Health Facility: ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ, ಖಾಸಗಿ ಆಸ್ಪತ್ರೆಯಲ್ಲಿ ಬಹುತೇಕ ಉಚಿತ ಚಿಕೆತ್ಸೆ.

ಸರ್ಕಾರೀ ನೌಕರರಿಗೆ ಆರೋಗ್ಯ ಸೇವೆಗಳ ಮೊತ್ತವನ್ನ ಹೆಚ್ಚಳ ಮಾಡಲಾಗಿದ್ದು ಇದು ಸರ್ಕಾರೀ ನೌಕರರ ಸಂತಸಕ್ಕೆ ಕಾರಣವಾಗಿದೆ.

Free Treatment Government Employees: ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಇತ್ತೀಚಿಗೆ ಡಿಎ ಹೆಚ್ಚಳವಾಗಿದೆ. ಡಿಎ ಹೆಚ್ಚಳದಿಂದ ಸರ್ಕಾರಿ ನೌಕರರು ನೆಮ್ಮದಿಯಿಂದ ಇದ್ದಾರೆ. ಕೇಂದ್ರ ಸರ್ಕಾರ ತುಟ್ಟಿಭತ್ಯೆಯಲ್ಲಿ 40% ಹೆಚ್ಚಳ ಮಾಡಿದ್ದು ಇದರಿಂದ ಸದ್ಯ ಸರ್ಕಾರಿ ನೌಕರರರು ನೆಮ್ಮದಿಯಿಂದ ಇದ್ದಾರೆ ಎನ್ನಬಹುದು.

ಇದೀಗ ಮತ್ತೆ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಆರೋಗ್ಯದ ವಿಚಾರವಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಇನ್ನುಮುಂದೆ ಉಚಿತವಾಗಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆದುಕೊಳ್ಳಬಹುದು.

Free Treatment Government Employees
Image Source: Times Of India

ಸರ್ಕಾರಿ ನೌಕರರ ಅರೋಗ್ಯ ಜವಾಬ್ದಾರಿ ಇನ್ನು ಮುಂದೆ ಸರ್ಕಾರದ್ದು
40 ಲಕ್ಷ ಮಂದಿ ಸರ್ಕಾರಿ ನೌಕರರು ಈ ವಿಚಾರ ಕೇಳಿ ನಿಟ್ಟುಸಿರು ಬಿಟ್ಟಿದ್ದಾರೆ. ಸರ್ಕಾರಿ ನೌಕರರಿಗೆ ಇನ್ನುಮುಂದೆ ಅರೋಗ್ಯ ಸಮಸ್ಯೆ ಬಂದರೆ ಚಿಂತಿಸುವ ಅಗತ್ಯ ಇಲ್ಲ. ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗೆ ಹೋಗಲು ರೆಫರ್ ಮಾಡುವ ಅವಶ್ಯಕತೆ ಇಲ್ಲ. ವಿಡಿಯೋ ಕರೆ ಮೂಲಕ ರೆಫರಲ್ ತೆಗೆದುಕೊಳ್ಳಬಹುದು.

ಸರ್ಕಾರಿ ನೌಕರರು CGHS ಅಂದರೆ ಕೇಂದ್ರ ಸರ್ಕಾರದ ಯೋಜನೆಯಡಿ ಚಿಕೆತ್ಸೆ ಪಡೆಯುತ್ತಾರೆ. ಇದರಲ್ಲಿ CGHS ಪ್ಯಾನೆಲ್ ಗೆ ಸಂಪರ್ಕ ಹೊಂದಿದ ಖಾಸಗಿ ಆಸ್ಪತ್ರೆಗಳಿಂದ ಉಚಿತ ಚಿಕಿತ್ಸೆ ಪಡೆಯಬಹುದು.

Free Treatment Government Employees
Imagge Source: India Today

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಳವಾದ ಚಿಕಿತ್ಸಾ ವೆಚ್ಚ

Join Nadunudi News WhatsApp Group

ಓಪಿಡಿ ಚಿಕಿತ್ಸಾ ವೆಚ್ಚವನ್ನು 150 ರೂಪಾಯಿಗೆ ನೀಡಲಾಗುತ್ತಿತ್ತು, ಆದರೆ ಈಗ ಅದನ್ನು 350 ರೂಪಾಯಿಗೆ ಹೆಚ್ಚಿಸಲಾಗಿದೆ. IPD ಗೆ ದಾಖಲಾದ ರೋಗಿಯು ವೈದ್ಯರಲ್ಲಿ ಸಮಾಲೋಚನೆಯನ್ನು ನಡೆಸಲು ರೂಪಾಯಿ 300 ಇದ್ದಿತ್ತು, ಆದರೆ ಈಗ ಅದನ್ನು 350 ಕ್ಕೆ ಹೆಚ್ಚಿಸಲಾಗಿದೆ.

ಖಾಸಗಿ ಆಸ್ಪತ್ರೆಯಲ್ಲಿ ಈ ಹಿಂದೆ ಐಸಿಯು ರೂಮ್ ಬಾಡಿಗೆಗೆ ರೂಪಾಯಿ 862 ಪಾವತಿಸಲಾಗಿತ್ತು, ಆದರೆ ಇದೀಗ ಈ ದರವನ್ನು ರೂಪಾಯಿ 5,400 ಕ್ಕೆ ಹೆಚ್ಚಿಸಲಾಗಿದೆ.ಈ ಮೊದಲು ಖಾಸಗಿ ಆಸ್ಪತ್ರೆಯಲ್ಲಿ 1,000 ಜನ ಇದ್ದ ಸಾಮಾನ್ಯ ವಾರ್ಡ್ ಬಾಡಿಗೆಗೆ ಈಗ 1,500 ರೂಪಾಯಿಯನ್ನು ಹೆಚ್ಚಳ ಮಾಡಲಾಗಿದೆ. ಅರೆ ಖಾಸಗಿ ವಾರ್ಡ್ ಅನ್ನು ರೂಪಾಯಿ 2 ಸಾವಿರದಿಂದ ರೂಪಾಯಿ 3 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಖಾಸಗಿ ವಾರ್ಡ್ ಬಾಡಿಗೆಯನ್ನು 3 ಸಾವಿರದಿಂದ 4,500 ರೂಪಾಯಿಗೆ ಹೆಚ್ಚಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಇನ್ನುಮುಂದೆ ಸರ್ಕಾರಿ ನೌಕರರ ಚಿಕಿತ್ಸೆಗೆ ಹಲವು ರಿಯಾಯಿತಿಗಳು ಸಿಗಲಿದೆ. ಅಲ್ಲದೆ ಸಾಕಷ್ಟು ಸೌಲಭ್ಯಗಳು ಸಹ ಸಿಗಲಿದೆ.

Free Treatment Government Employees
Image Source: Prajavani

Join Nadunudi News WhatsApp Group