Property Law: ಅಜ್ಜನ ಸ್ವಂತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಎಷ್ಟು ಪಾಲಿದೆ, ಹೈಕೋರ್ಟ್ ಮಹತ್ವದ ಆದೇಶ.

ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಗೆ ಎಷ್ಟು ಪಾಲಿದೆ ಮತ್ತು ಅದು ಹೇಗೆ ವಿಭಜನೆ ಆಗುತ್ತದೆ.

Grand Father’s Property Rights: ಭಾರತೀಯ ಕಾನೂನಿನಲ್ಲಿ (Indian Law) ತಂದೆಯ ಆಸ್ತಿಯ ಹಂಚಿಕೆಯ ಕುರಿತು ಹಲವು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಆಸ್ತಿಯ ಹಂಚಿಕೆಯ ವಿಚಾರವಾಗಿ ಕಾನೂನು ವಿವಿಧ ತಿದ್ದುಪಡಿಯನ್ನು ಜಾರಿಗೊಳಿಸಿದೆ. ಇನ್ನು ತಂದೆಯ ಆಸ್ತಿಗೆ ಮಗಳ ಅಥವಾ ಮಗಳು ಸಮಾನ ಹಕ್ಕನ್ನು ಹೊಂದಿರುತ್ತಾರೆ ಎಂದು ಕಾನೂನು ಈಗಾಗಲೇ ಆದೇಶವನ್ನು ನೀಡಿದೆ.

ಇನ್ನು ತಂದೆಯ ತಂದೆ ಅಂದರೆ ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳ ಪಾಲಿನ ಬಗ್ಗೆ ಕೂಡ ಕಾನೂನಿನಲ್ಲಿ ವಿವಿಧ ನಿಯಮಗಳಿವೆ. ಇದೀಗ ಅಜ್ಜನ ಸ್ವಂತ ಆಸ್ತಿಯಲ್ಲಿ ಮೊಮ್ಮೊಕ್ಕಳಿಗೆ ಎಷ್ಟು ಪಾಲಿದೆ ಎನ್ನುವ ಬಗ್ಗೆ ಇರುವ ಕಾನೂನು ನಿಯಮವನ್ನು ತಿಳಿಯೋಣ.

Grand Father's Property Rights
Image Source: India Today

ಅಜ್ಜನ ಸ್ವಂತ ಆಸ್ತಿಯಲ್ಲಿ ಮೊಮ್ಮೊಕ್ಕಳಿಗೆ ಎಷ್ಟು ಪಾಲಿದೆ
ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳು ಸಮಾನ ಹಕ್ಕನ್ನು ಪಡೆಯುತ್ತಾರೆ. ಇನ್ನು ಪಿತ್ರಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳು ಹುಟ್ಟಿನಿಂದಲೇ ಹಕ್ಕನ್ನು ಪಡೆಯುತ್ತಾರೆ. ಇನ್ನು ಅಜ್ಜ ಖರೀದಿಸಿದ ಆಸ್ತಿಯ ಮೇಲೆ ಅಜ್ಜನ ಪತ್ನಿ ಪತಿಯ ಮರಣದ ನಂತರ ಆಸ್ತಿಯ ಹಕ್ಕನ್ನು ಹೊಂದುತ್ತಾರೆ.

ಅಜ್ಜ ಮತ್ತು ಅಜ್ಜಿ ಇಬ್ಬರ ಮರಣದ ನಂತರ ಮೊಮ್ಮಕ್ಕಳು ಆಸ್ತಿಯ ಮೇಲೆ ಹಕ್ಕನ್ನು ಪಡೆಯುತ್ತಾರೆ. ಇನ್ನು ತಲೆಮಾರಿಗೆ ಅನುಗುಣವಾಗಿ ತಾತನ ಆಸ್ತಿ ವಿಂಗಡಣೆ ಆಗಲಿದೆ. ಅಂದರೆ ತಂದೆ 50 % ಆಸ್ತಿಯನ್ನು ತಂದೆ ಪಿತ್ರಾರ್ಜಿತವಾಗಿ ಪಡೆದರೆ ಮೊಮ್ಮಕ್ಕಳು ತಮ್ಮ ಅಜ್ಜನ ಆಸ್ತಿಯಲ್ಲಿ ತಲಾ 25 % ಉತ್ತರಾಧಿಕಾರವನ್ನು ಪಡೆಯುತ್ತಾರೆ.

Grand Father's Property Rights
Image Source: Mint

ಅಜ್ಜನ ಸ್ವಯಾರ್ಜಿತ ಆಸ್ತಿಯ ಮೇಲೆ ಮೊಮ್ಮಕ್ಕಳಿಗೆ ಎಷ್ಟು ಹಕ್ಕಿದೆ
ಅಜ್ಜ ಸ್ವಂತವಾಗಿ ಗಳಿಸಿದ ಆಸ್ತಿಯಲ್ಲಿ ಅಜ್ಜ ತಮಗೆ ಇಷ್ಟವಾದಷ್ಟು ಮಾತ್ರ ಆಸ್ತಿಯನ್ನ ಮೊಮ್ಮಕ್ಕಳಿಗೆ ಕೊಡಬಹುದು. ಅಜ್ಜ ಅಥವಾ ಅಜ್ಜಿ ತಮ್ಮ ಸ್ವಇಚ್ಛೆಯಿಂದ ಮೊಮ್ಮಕ್ಕಳಿಗೆ ಆಸ್ತಿ ನೀಡಿದರೆ ಮೊಮ್ಮಕ್ಕಳು ಆಸ್ತಿಯಲ್ಲಿ ಪಾಲು ಪಡೆಯಬಹುದು. ಇನ್ನು ಅಜ್ಜ ಸ್ವಯಂ ಗಳಿಕೆಯಿಂದ ಖರೀದಿಸಿದ ಸ್ವ- ಸ್ವಾಧೀನಪಡಿಸಿಕೊಂಡ ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳು ಹಕ್ಕನ್ನು ಪಡೆಯಲು ಸಾಧ್ಯವಿಲ್ಲ.

Join Nadunudi News WhatsApp Group

Join Nadunudi News WhatsApp Group