Gratuity Rule: ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಹೈಕೋರ್ಟ್ ನಿಂದ ಸಿಹಿಸುದ್ದಿ, ಹೈಕೋರ್ಟ್ ಮಹತ್ವದ ತೀರ್ಪು

ಗುತ್ತಿದೆ ನೌಕರರ ಗ್ರಾಚ್ಯುಟಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

High Court Verdict On Govt Employees Gratuity: ದೇಶದಲ್ಲಿನ ಸರ್ಕಾರೀ ನೌಕರರಿಗೆ ಸರ್ಕಾರ ಅನೇಕ ನಿಯಮಾವಳಿಗಳನ್ನು ರೂಪಿಸಿರುತ್ತದೆ. ಸರ್ಕಾರೀ ನೌಕರರು ಸರ್ಕಾರ ವಿಧಿಸುವಂತಹ ಪ್ರತಿ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಲಿರುತ್ತದೆ. ಇನ್ನು ಸರ್ಕಾರ ಸರ್ಕಾರೀ ನೌಕರರಿಗೆ ಆಗಾಗ ಹೊಸ ಹೊಸ ನಿಯಮಗಳಲನ್ನು ಪರಿಚಯಿಸುತ್ತದೆ.

ಇನ್ನು ಸರ್ಕಾರೀ ನೌಕರರಲ್ಲಿ ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರ ವರ್ಗಗಳು ಇರುತ್ತದೆ. ನಿಮಗೆ ತಿಳಿದಿರುವ ಹಾಗೆ ಸರ್ಕಾರೀ ನೌಕರರು ನಿವೃತ್ತಿ ಹೊಂದಿದ ಬಳಿಕ ಗ್ರಾಚ್ಯುಟಿಯನ್ನು ನೀಡಲಾಗುತ್ತದೆ. ಆದರೆ ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ (Gratuity) ಅನ್ವಯವಾಗುತ್ತದೆಯೇ..? ಎನ್ನುವ ಬಗ್ಗೆ ಸಾಕಷ್ಟು ಜನರಲ್ಲಿ ಗೊಂದಲ ಉಂಟಾಗಿರಬಹುದು. ಸದ್ಯ ಭಾರತೀಯ ಹೈಕೋರ್ಟ್ ಇದೀಗ ಗುತ್ತಿಗೆ ನೌಕರರ ಗ್ರಾಚ್ಯುಟಿ ಹಕ್ಕಿನ ಬಗ್ಗೆ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

High Court Verdict On Govt Employees Gratuity
Image Credit: Tycoonstory

ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಅನ್ವಯವಾಗುತ್ತದೆಯೇ..?
ಯಾವುದೇ ಸರಕೃ ಉದ್ಯೋಗಿಯೂ ಐದು ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದರೇ ಅಂತಹ ಉದ್ಯೋಗಿಗಳಿಗೆ ಸರ್ಕಾರವು ಗೌರವಧನದ ರೂಪದಲ್ಲಿ ಗ್ರಾಚ್ಯುಟಿಯನ್ನು ನೀಡುತ್ತದೆ. ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರಿಗೆ ಸಮಾನವಾಗಿ ಗ್ರಾಚ್ಯುಟಿ ಅನ್ವಯವಾಗುತ್ತದೆಯೇ ಎನ್ನುವುದು ಪ್ರಶ್ನೆಯಾಗಿದೆ. ಸದ್ಯ ನಿವೃತ್ತ ಸರ್ಕಾರೀ ಶಾಲಾ ಶಿಕ್ಷರೊಬ್ಬರು ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಅನ್ವಯವಾಗುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಹೈಕೋರ್ಟ್ ಈ ಪ್ರಕರಣದ ತನಿಖೆ ನಡೆಸಿ ಮಹತ್ವದ ಆದೇಶ ಹೊರಡಿಸಿದೆ.

ಗುತ್ತಿಗೆ ನೌಕರರಿಗೂ ಗ್ರಾಚ್ಯುಟಿ ಅನ್ವಯವಾಗಲಿದೆ
ಸರ್ಕಾರಿ ಸೇವೆಯನ್ನು ಕಾಯಂ ಮಾಡುವ ಮೊದಲು ನೌಕರರು ದಿನಗೂಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೆ ಗುತ್ತಿಗೆ ಅವಧಿಗೆ ಸರ್ಕಾರ ಗ್ರಾಚ್ಯುಟಿ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಗುತ್ತಿಗೆ ನೌಕರರಿಗೂ ಗ್ರಾಚ್ಯುಟಿ ಅನ್ವಯವಾಗಲಿದೆ. ಕಾಯಂ ನೌಕರರು ಮತ್ತು ಗುತ್ತಿಗೆ ನೌಕರರು ಎಂಬ ತಾರತಮ್ಯ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

Govt Employees Gratuity Rules
Image Credit: Economictimes

ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಹೈಕೋರ್ಟ್ ನಿಂದ ಸಿಹಿಸುದ್ದಿ
ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ರ ನಿಯಮಗಳ ಪ್ರಕಾರ, ಗ್ರಾಚ್ಯುಟಿ ವಿಷಯದಲ್ಲಿ ಖಾಯಂ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಆದ್ದರಿಂದ, 75 ವರ್ಷ ವಯಸ್ಸಿನ ನಿವೃತ್ತ ಸರ್ಕಾರಿ ನೌಕರರಾಗಿರುವ ಅರ್ಜಿದಾರರಿಗೆ ಅವರು ದೈನಂದಿನ ಗುತ್ತಿಗೆ ನೌಕರರಾಗಿ ಕೆಲಸ ಮಾಡಿದ 10 ವರ್ಷಗಳ ಅವಧಿಯ ಗ್ರಾಚ್ಯುಟಿ ಮೊತ್ತವನ್ನು 4 ವಾರಗಳಲ್ಲಿ ಪಾವತಿಸಬೇಕು. 4 ವಾರಗಳಲ್ಲಿ ಪಾವತಿ ಮಾಡದಿದ್ದರೆ ಪ್ರತಿ ದಿನ ವಿಳಂಬಕ್ಕೆ 1000 ರೂ. ದಂಡ ಪಾವತಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ ಸೂಚಿಸಿದೆ.

Join Nadunudi News WhatsApp Group

Join Nadunudi News WhatsApp Group