Basic Salary Hike: ಜನವರಿ 1 ರಿಂದ ಸರ್ಕಾರೀ ನೌಕರರ ಸಂಬಳದಲ್ಲಿ ಹೆಚ್ಚಳ, ಸಂಬಳ 27000 ರೂಪಾಯಿ ಏರಿಕೆ

ಜನವರಿ 1 ರಿಂದ ಸರ್ಕಾರೀ ನೌಕರರ ಸಂಬಳ 27000 ರೂಪಾಯಿಗೆ ಏರಿಕೆ.

Govt Employees Basic Salary Hike: ಸದ್ಯ ಸರಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದಲ್ಲೇ ಸರ್ಕಾರೀ ನೌಕರರಿಗೆ ಹೊಸ ತುಟ್ಟಿಭತ್ಯೆ ಅನ್ವಯವಾಗುವ ಬಗ್ಗೆ ಸರ್ಕಾರ ಘೋಷಣೆ ಹೊರಡಿಸಿದೆ.

ಸದ್ಯ 7 ನೇ ವೇತನ ಆಯೋಗದ ಅಂತಿಮ ವರದಿ ಆಧರಿಸಿ ಒಟ್ಟಾರೆ ಡಿಎ 50% ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ತುಟ್ಟಿಭತ್ಯೆ ಹೆಚ್ಚಳದ ಕಾರಣ ನೌಕರರ ಸಂಬಳ ಎಷ್ಟು ಹೆಚ್ಚಾಗಿದೆ..? ಎನ್ನುವುದು ಸರ್ಕಾರೀ ನೌಕರರ ಸದ್ಯದ ಪ್ರಶ್ನೆಯಾಗಿದೆ.

Govt Employees Basic Salary Hike
Image Credit: Informal News

ಜನವರಿ 1 ರಿಂದ ಸರ್ಕಾರೀ ನೌಕರರ ಸಂಬಳದಲ್ಲಿ ಹೆಚ್ಚಳ
ಜನವರಿ 2024 ರಲ್ಲಿ ತುಟ್ಟಿಭತ್ಯೆ 4% ಹೆಚ್ಚಿಸಿದರೆ ತುಟ್ಟಿಭತ್ಯೆ 50% ತಲುಪುತ್ತದೆ. ಏಳನೇ ವೇತನ ಆಯೋಗವನ್ನು ಸ್ಥಾಪಿಸುವಾಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಣೆ ನಿಯಮಗಳನ್ನು ರೂಪಿಸಿದೆ. ಇನ್ನು ರೂಪಿಸಲಾದ ನಿಯಮದಲ್ಲಿ DA 50 % ತಲುಪಿದ ನಂತರ ಅದನ್ನು ಶೂನ್ಯಕ್ಕೆ ಪರಿವರ್ತಿಸಲಾಗುತ್ತದೆ ಮತ್ತು DA ಮೊತ್ತವನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿತ್ತು.

ಸದ್ಯ 7 ನೇ ವೇತನದ ಅಡಿಯಲ್ಲಿ ನೌಕಾರರ ವೇತನದ ಎಷ್ಟು ಹೆಚ್ಚಾಗುತ್ತದೆ ಎನ್ನುವುದರ ಲೆಕ್ಕಾಚಾರ ನೋಡೋಣ. AICPI ಇಂಡೆಕ್ಸ್‌ ನ ಅರ್ಧ ವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ನೌಕರರ ವೇತನ ಶ್ರೇಣಿಯನ್ನು ಕೇಂದ್ರ ಸರ್ಕಾರ ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸುತ್ತದೆ. ಈ ಪರಿಷ್ಕರಣೆಯನ್ನು ಜನವರಿ ಮತ್ತು ಜುಲೈ ನಲ್ಲಿ ನೆಡೆಸಲಾಗುತ್ತದೆ.

Basic Salary Hike
Image Credit: Krishi Jagran

ಸಂಬಳ 27,000 ರೂಪಾಯಿ ಏರಿಕೆ
CPI -IW ದತ್ತಾಂಶದ ಆಧಾರದ ಮೇಲೆ ಕೇಂದ್ರ ಉದ್ಯೋಗಿಗಳಿಗೆ DA ಅನ್ನು ಪರಿಷ್ಕರಿಸಲಾಗುತ್ತದೆ. ಇನ್ನು ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ January ಯಲ್ಲಿ 46% ತಲುಪಲಿದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ನೌಕರರ ಮೂಲ ವೇತನದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ.

Join Nadunudi News WhatsApp Group

ಪ್ರಸ್ತುತ, ಪೇ-ಬ್ಯಾಂಡ್ ಹಂತ-1 ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.18,000 ಆದರೆ, ಅದೇ ಲೆಕ್ಕಾಚಾರದಲ್ಲಿ ಶೇ.50 ರಷ್ಟು ಭತ್ಯೆ ಲೆಕ್ಕ ಹಾಕಿದಾಗ 1000 ರೂ. ಆಗುತ್ತದೆ. ಇನ್ನು ತುಟ್ಟಿಭತ್ಯೆ 50 ಪ್ರತಿಶತವನ್ನು ತಲುಪಿದ ನಂತರ, ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಮತ್ತು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ 18,000 ರೂಪಾಯಿ ಮೂಲ ವೇತನಕ್ಕೆ 9,000 ಸೇರಿದಾಗ ಅದು 27,000 ರೂಪಾಯಿಗೆ ಹೆಚ್ಚುತ್ತದೆ. ಈ ಹೆಚ್ಚಳದ ನಂತರ ಸರ್ಕಾರೀ ನೌಕರರು 27 ಸಾವಿರ ಹೆಚ್ಚುವರಿ ಮೂಲ ವೇತನವನ್ನು ಪಡೆಯಲಿದ್ದಾರೆ.

Join Nadunudi News WhatsApp Group