Salary Date: ಪ್ರತಿ ತಿಂಗಳು ಸಂಬಳ ಪಡೆಯುವ ಸರ್ಕಾರೀ ನೌಕರರಿಗೆ ಬಿಗ್ ಅಪ್ಡೇಟ್, ನಿಯಮದಲ್ಲಿ ಬದಲಾವಣೆ

ಕೇಂದ್ರ ನೌಕರರಿಗೆ ಗುಡ್ ನ್ಯೂಸ್, ನೌಕರರು ಒಂದು ದಿನ ಮುಂಚಿತವಾಗಿ ವೇತನ ಪಡೆಯಬಹುದು.

Govt Employees Salary Date Update: ಪ್ರಸ್ತುತ ದೇಶದಲ್ಲಿ ಸರ್ಕಾರೀ ನೌಕರರ ಬಹುನಿರೀಕ್ಷಿತ ತುಟ್ಟಿಭತ್ಯೆ ಹೆಚ್ಚಳ ಜಾರಿಯಾಗಿದೆ. 2024 ರಲ್ಲಿ ತುಟ್ಟಿಬತ್ಯೆ ಶೇ. 4 ರಷ್ಟು ಹೆಚ್ಚಳವಾಗಿದ್ದು, ಸರ್ಕಾರೀ ನೌಕರರು ವೇತನ ಹೆಚ್ಚಳದ ಖುಷಿಯಲ್ಲಿದ್ದಾರೆ. ಸದ್ಯ ಸರ್ಕಾರೀ ನೌಕರರಿಗೆ ವೇತನ ಹೆಚ್ಚಳದ ಜೊತೆಗೆ ಇನ್ನೊಂದು ಖುಷಿಯ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೇಂದ್ರ ನೌಕರರಿಗೆ ಮಾಹಿತಿ ನೀಡಿದೆ. ವೇತನ ಹೆಚ್ಚಳದ ಖುಷಿಯಲ್ಲಿದ್ದವರಿಗೆ ಸರ್ಕಾರ ಯಾವ ರೀತಿಯ ಸಿಹಿ ಸುದ್ದಿ ನೀಡಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Govt Employees Salary
Image Credit: Informalnewz

ಕೇಂದ್ರ ನೌಕರರಿಗೆ ಗುಡ್ ನ್ಯೂಸ್
ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದ್ದು, ವೇತನ ಹೆಚ್ಚಳದ ಜೊತೆಗೆ ಒಂದು ದಿನ ಮುಂಚಿತವಾಗಿಯೇ ವೇತನ ಸಿಗಲಿದೆ. ಮುಂದಿನ ತಿಂಗಳಿನಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದ್ದು, ಮಾರ್ಚ್ 30 ರಂದು ಒಂದು ದಿನ ಮುಂಚಿತವಾಗಿಯೇ ವೇತನ ಸಿಗಲಿದೆ.

ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ತುಟ್ಟಿಭಹತ್ಯೆ (DA ) ಪ್ರತಿ ತಿಂಗಳು ಲೇಬರ್ ಬ್ಯುರೋ ಹೊರತಂದಿರುವ ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಕೆಲಸ ಮಾಡಲಾಗುತ್ತದೆ. ಹೀಗಾಗಿ 7 Ne ಕೇಂದ್ರ ವೇತನ ಆಯೋಗದ ಷರ್ರಸ್ಸುಗಳ ಆಧಾರದ ಮೇಲೆ DA ಹೆಚ್ಚಳವು ನಿಯಮದ ಪ್ರಕಾರ ಇರುತ್ತದೆ.

Govt Employees Salary Hike News
Image Credit: Hellobanker

ನೌಕರರು ಒಂದು ದಿನ ಮುಂಚಿತವಾಗಿ ವೇತನ ಪಡೆಯಬಹುದು
ಈ ಹಿಂದೆ ಕೇಂದ್ರ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿತ್ತು. ಈ ಹೆಚ್ಚಳವು ಜನವರಿ 2024 ರಿಂದ ಜಾರಿಗೆ ಬರಲಿದ್ದು, ಭತ್ಯೆಯನ್ನು ಶೇಕಡಾ 46 ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ಪರಿಣಾಮವಾಗಿ, ಉದ್ಯೋಗಿಗಳು ಜನವರಿ ಮತ್ತು ಫೆಬ್ರವರಿ ಬಾಕಿಗಳಿಗೆ ಅರ್ಹರಾಗಿರುತ್ತಾರೆ.

ತುಟ್ಟಿಭತ್ಯೆಯನ್ನು ಶೇಕಡಾ 50 ರಷ್ಟು ಹೆಚ್ಚಿಸಲಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಮನೆ ಬಾಡಿಗೆ ಭತ್ಯೆ (HRA) ನಲ್ಲಿ ಹೆಚ್ಚಳವಾಗಿದೆ.ನಗರದ ವರ್ಗೀಕರಣವನ್ನು ಅವಲಂಬಿಸಿ ನೌಕರರು 30 ಪ್ರತಿಶತದವರೆಗೆ ಮನೆ ಬಾಡಿಗೆ ಭತ್ಯೆಯನ್ನು ಪಡೆಯುತ್ತಾರೆ. ಡಿಎ ಹೆಚ್ಚಳವು ಕೇಂದ್ರ ಉದ್ಯೋಗಿಗಳಿಗೆ ವಿವಿಧ ವಿಶೇಷ ಭತ್ಯೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.

Join Nadunudi News WhatsApp Group

ಇವುಗಳಲ್ಲಿ ಶಿಶುಪಾಲನಾ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ, ಹಾಸ್ಟೆಲ್ ಸಬ್ಸಿಡಿ, ವರ್ಗಾವಣೆಯ ಮೇಲೆ ಪ್ರಯಾಣ ಭತ್ಯೆ, ಉಡುಗೆ ಭತ್ಯೆ, ಗ್ರಾಚ್ಯುಟಿ ಸೀಲಿಂಗ್ ಮತ್ತು ಮೈಲೇಜ್ ಭತ್ಯೆ ಸೇರಿವೆ. ಆದಾಗ್ಯೂ, ನೌಕರರು ಈ ಭತ್ಯೆಗಳಿಗೆ ಅನುಗುಣವಾಗಿ ಕ್ಲೈಮ್ ಮಾಡಬೇಕು. ಇನ್ನು ವೇತನ ಹೆಚ್ಚಳದ ಖುಷಿಯಲ್ಲಿರುವ ನೌಕರರಾಉ ಈ ತಿಂಗಳಿನಲ್ಲಿ ಒಂದು ದಿನ ಮುಂಚಿತವಾಗಿ ವೇತನವನ್ನು ಪಡೆಯಲಿದ್ದಾರೆ.

Employees Salary Latest Update
Image Credit: The Statesman

Join Nadunudi News WhatsApp Group