PUC And SSLC: SSLC, PUC ವಿದ್ಯಾರ್ಥಿಗಳಿಗೆ ಸಿಗಲಿದೆ ಗ್ರೇಸ್ ಮಾರ್ಕ್ಸ್, ಷರತ್ತುಗಳು ಅನ್ವಯ.

SSLC ಮಕ್ಕಳ ಜೊತೆಗೆ PUC ವಿದ್ಯಾರ್ಥಿಗಳಿಗೆ ಕೂಡ ಸಿಗಲಿದೆ ಗ್ರೇಸ್ ಮಾರ್ಕ್ಸ್.

SSLC Nd PUC Exam Grace Marks: ಈ ಬಾರಿಯ ಶಿಕ್ಷಣ ನೀತಿಯಲ್ಲಿ ಬಾರಿ ಬದಲಾವಣೆಯನ್ನು ತರಲು ಶಿಕ್ಷಣ ಇಲಾಖೆ ಯೋಜನೆ ಹೂಡುತ್ತಿದೆ. ಇನ್ನು ಪ್ರಸ್ತುತ 2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಎಸ್ ಎಸ್ ಎಲ್ ಸಿ (SSLC)  ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡುತ್ತಿದೆ. ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಗ್ರೆಸ್ಸ್ ಮಾರ್ಕ್ಸ್ ನೀಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

Along with SSLC students, PUC students will also get grace marks.
Image Credit: indianexpress

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಈ ಹಿಂದಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕರೋನ ಇದ್ದ ಕಾರಣ ಗ್ರೆಸ್ಸ್ ಮಾರ್ಕ್ಸ್ ಗಳನ್ನು ನೀಡಲಾಗಿತ್ತು.

ಈ ನಿಟ್ಟಿನಲ್ಲಿ ಈ ಬಾರಿಯೂ ಕೂಡ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗ್ರೆಸ್ಸ್ ಮಾರ್ಕ್ಸ್ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಈ ಬಗ್ಗೆ ಎಸ್ ಎಸ್ ಎಲ್ ಸಿ ಬೋರ್ಡ್ ನಿರ್ದೇಶಕ ರಾಮಚಂದ್ರ ಅವರು ಮಾಹಿತಿ ನೀಡಿದ್ದಾರೆ.

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ಶೇ. 10 ಗ್ರೆಸ್ಸ್ ಮಾರ್ಕ್ಸ್
ಈ ಬಾರಿ ಪರೀಕ್ಷೆ ಬರೆಯುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳನ್ನು ಕೂಡ ಕರೋನ ಬ್ಯಾಚ್ ಎಂದು ಪರಿಗಣಿಸಿ ಶೇ. 10 ರಷ್ಟು ಗ್ರೇಸ್ ಮಾರ್ಕ್ಸ್ ನೀಡುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

Join Nadunudi News WhatsApp Group

The education department has issued an order that 5 grace marks should be given to the students who appeared in the PUC examination.
Image Credit: hindustantimes

ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. 6 ವಿಷಯಗಳಲ್ಲಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ , ಉಳಿದ 3 ವಿಷಯಗಳಿಗೆ ಶೇ. 10 ರಷ್ಟು ಅಂದರೆ 26 ಅಂಕಗಳನ್ನು ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ 10 ಅಂಕ ಮತ್ತು ಉಳಿದ ವಿಷಯಗಳಲ್ಲಿ ಗರಿಷ್ಟ 8 ಅಂಕವನ್ನು ಪಡೆಯಬಹುದು.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ ಶೇ. 5 ಗ್ರೆಸ್ಸ್ ಮಾರ್ಕ್ಸ್
ಇನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 5 ಗ್ರೇಸ್ ಮಾರ್ಕ್ಸ್ ಸಿಗಲಿದೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳಿಗೆ 210 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗೆ, ಎರಡು ವಿಷಯಗಳಿಗೆ ಶೇ.5 ರಷ್ಟು ಅಂಕಗಳನ್ನು ನೀಡಲಾಗುತ್ತದೆ.

Join Nadunudi News WhatsApp Group