Gram One: ಗ್ರಾಮ ಒನ್ ಕೇಂದ್ರ ತೆರೆಯಲು Online ಅರ್ಜಿ ಸಲ್ಲಿಸವುದು ಹೇಗೆ…? ಬೇಕಾಗಿರುವ ದಾಖಲೆಗಳು ಏನು

ಗ್ರಾಮ ಒನ್ ಕೇಂದ್ರ ತೆರೆಯಲು ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ

Gram One Franchise Application: ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಸೌಲಭ್ಯವನ್ನು ಪರಿಚಯಿಸುತ್ತ ಇರುತ್ತದೆ. ಇನ್ನು ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗವನ್ನು ಮಾಡಲು ಕೂಡ ವಿವಿಧ ಯೋಜನೆಯನ್ನು ಪರಿಚಯಿಸುತ್ತಿರುತ್ತದೆ. ಸದ್ಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಸರ್ಕಾರ ಅವಕಾಶವನ್ನು ನೀಡಿದೆ.

ಪ್ರತಿ ಗ್ರಾಮಗಳಲ್ಲಿಯೂ ಒಂದಾದರು ಗ್ರಾಮ ಒನ್ ಕೇಂದ್ರ ಇದ್ದೆ ಇರುತ್ತದೆ. ಗ್ರಾಮ ಒನ್ ಎನ್ನುವುದು G2C ಸೇವೆಗಳು, ಬ್ಯಾಂಕಿಂಗ್ ಸೇವೆಗಳು, RTI ಪ್ರಶ್ನೆಗಳು ಇತ್ಯಾದಿಗಳ ವಿತರಣೆಯನ್ನು ಒಳಗೊಂಡಿರುವ ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಏಕ ಸಹಾಯಕ ಕೇಂದ್ರ ವ್ಯವಸ್ಥೆ ಆಗಿದೆ. ವರದ ಏಳು ದಿನಗಳು ಕೂಡ ಗ್ರಾಂ ಒನ್ ಕೇಂದ್ರ ತೆರೆದಿರುತ್ತದೆ. ಇದೀಗ ಗ್ರಾಮ ಒನ್ ಕೇಂದ್ರಗಳಿಗೆ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

Gram One Franchise Application
Image Credit: Government Jobs In Karnataka

ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ನೀವು ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದರೆ ಈ ಗ್ರಾಮ ಒನ್ ಕೇಂದ್ರವನ್ನು ತೆರೆಯುವ ಮೂಲಕ ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು. ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಗ್ರಾಮ ಒನ್ ಕೇಂದ್ರ ತೆರೆಯಲು ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ
ಮಡಿಕೇರಿಯ ಹೊಸ್ಕೇರಿ, ಕರಿಕೆ, ಅಯ್ಯಂಗೇರಿ, ಕುಶಾಲನಗರ ತಾಲೂಕಿನ ಕೂಡುಮಂಗಳೂರು, ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು, ಕೆ.ಬಡಗ, ಬಿ.ಶೆಟ್ಟಿಗೇರಿ, ಕಿರುಗೂರು, ನಾಲ್ಕೇರಿ, ಶ್ರೀಮಂಗಲ, ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ, ಗರ್ವಾಲೆ, ಹಾನಗಲ್ಲು, ವಿರಾಜಪೇಟೆ ತಾಲೂಕಿನ ಬೇಟೋಳಿ, ಅಮ್ಮತ್ತಿ, ಮಾಲ್ದಾರೆ, ಹೊಸೂರು, ಆರ್ಜಿ ಮತ್ತು ಚನ್ನಯ್ಯಕೋಟೆ ಫ್ರಾಂಚೈಸಿಗಳಿಂದ ಆರ್ಜಿ ಅಹ್ವಾನ ಮಾಡಲಾಗಿದೆ.

Gram One Franchise List
Image Credit: Kannada News

ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಫ್ರಾಂಚೈಸಿಗಳು https://kal-mys.gramaone.karnataka.gov.in/ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 15 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 9148712473 ಅಥವಾ care@blsinternational.net ಇಮೇಲ್ ಐಡಿ ಅನ್ನು ಸಂಪರ್ಕಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group