WhatsApp Service: ಇನ್ಮುಂದೆ ಈ ಎಲ್ಲಾ ಸರ್ಕಾರೀ ಸೇವೆಗಳು ವಾಟ್ಸಾಪ್ ನಲ್ಲಿ ಲಭ್ಯ, ಸರ್ಕಾರದಿಂದ ವಾಟ್ಸಾಪ್ ಸೇವೆ ಆರಂಭ.

ಇನ್ಮುಂದೆ ಈ ಸರ್ಕಾರೀ ಸೇವೆಗಳು ವಾಟ್ಸಾಪ್ ನಲ್ಲಿ ಜನರಿಗೆ ಲಭ್ಯ

Govt Services Are Available In WhatsApp: ರಾಜ್ಯ ಸರ್ಕಾರವು ಜನತೆಗಾಗಿ ಆಗಾಗ ವಿಶೇಷ ಯೋಜನೆಗಳನ್ನು ಪರಿಚಯಿಸುತ್ತ ಇರುತ್ತದೆ. ಯೋಜನೆಯ ಲಾಭವನ್ನು ಎಲ್ಲರು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ವಿವಿಧ ಸೌಲಭ್ಯವನ್ನು ನೀಡುತ್ತಿರುತ್ತದೆ. ಇನ್ನು ಯೋಜನೆಗಳ ಲಾಭವನ್ನು ಪಡೆಯಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನತೆಗೆ ಕಷ್ಟವಾಗುತ್ತದೆ. ಗ್ರಾಮದ ಆಯಾ ಗ್ರಾಮ ಪಂಚಾಯತ್ ಗಳಲ್ಲಿ ಯೋಜನೆಗಳ ಬಗ್ಗೆ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಯೋಜನೆಗಳ ಲಾಭವನ್ನು ಪಡೆಯಲು ಗ್ರಾಮ ಪಂಚಾಯತ್ ಗಳು ಸೇವೆಯನ್ನು ನೀಡುತ್ತದೆ. ಜನರು ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯತ್ ಗೆ ಅಲೆದಾಡಬೇಕಾಗುತ್ತದೆ. ಆದರೆ ಇನ್ನುಮುಂದೆ ನೀವು ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮ ಪಂಚಾಯತ್ ಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಏಕೆಂದರೆ ಈ ಜನಪ್ರಿಯ ಅಪ್ಲಿಕೇಶನ್ ನ ಮೂಲಕ ಜನರು ಗ್ರಾಮ ಪಂಚಾಯತ್ ಸೇವೆಯನ್ನು ಪಡೆದುಕೊಳ್ಳಬಹುದು.

Whatsapp New Service
Image Credit: Whatsapp

ಇನ್ಮುಂದೆ ಈ ಎಲ್ಲಾ ಸರ್ಕಾರೀ ಸೇವೆಗಳು ವಾಟ್ಸಾಪ್ ನಲ್ಲಿ ಲಭ್ಯ
ಇನ್ನು ರಾಜ್ಯ ಸರ್ಕಾರ ಜನತೆಗೆ ಗ್ರಾಮ ಪಂಚಾಯತ್ ಗಳಲ್ಲಿ ಆಗುವ ಕೆಲಸಗಳನ್ನು ಸರಳಗೊಳಿಸಲು ಮಹತ್ವವಾದ ನಿರ್ಧಾರವನ್ನು ಕೈಗೊಂಡಿದೆ. ಹೌದು ಇನ್ನುಮುಂದೆ ನೀವು ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಗ್ರಾಮ ಪಂಚಾಯತ್ ಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಬದಲಾಗಿ ಆನ್ಲೈನ್ ಮೂಲಕ ಮನೆಯಲ್ಲಿ ಕುಳಿತು WhatsApp ನ ಮೂಲಕ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬಹುದು.

ಇನ್ನುಮುಂದೆ ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಗಳಲ್ಲಿ ಸಿಗುವ ಸೌಲಭ್ಯವನ್ನು WhatsApp ನ ಮೂಲಕ ಪಡೆಯಲು ಸರ್ಕಾರ ಅವಕಾಶವನ್ನು ನೀಡಿದೆ. ಗ್ರಾಮ ಸೇವೆಗಳಿಗಾಗಿ Online ನಲ್ಲಿ ಅರ್ಜಿ ಸಲ್ಲಿಕೆ, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಗಳ ಪರಿಶೀಲನೆ, ಗ್ರಾಮ ಪಂಚಾಯತ್ ಮಟ್ಟದ ಎಲ್ಲ ಕುಂದುಕೊರತೆಗಳನ್ನು ದಾಖಲಿಸಿ WhatsApp ಚಾಟ್ ನ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಸರ್ಕಾರದಿಂದ ವಾಟ್ಸಾಪ್ ಸೇವೆ ಆರಂಭ
ಗ್ರಾಮ ಪಂಚಾಯತ್ ಗಳಲ್ಲಿ ಸಿಗುವ ಸೌಲಭ್ಯವನ್ನು WhatsApp ನ ಮೂಲಕ ನೀಡಲು ಗ್ರಾಮೀಣ ಹಾಗೂ ಪಂಚಾಯತ್ ರಾಜ್ ವತಿಯಿಂದ ಮಹತ್ವದ “ಪಂಚತಂತ್ರ” ವಾಟ್ಸಾಪ್ ನಂಬರ್ 8277506000 ಸಂಖ್ಯೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಜನಸಾಮಾನ್ಯರು ಈ WhatsApp ಸಂಖ್ಯೆಯ ಮೂಲಕ ಸೇವೆಯನ್ನು ಪಡೆದುಕೊಳ್ಳಬಹುದು. ಈ ಹೊಸ ಸೌಲಭ್ಯದ ಬಗ್ಗೆ ಪ್ರಿಯಾಂಕಾ ಖರ್ಗೆ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Govt Services Are Available In WhatsApp
Image Credit: Jagran

ವಾಟ್ಸಾಪ್ ನಲ್ಲಿ ಸೇವೆಗಳನ್ನು ಪಡೆಯುವುದು ಹೇಗೆ…?
•ನಿಮ್ಮ ಮೊಬೈಲ್ ನಲ್ಲಿ ನಂಬರ್ ಸೇವ್ ಮಾಡಿಕೊಂಡು Hi ಸಂದೇಶದ ಮೂಲಕ ಚಾಟ್ ಆರಂಭಿಸಬೇಕು.

•ಭಾಷೆಯ ಆಯ್ಕೆ, ಹೆಸರು, ವಿಳಾಸ, ಮೊಬೈಲ್ ನಂಬರ್ ಮಾಹಿತಿ ನೀಡಿ ಲಾಗಿನ್ ಆಗಬೇಕು.

•ಬಳಿಕ ಆಯ್ಕೆಗಳು ಆರಂಭವಾಗುತ್ತದೆ.

•ಕ್ರಮ ಸಂಖ್ಯೆಗಳನ್ನು ನಮೂದಿಸುವ ಮೂಲಕ ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯತಿ ಆಯ್ಕೆ ಮಾಡಿ , ನಿಮಗೆ ಬೇಕಾಗಿರುವ ಸೌಲಭ್ಯದ ಬಗ್ಗೆ ಮಾಹಿತಿ ಕೇಳಿದರೆ ವಾಟ್ಸಾಪ್ ನಲ್ಲಿ ಆ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group