Govt Scheme 2024: ಪುರುಷರಿಗೂ ಸಿಗುತ್ತಾ 2000 ರೂ? ಊಹಿಸದ ಟ್ವಿಸ್ಟ್ ಇಲ್ಲಿದೆ, ಇನ್ನೊಂದು ಗ್ಯಾರೆಂಟಿ ಯೋಜನೆ.

ಪುರುಷರಿಗಾಗಿ ಸರ್ಕಾರದ ಇನ್ನೊಂದು ಗ್ಯಾರೆಂಟಿ ಯೋಜನೆ.

Govt Scheme For Men’s: ರಾಜ್ಯದಲ್ಲಿ Congress ಸರ್ಕಾರ ವಿಧಾನಸಭಾ ಚುನಾವಣಾ ಸಮಯದಲ್ಲಿ ಐದು ಉಚಿತ ಗ್ಯಾರಂಟಿ ಯೋಜನೆಯನ್ನು ಘೋಷಿಸಿತ್ತು. ಗೃಹ ಲಕ್ಷ್ಮಿ, ಗೃಹ ಜ್ಯೋತಿ(Gruha Jyothi Scheme Karnataka)
, ಶಕ್ತಿ ಯೋಜನೆ, ಅನ್ನ ಭಾಗ್ಯ, ಯುವ ನಿಧಿ ಯೋಜನೆಗಳು ಕಾಂಗ್ರೆಸ್ ನ ಉಚಿತ ಐದು ಗ್ಯಾರಂಟಿ ಯೋಜನೆಗಳಾಗಿವೆ.

ಈಗಾಗಲೇ ರಾಜ್ಯ ಸರ್ಕಾರ  ಈ ಐದು ಗ್ಯಾರಂಟಿ ಯೋಜನೆಗಳನ್ನು  ಅನುಷ್ಠಾನಗೊಳಿಸಿದೆ. ಇನ್ನು ನಿಮಗೆ ತಿಳಿದಿರುವ ಹಾಗೆ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಹೆಚ್ಚಾಗಿ ಮಹಿಳೆಯಾರಿಗೆ ಅನುಕೂಲವನ್ನು ಮಾಡಿಕೊಟ್ಟಿದೆ.

Govt Scheme For Men's
Image Credit: The South First

ಪುರುಷರಿಗಾಗಿ ಸರ್ಕಾರದ ಇನ್ನೊಂದು ಗ್ಯಾರೆಂಟಿ ಯೋಜನೆ
ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಉದ್ದೇಶದಿಂದ ಐದು ಯೋಜನೆಗಳಲ್ಲಿ ಎಲ್ಲವು ಕೂಡ ಮಹಿಳೆಯರಿಗೆ ಹೆಚ್ಚು ಲಾಬಹ್ವನು ನೀಡುತ್ತಿದೆ. ಇನ್ನು ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಯೋಜನೆಯ ಲಾಭವನ್ನು ಮಹಿಳೆಯರು ನೇರವಾಗಿ ಪಡೆಯುತ್ತಿದ್ದರೆ. ಇನ್ನುಳಿದ ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಯ ಲಾಭ ಪಡೆಯುವದರಲ್ಲಿಯೂ ಮಹಿಳೆರ ಪಾಲು ಸಾಕಷ್ಟಿದೆ.

ಇನ್ನು ಸರಳವಾಗಿ ಹೇಳುವುದಾದರೆ, ರಾಜ್ಯ ಸರ್ಕಾರ ಪುರುಷರಿಗಾಗಿ ಪ್ರತ್ಯೇಕ ಯಾವುದೇ ಯೋಜನೆನ್ನು ಕೂಡ ಪರಿಚಯಿಸಿಲ್ಲ. ಯೋಜನೆಯ ಘೋಷಣೆಯ ಸಮಯದಲ್ಲಿ ಈ ಬಗ್ಗೆ ಸರ್ಕಾರಕ್ಕೆ ಮೇಲಿಂದ ಮೇಲೆ ಪ್ರಶ್ನೆ ಮಾಡಲಾಗಿತ್ತು. ಆದರೆ ಸರ್ಕಾರ ಪುರುಷರಿಗಾಗಿ ಪ್ರತ್ಯೇಕವಾಗಿ ಯಾವುದೇ ಯೋಜನೆಯನ್ನು ಘೋಷಿಸಿಲ್ಲ. ಆದರೆ ಇದೀಗ ರಾಜ್ಯದಲ್ಲಿ ಪುರುಷರಿಗಾಗಿ ಹೊಸ ಯೋಜನೆ ಜಾರಿಯಾಗಲಿದೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಸರ್ಕಾರ ಪುರುಷರಿಗಾಗಿ ಯಾವ ಯೋಜನೆಯನ್ನು ಜಾರಿ ಮಾಡಲಿದೆ..? ಯೋಜನೆಯಡಿ ಏನು ಪ್ರಯೋಜನವಿದೆ ಎನ್ನುವ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.

2000 RS For Men's
Image Credit: Karnataka Times

ಪುರುಷರಿಗೂ ಸಿಗುತ್ತಾ 2000 ರೂಪಾಯಿ
ರಾಜ್ಯ ಸರ್ಕಾರ ಪರಿಚಯಿಸುವ ಎಲ್ಲ ಯೋಜನೆಗಳು ಬಹುತೇಕ ಮಹಿಳೆರಿಗೆ ಲಭ್ಯವಾಗುತ್ತಿರುವ ಕಾರಣ ಪುರುಷರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಪುರುಷರಿಗಾಗಿ ಯಾವುದಾದರು ಯೋಜನೆನ್ನು ಜಾರಿಗೊಳಿಸಿ ಎಂದು ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ.

Join Nadunudi News WhatsApp Group

ಇನ್ನು ಹರಿಯಾಣದಲ್ಲಿ ಉಚಿತ ಬಸ್ ಪ್ರಯಾಣ ಆರಂಭವಾಗಿದ್ದು, ಮಹಿಳೆಯರ ಜೊತೆಗೆ ಪುರುಷರು ಕೂಡ ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ. ಹೀಗಾಗಿ  ಕರ್ನಾಟಕದಲ್ಲಿ ಪುರುಷರಿಗಾಗಿ ಬಸ್ ಪ್ರಯಾಣ ದರದಲ್ಲಿ ಕಡಿತ  ಅಥವಾ ನೂತನ ಯೋಜನೆಯಡಿ 2000 ರೂ. ನೀಡಲು ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿದೆ. ಸದ್ಯದಲ್ಲೇ ನೂತನ ಯೋಜನೆಯ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರ ಕುರಿತು ಇನ್ನೂ ಕೂಡ ಸರ್ಕಾರ ಸ್ಪಷ್ಟನೆ ನೀಡಿಲ್ಲ.

Join Nadunudi News WhatsApp Group