Promotion Right: ಸರ್ಕಾರೀ ಉದ್ಯೋಗಿಗಳಿಗೆ ಇನ್ಮುಂದೆ ಈ ಬಡ್ತಿ ಇಲ್ಲ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.

ಸರ್ಕಾರೀ ಉದ್ಯೋಗಿಗಳಿಗೆ ಇನ್ಮುಂದೆ ಈ ಬಡ್ತಿ ಇಲ್ಲ

Government Employees Promotion Right: ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ಕಾರೀ ನೌಕರರಿಗೆ 7 ನೇ ವೇತನ ಪರಿಷ್ಕರಣೆಯ ಬಗ್ಗೆ ಚರ್ಚೆ ನಡೆಸುತ್ತಿದೆ. ಕೇಂದ್ರ ಸರ್ಕಾರ 7 ನೇ ವೇತನದಡಿ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದ್ದು, ರಾಜ್ಯ ಸರಕಾರ ಆಯಾಯ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವುದು ಬಾಕಿ ಇದೆ. ಕೆಲ ರಾಜ್ಯದಲ್ಲಿ ಈಗಾಗಲೇ ತುಟ್ಟಿಭತ್ಯೆ ಘೋಷಣೆಯಾಗಿದೆ.

ಇನ್ನು 2024 ರ ಜನವರಿಯಿಂದಲೇ ಸರ್ಕಾರೀ ನೌಕರರು ತುಟ್ಟಿಭತ್ಯೆ ಹೆಚ್ಚಳವನ್ನು ಪಡೆದಿದ್ದಾರೆ. ಸದ್ಯ ತುಟ್ಟಿಭತ್ಯೆಯನ್ನು ಹೆಚ್ಚಿಸಿದ ಸರ್ಕಾರ ಸರ್ಕಾರೀ ಉದ್ಯೋಗಿಗಳ ಬಡ್ತಿ ಹಕ್ಕುಗಳ ಬಗ್ಗೆ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ಮಾನದಂಡ ಬಗ್ಗೆ ಹೈಕೋರ್ಟ್ ಮಹತ್ವದ ತಿರಪನ್ನು ನೀಡಿದೆ.

Government Employees Promotion Right
Image Credit: Trak

ಸರ್ಕಾರೀ ಉದ್ಯೋಗಿಗಳಿಗೆ ಇನ್ಮುಂದೆ ಈ ಬಡ್ತಿ ಇಲ್ಲ
ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿಗೆ ಸಂಬಂಧಿಸಿದಂತೆ ದೇಶದ ಸುಪ್ರೀಂ ಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ. ಸರ್ಕಾರಿ ನೌಕರರ ಬಡ್ತಿಯ ಮಾನದಂಡವನ್ನು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಬಡ್ತಿ ಮಾನದಂಡಗಳನ್ನು ನಿರ್ಧರಿಸಲು ಸರ್ಕಾರ ಮತ್ತು ಕಾರ್ಯಾಂಗವು ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ತಮ್ಮ ತೀರ್ಪಿನಲ್ಲಿ, “ಭಾರತದಲ್ಲಿ ಯಾವುದೇ ಸರ್ಕಾರಿ ನೌಕರನು ಬಡ್ತಿಯನ್ನು ತನ್ನ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕಾಗಿ ಸಂವಿಧಾನದಲ್ಲಿ ಯಾವುದೇ ಮನದನ್ದವನ್ನು ಸೂಚಿಸಲಾಗಿಲ್ಲ” ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಉದ್ಯೋಗದ ಸ್ವರೂಪ ಮತ್ತು ಅಭ್ಯರ್ಥಿಯ ನಿರೀಕ್ಷಿತ ಕೆಲಸದ ಆಧಾರದ ಮೇಲೆ ಬಡ್ತಿ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ವಿಧಾನವನ್ನು ಶಾಸಕಾಂಗ ಅಥವಾ ಕಾರ್ಯಾಂಗವು ನಿರ್ಧರಿಸಬಹುದು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ. ‘ಉತ್ತಮ ಅಭ್ಯರ್ಥಿಗಳನ್ನು’ ಆಯ್ಕೆ ಮಾಡುವುದು ಸೂಕ್ತವೇ ಎಂಬುದನ್ನು ನಿರ್ಧರಿಸಲು ಬಡ್ತಿಗಾಗಿ ಅಳವಡಿಸಿಕೊಂಡಿರುವ ನೀತಿಯನ್ನು ನ್ಯಾಯಾಂಗವು ಪರಿಶೀಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Government Employees Promotion
Image Credit: Informal News

Join Nadunudi News WhatsApp Group

Join Nadunudi News WhatsApp Group