Retirement: ಸರ್ಕಾರೀ ನೌಕರರ ನಿವೃತ್ತಿ ವಯಸ್ಸು ಇಳಿಕೆ, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

ಸರ್ಕಾರೀ ನೌಕರರ ನಿವೃತ್ತಿ ವರ್ಷದಲ್ಲಿ ಇಳಿಕೆ ಮಾಡಲಾಗಿದೆ ಅನ್ನುವ ಸುದ್ದಿಗೆ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನ ನೀಡಿದೆ.

Government Employees Retirement Age: ಇತ್ತೀಚಿಗೆ ಸರ್ಕಾರಿ ನೌಕರರ (Government Employees) ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ. ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸರ್ಕಾರಿ ನೌಕರರ ನಿವೃತ್ತಿಯ (Government Employees Retirement) ವಿಷಯವಾಗಿ ಕೆಲವು ಮಾಹಿತಿಗಳು ವೈರಲ್ ಆಗುತ್ತಿವೆ.

ಮೋದಿ ಸರ್ಕಾರ ನಿವೃತ್ತಿಯ ನಿಯಮಗಳನ್ನು ಬದಲಿಸಿದೆ ಎನ್ನುವ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಸರ್ಕಾರ ಬದಲಿಸಿದ ನಿವೃತ್ತಿಯ ನಿಯಮದ ವೈರಲ್ ಸುದ್ದಿಗಳ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ತಿಳಿಯೋಣ.

Government Employees Retirement Age
Image Source: Zee News

ಸರ್ಕಾರಿ ನೌಕರರ ನಿವೃತ್ತಿಯ ನಿಯಮದಲ್ಲಿ ಬದಲಾವಣೆ
ನರೇಂದ್ರ ಮೋದಿ (Narendra Modi) ಸರ್ಕಾರ ನಿವೃತ್ತಿಯ ನಿಯಮಗಳನ್ನು ಬದಲಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಹೊಸ ನಿಯಮದ ಅಡಿಯಲ್ಲಿ ಸರ್ಕಾರಿ ನೌಕರರು ಎರಡು ರೀತಿಯಲ್ಲಿ ನಿವೃತ್ತರಾಗುತ್ತಾರೆ.

ಒಂದು 60 ವರ್ಷ ವಯಸ್ಸಿನವರು ನಿವೃತ್ತಿ ಹೊಂದುತ್ತಾರೆ ಹಾಗೂ 33 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದವರು ನಿವೃತ್ತಿ ಹೊಂದುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಡಿದ್ದವು. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Government Employees Retirement Age
Image Source: India News

ಸರ್ಕಾರಿ ನೌಕರರ ನಿವೃತ್ತಿಯ ನಿಯಮದಲ್ಲಿ ಆಗುವ ಬದಲಾವಣೆಯ ಬಗ್ಗೆ ಸ್ಪಷ್ಟನೆ
ಮೋದಿ ಸರ್ಕಾರ ನಿವೃತ್ತಿಯ ನಿಯಮಗಳನ್ನು ಬದಲಿಸಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದಂತೆ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಈ ವೈರಲ್ ಸುದ್ದಿಯು ಸಂಪೂರ್ಣವಾಗಿ ನಕಲಿ ಎಂದು ಹೇಳಲಾಗಿದೆ. ನಿವೃತ್ತಿ ಯೋಜನೆಗೆ ಸಂಬಂಧಿಸಿದ ಸುದ್ದಿ ಆಧಾರ ರಹಿತವಾಗಿದೆ.

Join Nadunudi News WhatsApp Group

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿ 2019 ರಲ್ಲಿ ಪ್ರಕಟವಾದ ಸುದ್ದಿಯಾಗಿದೆ. ಹಳೆಯ ಸುದ್ದಿಯ ದಿನಾಂಕವನ್ನು ಬದಲಾಯಿಸಿ ವೈರಲ್ ಮಾಡಲಾಗಿದೆ. ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯನ್ನು ತಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Government Employees Retirement Age
Image Source: India Today

Join Nadunudi News WhatsApp Group