರೀ ನೌಕರರಿಗೆ ಬೇಸರದ ಸುದ್ದಿ
ಇನ್ನು 7 ನೇ ವೇತನ ಆಯೋಗ ವರದಿ ಜಾರಿಗಾಗಿ ಕಾಯುತ್ತಿದ್ದವರಿಗೆ ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗಿದೆ. ಇದರ ಬೆನ್ನಲ್ಲೇ ಸರ್ಕಾರಿ ನೌಕರರ ಮೇಲೆ ಹೊಸ ಹೊರೆ ಬಿದ್ದಿದೆ. ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯ ಜೀವ ವಿಮಾ ನಿಯಮಾವಳಿ ಪ್ರಕಾರ 72,754 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಜೀವ ವಿಮೆ ಮಾಡಿಲ್ಲ ಎಂದು ರಾಜ್ಯ ಸರ್ಕಾರ ಪತ್ತೆ ಮಾಡಿದೆ.

ಆದ್ದರಿಂದ ಅವರ ಸರಾಸರಿ ವೇತನ ಶ್ರೇಣಿಯ ಕನಿಷ್ಠ ಶೇ.6.25ರ ಮಾಸಿಕ ವಿಮಾ ಪ್ರೀಮಿಯಂ ಅನ್ನು ಕಡ್ಡಾಯವಾಗಿ ಕಡಿತಗೊಳಿಸುವಂತೆ ಆದೇಶಿಸಲಾಗಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಖಜಾನೆ ಇಲಾಖೆ ಸುತ್ತೋಲೆ ಹೊರಡಿಸಿದೆ.

State Govt Employees
Image Credit: Ipleaders

ರಾಜ್ಯ ಸರ್ಕಾರೀ ನೌಕರರಿಗೆ ಮತ್ತೊಂದು ಹೊರೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಗಳ ನಿಯಮ 8 ರ ಪ್ರಕಾರ, ಪ್ರತಿಯೊಬ್ಬ ರಾಜ್ಯ ಸರ್ಕಾರಿ ನೌಕರ, ಅಧಿಕಾರಿಯು ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಿಂದ ಕನಿಷ್ಠ 6.25% ಮಾಸಿಕ ವಿಮಾ ಪ್ರೀಮಿಯಂಗಾಗಿ ಹುದ್ದೆಯ ಸರಾಸರಿ ವೇತನಕ್ಕಾಗಿ ಜೀವ ವಿಮೆಯನ್ನು ಪಡೆಯಬೇಕಾಗುತ್ತದೆ. ಅವರಿಂದ ನಡೆಯಿತು. ಕಡ್ಡಾಯ ಜೀವ ವಿಮಾ ನಿಯಮಗಳ ನಿಯಮ 6 (ii) ರಂತೆ, 50 ವರ್ಷಕ್ಕಿಂತ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ಜೀವ ವಿಮಾ ಪಾಲಿಸಿ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.ಆದರೆ, 50 ವರ್ಷ ತುಂಬದ ಎಷ್ಟೋ ಮಂದಿ ಜೀವ ವಿಮೆ ಪಡೆದಿಲ್ಲ ಎಂಬುದು ಗೊತ್ತಾಗಿದೆ.

Join Nadunudi News WhatsApp Group

ಮಾರ್ಚ್ 31ಕ್ಕೆ 50 ವರ್ಷ ಪೂರೈಸಿದ ನೌಕರರನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಸುಮಾರು 72,754 ಅಧಿಕಾರಿಗಳು ಮತ್ತು ನೌಕರರು ಕಡ್ಡಾಯ ಜೀವ ವಿಮೆ ನಿಯಮಗಳಲ್ಲಿ ನಿರ್ದಿಷ್ಟಪಡಿಸಿರುವಂತೆ ಸರಾಸರಿ ವೇತನದ ಕನಿಷ್ಠ 6.25 ಪ್ರತಿಶತದಷ್ಟು ಮಾಸಿಕ ವಿಮಾ ಪ್ರೀಮಿಯಂಗೆ ವಿಮಾ ಇಲಾಖೆಯಲ್ಲಿ ಜೀವ ವಿಮೆ ಮಾಡಿಲ್ಲ ಎನ್ನುವುದು ತಿಳಿದು ಬಂದಿದೆ. ಹೀಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಗಳ ನಿಯಮ 8ನ್ನು ಕಡ್ಡಾಯವಾಗಿ ಪಾಲಿಸುವಂತೆ ಸಂಬಂಧಪಟ್ಟ ವೇತನ ವಿತರಣಾ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

7th Pay Commission Latest Update
Image Credit: Informalnewz

Join Nadunudi News WhatsApp Group