Employees Salary: ಸರ್ಕಾರೀ ನೌಕರರಿಗೆ ಜನವರಿ 31 ಕ್ಕೆ ಬರಲಿದೆ ಭರ್ಜರಿ ಗುಡ್ ನ್ಯೂಸ್, ಸಂಬಳದಲ್ಲಿ ಇಷ್ಟು ಹೆಚ್ಚಳ.

ಫೆಬ್ರವರಿಯಲ್ಲಿ ಸರ್ಕಾರೀ ನೌಕರರ ತುಟ್ಟಿಭತ್ಯೆ ಮತ್ತೆ ಹೆಚ್ಚಳ ಆಗಲಿದೆ

Govt Employees Salary Hike In January: ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು 2024 ರ ಬಜೆಟ್ ಘೋಷಣೆ ಮಾಡಲಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಸಾಕಷ್ಟು ಘೋಷಣೆ ಮಾಡುವ ಬಗ್ಗೆ ಯೋಜನೆ ಹಾಕಿನೊಂದಿದೆ.

ತೆರಿಗೆ ವಿನಾಯಿತಿ, ಪಿಎಂ ಕಿಸಾನ್ ಯೋಜನೆಯ ಹಣ ಹೆಚ್ಚಳ ಸೇರಿದಂತೆ ಸರ್ಕಾರೀ ನೌಕರರ ವೇತನ ಹೆಚ್ಚಳದ ಬಗ್ಗೆ ಮಹತ್ವದ ಘೋಷಣೆ ಹೊರಬೀಳಲಿದೆ. ಸದ್ಯ ಬಜೆಟ್ ಘೋಷಣೆಗೂ ಮುನ್ನವೇ ಸರ್ಕಾರೀ ನೌಕರರ ವೇತನದ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಸರ್ಕಾರೀ ನೌಕರರು ತಿಂಗಳ ಅಂತ್ಯದೊಳಗೆಯೇ ಹೆಚ್ಚಿನ ವೇತನವನ್ನು ಪಡೆಯಲಿದ್ದಾರೆ.

Govt Employees Gratuity Rules
Image Credit: Economictimes

ಸರ್ಕಾರೀ ನೌಕರರಿಗೆ ಜನವರಿ 31 ಕ್ಕೆ ಬರಲಿದೆ ಭರ್ಜರಿ ಗುಡ್ ನ್ಯೂಸ್
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.

ಸದ್ಯ 7 ನೇ ವೇತನದ ಅಡಿಯಲ್ಲಿ ನೌಕರರ ವೇತನ ಹೆಚ್ಚಳದ ಜನವರಿ 30 ರೊಳಗೆ ಘೋಷಣೆ ಮಾಡಲಾಗುತ್ತದೆ. December AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಇನ್ನು ನೌಕರ DA ಹೆಚ್ಚಳದ ಜೊತೆಗೆ ಜನವರಿಯಲ್ಲಿ TA ಹಾಗೂ HRA ಕೊಡ ಹೆಚ್ಚಾಗುವ ಸಾಧ್ಯತೆ ಇದೆ.

Central Govt Employees DA Hike 2024
Image Credit: Informal News

ಸಂಬಳದಲ್ಲಿ ಇಷ್ಟು ಹೆಚ್ಚಳ
ಪ್ರಸ್ತುತ, ಪೇ-ಬ್ಯಾಂಡ್ ಹಂತ-1 ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.18,000 ಆದರೆ, ಅದೇ ಲೆಕ್ಕಾಚಾರದಲ್ಲಿ ಶೇ.50 ರಷ್ಟು ಭತ್ಯೆ ಲೆಕ್ಕ ಹಾಕಿದಾಗ 1000 ರೂ. ಆಗುತ್ತದೆ. ಇನ್ನು ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದ ನಂತರ, ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಮತ್ತು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ 18,000 ರೂಪಾಯಿ ಮೂಲ ವೇತನಕ್ಕೆ 50 % DA ಆಧಾರದಲ್ಲಿ ನೌಕರರು 9,000 ರೂ. ಹಣವನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.

Join Nadunudi News WhatsApp Group

Join Nadunudi News WhatsApp Group