Grama One: ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ.

ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ

Grama One Franchise: ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗಾಗಿ ವಿವಿಧ ಸೌಲಭ್ಯವನ್ನು ಪರಿಚಯಿಸುತ್ತ ಇರುತ್ತದೆ. ಇನ್ನು ಸರ್ಕಾರದ ಯೋಜನೆಗಳ ಅರ್ಜಿ ಸಲ್ಲಿಕೆಗಾಗಿ ಗ್ರಾಮ ಒನ್(Grama One) ಕೇಂದ್ರ ವಿಶೇಷವಾಗಿ ಸೇವೆಯನ್ನು ನೀಡುತ್ತದೆ. ಪ್ರತಿ ಗ್ರಾಮಗಳಲ್ಲಿಯೂ ಒಂದಾದರು ಗ್ರಾಮ ಒನ್ ಕೇಂದ್ರ ಇದ್ದೆ ಇರುತ್ತದೆ. ಈ ಗ್ರಾಮ ಒನ್ ಕೇಂದ್ರವು ಯೋಜನೆಗಳ ಅರ್ಜಿ ಸಲ್ಲಿಕೆಯ ಜೊತೆಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿಕೊಡುತ್ತದೆ.

Grama One Center
Image Credit: Belagaviinfra

ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ
ನೀವು ಸ್ವಂತ ಉದ್ಯೋಗದ ಕನಸು ಕಾಣುತ್ತಿದ್ದರೆ ಈ ಗ್ರಾಮ ಒನ್ ಕೇಂದ್ರವನ್ನು ತೆರೆಯುವ ಮೂಲಕ ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಬಹುದು. ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ ಮಾಡಲಾಗಿದೆ. ಮುಖ್ಯ ದಾಖಲೆಗಳನ್ನು ನೀಡುವ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬಹುದು. ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ.

ಈ ದಾಖಲೆಗಳ ಜೊತೆಗೆ ಅರ್ಜಿ ಸಲ್ಲಿಸಿ
ಮಡಿಕೇರಿಯ ಹೊಸ್ಕೇರಿ, ಹಾಕತ್ತೂರು ಮತ್ತು ಕರಿಕೆ, ನಿಟ್ಟೂರು, ಬಲ್ಯಮಂಡೂರು, ಕೆ.ಬಡಗ, ಬಿ.ಶೆಟ್ಟಿಗೇರಿ, ಕಿರುಗೂರು ಮತ್ತು ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ ಮತ್ತು ಸೋಮವಾರಪೇಟೆಯ ಗರ್ವಾಲೆ, ಕಾಕೋಟು ಪರಂಬು, ಬೇಟೋಳಿ ಮತ್ತು ವಿರಾಜಪೇಟೆಯ ಅಮ್ಮತ್ತಿ ತಾಲೂಕಿನ 14 ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮ ಒನ್ ಕೇಂದ್ರಗಳಿಗೆ ಆಸಕ್ತ ಫ್ರ್ಯಾಂಚೈಸ್ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Grama One Application Start
Image Credit: Gramaone

ಆಸಕ್ತ ಫ್ರಾಂಚೈಸಿಗಳು https://kal-mys.gramaone.karnataka.gov.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಫೆಬ್ರವರಿ 15 ರವರೆಗೆ ಅರ್ಜಿ ಸಲ್ಲಿಕೆಗೆ ಅನುಮತಿಸಲಾಗಿದೆ. ನಿಮ್ಮ ಊರಿನಲ್ಲಿ ನೀವು ಗ್ರಾಮ ಒನ್ ಕೇಂದ್ರವನ್ನು ತೆರೆಯುವ ಮೂಲಕ ಜನಸಾಮನ್ಯರಿಗೆ ಸೇವೆಯನ್ನು ನೀಡಬಹುದು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ಮಾಹಿತಿಯ ಜೊತೆಗೆ ದಾಖಲೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group